ಯಪ್ಪಾ! ತುಂಡುಡುಗೆ ಧರಿಸಿದ್ದಕ್ಕೆ ಸೊಸೆಯ ಮುಖದ ಮೇಲೆ ಬಿಸಿ ಬಿಸಿ ಸೂಪ್‌ ಎರಚಿದ ಮಾವ

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕ್ಸು ಎಂಬ ಸರ್‌ನೇಮ್‌ ಹೊಂದಿರೋ ಚೀನಾದ ಮಹಿಳೆಯ ಮೇಲೆ ಮಾವ ಹಲ್ಲೆ ಮಾಡಿದ್ದಾರೆ ಎಂದು ಸೊಸೆ ಆರೋಪಿಸಿದ್ದಾಳೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

chinese man throws hot soup on daughter in law beats her over too short hot pants ash

ಬೀಜಿಂಗ್ (ಜೂನ್ 20, 2023):  ಜಗತ್ತು ಎಷ್ಟೇ ಬದಲಾಗುತ್ತಿದ್ದರೂ ಹಾಗು ಆಧುನಿಕತೆ, ಸಮಾನತೆಯ ನಡುವೆಯೂ ಪುರುಷ ಪ್ರಧಾನ ಸಮಾಜ ಈಗಲೂ ಸಹ ಮುಂದುವರಿದಿದೆ. ಹಾಗೆ, ಮಹಿಳೆಯರಿಗೆ ತಮ್ಮಿಷ್ಟ ಬಂದಂತೆ ಉಡುಪು ಧರಿಸುವ ಸ್ವಾತಂತ್ರ್ಯವನ್ನೂ ಅವರ ಕುಟುಂಬಸ್ಥರು ನೀಡದ ಎಷ್ಟೋ ಪ್ರಕರಣಗಳಿವೆ. ಪಿತೃಪ್ರಭುತ್ವವು ಮಾನವೀಯತೆಯಷ್ಟೇ ಹಳೆಯದಾಗಿದ್ದು, ಅತ್ಯಂತ ಸಾಂಪ್ರದಾಯಿಕ ಸಮಾಜಗಳಲ್ಲಿ ಜನರ ಮನಸ್ಥಿತಿ ಬದಲಾಗುತ್ತಿದ್ದರೂ ಸಂಪುರ್ಣವಾಗಿ ಬದಲಾಗಿಲ್ಲ ಅನ್ನೋದಕ್ಕೆ ಈ ಲೇಖನ ಒಂದು ಉತ್ತಮ ಉದಾಹರಣೆ.

ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದಲ್ಲಿ ಕ್ಸು ಎಂಬ ಸರ್‌ನೇಮ್‌ ಹೊಂದಿರೋ ಚೀನಾದ ಮಹಿಳೆಯ ಮೇಲೆ ಮಾವ ಹಲ್ಲೆ ಮಾಡಿದ್ದಾರೆ ಎಂದು ಸೊಸೆ ಆರೋಪಿಸಿದ್ದಾಳೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ. ತಾನು ಹಾಟ್‌ ಪ್ಯಾಂಟ್‌ ಧರಿಸಿದ್ದಕ್ಕಾಗಿ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನು ಓದಿ: 2,000 ರೂ. ಪಾಕೆಟ್‌ ಮನಿ ಕೊಡ್ಲಿಲ್ಲ ಅಂತ ಅಪ್ಪನ ತಲೆ ಮೇಲೆ ಕಲ್ಲು ಎತ್ತಿಹಾಕಿ ಜಜ್ಜಿ ಕೊಲೆ ಮಾಡ್ದ!

ಡೈನಿಂಗ್ ಟೇಬಲ್‌ನಲ್ಲಿ ಮಾವ ಸರಿಯಾದ ಉಡುಪು ಧರಿಸದ ಕಾರಣ ಸೊಸೆ ಮೇಲೆ ಗದರಿದ್ದಾಳೆ ಹಾಗೂ ಅವಳ ಹಾಟ್ ಪ್ಯಾಂಟ್ "ತುಂಬಾ ಚಿಕ್ಕದಾಗಿದೆ" ಎಂದು ಹೇಳಿದರು ಎಂದು ವರದಿಯಾಗಿದೆ. ಜೂನ್ 12 ರಂದು ಈ ಘಟನೆ ನಡೆದಿದ್ದು, ಅಲ್ಲದೆ, "ನೀನು ಈ ರೀತಿ ಹೊರಗೆ ಹೋದರೆ, ಅಕ್ಕಪಕ್ಕದವರು ನಿನ್ನ ಬಗ್ಗೆ ಅವಮಾನ ಮಾಡುತ್ತಾರೆ ಎಂದು ಮಾವ ಸೊಸೆಗೆ ಸ್ಪಷ್ಟವಾಗಿ ಹೇಳಿದ್ದಾರೆಂದು ವರದಿಯಾಗಿದೆ.

ಆದರೆ, ಇದಕ್ಕೆ ಸಮರ್ಥನೆ ಮಾಡಿಕೊಂಡ ಮಹಿಳೆ, ನಾನು ನನ್ನ ಬಟ್ಟೆಗೆ ನನ್ನ ಹಣವನ್ನು ಖರ್ಚು ಮಾಡುತ್ತೇನೆ. ನನಗೆ ಇಷ್ಟ ಬಂದ ರೀತಿ ಬಟ್ಟೆ ಧರಿಸುತ್ತೇನೆ ಎಂದು ಮಾವನಿಗೆ ತಿರುಗಿ ಮಾತಾಡಿದ್ದಾಳೆ. ಸೊಸೆಯ ಈ ಮಾತು ಕೇಳಿ ಕೋಪಗೊಂಡ ಮಾವ, ಥಟ್ಟನೆ ಹಿಂಸಾತ್ಮಕವಾಗಿ ತಿರುಗಿ, ಒಂದು ಹಿಡಿ ಕಡಲೆ ಬೀಜವನ್ನು ಅವಳ ಮುಖಕ್ಕೆ ಎಸೆದರು ಮತ್ತು ಬಿಸಿ ಸೂಪಿನ ಬಟ್ಟಲನ್ನು ಅವಳ ಮೇಲೆ ಎಸೆದರು ಎಂದೂ ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಆಕೆಗೆ ಥಳಿಸಿದ್ದು, ಹಾಗೂ "ನಾನು ಇಂದು ನಿನ್ನನ್ನು ಕೊಲ್ಲುತ್ತೇನೆ’’ ಎಂದೂ ಕ್ಸು ಅವರ ಮಾವ ಬೆದರಿಕೆ ಹಾಕಿದ್ದರು ಎಂದು ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ವರದಿ ಮಾಡಿದೆ.

ಇದನ್ನೂ ಓದಿ: Crime: ಗರ್ಲ್‌ಫ್ರೆಂಡ್‌ ಜತೆ ಜಗಳವಾಡಿ ಆಟೋದಲ್ಲೇ ಕತ್ತು ಸೀಳಿ ಕೊಂದ ಪಾಪಿ!

ಇನ್ನು, ಈ ಘಟನೆಯನ್ನು ನೋಡಿದ ಮಗ, ತನ್ನ, ಪತ್ನಿಯನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಮಲಗುವ ಕೋಣೆಗೆ ಕರೆದೊಯ್ದು ಬೀಗ ಹಾಕಿದ್ದಾನೆ ಎಂದು ವರದಿಯಾಗಿದೆ. ಬಳಿಕ, ಪೊಲೀಸರಿಗೆ ಕರೆ ಮಾಡಿದ ಸೊಸೆ, ಈ ಸಂಬಂಧ ದೂರು ನೀಡಿದ್ದಾಳೆ. 

ಬಳಿಕ, ಘಟನೆ ಬಗ್ಗೆ ಮಧ್ಯ ಪ್ರವೇಶಿಸಿದ ಪೊಲೀಸರು, ನಿಮ್ಮ ಸೊಸೆಯ ಬಟ್ಟೆಗಳು ಯಾರಿಗೂ ಹಾನಿ ಉಂಟು ಮಾಡುವುದಿಲ್ಲ ಮತ್ತು ಮಾವ ಸೊಸೆಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಪೊಲೀಸರು ಆ ವ್ಯಕ್ತಿಗೆ ಹೇಳಿದ್ದಾರೆ. ಇನ್ನು, ಈ ಘಟನೆಯಿಂದ ಆಕೆಯ ಮುಖದ ಮೇಲೆ ಮೂಗೇಟು ಮತ್ತು ಗಾಯಗಳಾಗಿದ್ದು, ಆಕೆಯ ಮಾವ ಆಕೆಯನ್ನು ಕೆಟ್ಟದಾಗಿ ಥಳಿಸಿರುವಂತೆ ತೋರುತ್ತಿದೆ ಎಂಬುದು ಆನ್‌ಲೈನ್‌ನಲ್ಲಿ ಪೋಸ್ಟ್‌ ಮಾಡಿದ ವಿಡಿಯೋವೊಂದರಲ್ಲಿ ಬಯಲಾಗಿದೆ. 

ಇದನ್ನೂ ಓದಿ: ಆಶ್ರಮದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸ್ವಾಮೀಜಿ ಅರೆಸ್ಟ್‌

ಆದರೂ, ಈ ಘಟನೆ ಇಲ್ಲಿಗೇ ಮುಗಿಯದೆ, ಮಹಿಳೆಯ ಪತಿ ಕೂಡ ತಂದೆಗೆ ಬೆಂಬಲಿಸಿದ್ದು, ತನ್ನ ಹೆಂಡತಿಗೆ ಅಂತಹ ಬಟ್ಟೆಗಳನ್ನು ಧರಿಸದಂತೆ ಸೂಚಿಸಿದ್ದಾನೆ. ಈ ಬಗ್ಗೆ ವಿಡಿಯೋದಲ್ಲಿ ಪ್ರತಿಕ್ರಿಯೆ ನೀಡಿದ ಮಹಿಳೆ, "ಅವನು ಇದೇ ರೀತಿಯ ಮನೋಭಾವವನ್ನು ಹೊಂದಿದ್ದರೆ, ನಾನು ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಬಹುದು" ಎಂದು ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲೂ ಕ್ಸು ಅವರ ಮಾವನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. 

ಇದನ್ನೂ ಓದಿ: ಮತ್ತೊಂದು ನಿರ್ಭಯಾ ಕೇಸ್‌ ಆತಂಕ: ಕಾರಿನಲ್ಲಿ ಮಧ್ಯರಾತ್ರಿ ಕೂಗಿಕೊಂಡ ಮಹಿಳೆ; ಚೇಸ್‌ ಮಾಡಿದ್ರೂ ಸಿಗದೆ ಪರಾರಿ!

Latest Videos
Follow Us:
Download App:
  • android
  • ios