ಸಿಡಿಲು ಬಡಿದ ತಂಬಿಗೆ ಹೆಸರಿನಲ್ಲಿ ವಂಚನೆಗೆ ಯತ್ನ: ಐವರು ಆರೋಪಿಗಳ ಬಂಧನ
ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಎಂದು ಹೇಳಿ ದೇವಸ್ಥಾನಕ್ಕೆ ಬರುವ ಜನರಿಗೆ ವಂಚನೆ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ರಾಣಿಬೆನ್ನೂರು (ಜು.20): ಸಿಡಿಲು ಬಡಿದ (ರೈಸ್ ಪುಲ್ಲಿಂಗ್) ತಂಬಿಗೆ ಇದೆ ಎಂದು ಹೇಳಿ ದೇವಸ್ಥಾನಕ್ಕೆ ಬರುವ ಜನರಿಗೆ ವಂಚನೆ ಮಾಡುತ್ತಿದ್ದ 5 ಜನ ಆರೋಪಿಗಳನ್ನು ಬಂಧಿಸುವಲ್ಲಿ ತಾಲೂಕಿನ ಹಲಗೇರಿ ಠಾಣೆ ಪೊಲೀಸರು ಮಂಗಳವಾರ ಯಶಸ್ವಿಯಾಗಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಓಬಳಾಪುರದ ಪುಟ್ಟರಂಗ ರಂಗಪ್ಪ(75), ಚಿತ್ರದುರ್ಗ ಜಿಲ್ಲೆ ಚಳ್ಳಕೇರಿ ತಾಲೂಕಿನ ಕೋಡಿಹಳ್ಳಿಯ ನಾಗರಾಜ ಮಲ್ಲೇಶಪ್ಪ(42), ಬಳ್ಳಾರಿ ಜಿಲ್ಲೆ ಸೊಂಡೂರ ತಾಲೂಕಿನ ಬೊಮ್ಮಗಟ್ಟಗ್ರಾಮದ ಲಕ್ಷ್ಮಣ ಲಕ್ಷ್ಮೀಪತಿ ಹುಲೆಪ್ಪ (50), ನಾಗರಾಜ ಭೀಮಪ್ಪ ಮೈಲಗಂಬರಿ (32), ಕುಮಾರಸ್ವಾಮಿ ಭೀಮಪ್ಪ (58) ಬಂಧಿತ ಆರೋಪಿಗಳು.
ಡಿಕೆಶಿ ಒಡೆತನದ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು 10ನೇ ತರಗತಿ ವಿದ್ಯಾರ್ಥಿ..!
ಇವರು ತಾಲೂಕಿನ ಕಮದೋಡ ಬಳಿಯ ಲಕ್ಕಿಕಟ್ಟೆ ಚೌಡಮ್ಮನ ದೇವಸ್ಥಾನದ ಭಕ್ತರನ್ನು ಟಾರ್ಗೇಟ್ ಮಾಡಿಕೊಂಡು ನಮ್ಮ ಬಳಿ ಸಿಡಿಲು ಬಡಿದ ತಂಬಿಗೆ ಇದೆ. ಅದಕ್ಕೆ ಸಿಡಲು ಬಡಿದಾಗ ವಿಶೇಷವಾದ ಶಕ್ತಿ ಬಂದಿದೆ. ಅದನ್ನು ಮನೆಯಲ್ಲಿಟ್ಟು ಪೂಜೆ ಮಾಡಿದರೆ, ನಿಮ್ಮ ವ್ಯಾಪಾರ ಹಾಗೂ ವ್ಯವಹಾರ ಚೆನ್ನಾಗಿ ನಡೆಯುತ್ತದೆ. ಇದರಿಂದ ಕೋಟ್ಯಂತರ ರುಪಾಯಿ ಆದಾಯ ಬರುತ್ತದೆ. ಲಕ್ಷ್ಮೀ ದೇವಿ ಬಂದು ನಿಮ್ಮ ಮನೆಯಲ್ಲಿ ಕುಳಿತುಕೊಳ್ಳುತ್ತಾಳೆ. ಒಂದು ತಂಬಿಗೆಯ ಬೆಲೆ 25 ಸಾವಿರದಿಂದ 50 ಸಾವಿರ ವರೆಗೆ ಆಗುತ್ತದೆ ಎಂದು ಹೇಳಿ ಜನರಿಗೆ ಮೋಸ ಮಾಡಲು ಯತ್ನಿಸುತ್ತಿದ್ದರು.
ಶೃಂಗೇರಿ ಶ್ರೀ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅಜರ್‌ಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಅವರಿಂದ ತಾಮ್ರದ ಪಾತ್ರೆ ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾರ್ಗದರ್ಶನದಲ್ಲಿ ಪಿಎಸ್‌ಐ ಮೇಘರಾಜ, ಕೆ.ಸಿ. ಕೋಮಲಾಚಾರ, ಸಿಬ್ಬಂದಿಯಾದ ಮಾರುತಿ ಬಣಕಾರ, ಕೃಷ್ಣ ಎಂ.ಆರ್, ವಿ.ಎಚ್. ಕೊಪ್ಪದ, ಎಂ.ಎನ್. ಗೋಣೇರ, ಎಂ.ಎನ್. ಕುಂಟಗೌಡ್ರ, ಮಾರುತಿ ಹಾಲಭಾವಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.