ತನ್ನ ಸೋದರತ್ತೆ ಮನೆ ಬಳಿ ಆಟವಾಡುವಾಗ ನಾಪತ್ತೆಯಾದ ನಾಲ್ಕು ವರ್ಷಗಳ ಬಾಲಕಿಗೆ ನಗರದಲ್ಲಿ ಆಂಧ್ರಪ್ರದೇಶದ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇನ್ನೊಂದು ಮೈಸೂರಿನಲ್ಲಿ ನಡೆದಿರುವ ಇನ್ನೊಂದು ಪ್ರಕರಣದಲ್ಲಿ ಇಬ್ಬರು ಮಕ್ಕಳು ಸಮೇತ ದಂಪತಿಗಳು ನಾಪತ್ತೆಯಾಗಿದ್ದಾರೆ

ಬೆಂಗಳೂರು (ಜು.14): ತನ್ನ ಸೋದರತ್ತೆ ಮನೆ ಬಳಿ ಆಟವಾಡುವಾಗ ನಾಪತ್ತೆಯಾದ ನಾಲ್ಕು ವರ್ಷಗಳ ಬಾಲಕಿಗೆ ನಗರದಲ್ಲಿ ಆಂಧ್ರಪ್ರದೇಶದ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆ ಪೇನುಕೊಂಡದ ಶೇಕ್‌ ಖಲೀಲ್‌ ಎಂಬುವರ ಪುತ್ರಿ ಶೇಕ್‌ ಷಾಫಿಯಾ (4) ಕಣ್ಮರೆಯಾಗಿದ್ದು, ಬಾಲಕಿ ಪತ್ತೆಗೆ ಸಹಕರಿಸುವಂತೆ ಬೆಂಗಳೂರು ಪೊಲೀಸರಿಗೆ ಆಂಧ್ರಪ್ರದೇಶದ ಪೊಲೀಸರು ಮನವಿ ಮಾಡಿದ್ದಾರೆ. ಬಾಲಕಿ ಮೂರು ಅಡಿ ಎತ್ತ ಇದ್ದು, ಬಿಳಿ ಮೈ ಬಣ್ಣ ಹೊಂದಿದ್ದಾಳೆ. ಮೂಗು ಹಾಗೂ ಬಲಗೈ ಮೇಲೆ ಮಚ್ಚೆಗಳಿವೆ. ಜೂ.12ರಂದು ತನ್ನ ಸೋದರತ್ತೆ ಮನೆ ಬಳಿ ಆಟವಾಡುವಾಗ ಆಕೆ ಕಾಣೆಯಾಗಿದ್ದಾಳೆ. ಷಾಫಿಯಾಳ ಬಗ್ಗೆ ಮಾಹಿತಿ ಇದ್ದರೆ ಕೂಡಲೇ ಮೊ.94407 96841, 94407 96842, ಬಾಲಕಿ ತಂದೆ- 86886 78958 ಹಾಗೂ ಪೊಲೀಸ್‌ ನಿಯಂತ್ರಣ ಕೊಠಡಿ (112)ಗೆ ಕರೆ ಮಾಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಮಾಸ್ಟರ್‌ ಆನಂದ್‌ ಪುತ್ರಿ ಲಿಟಲ್‌ಸ್ಟಾರ್‌ ವಂಶಿಕಾಗೆ ಆರಂಭದಲ್ಲಿಯೇ ವಿಘ್ನ!

ಇಬ್ಬರು ಮಕ್ಕಳ ಸಮೇತ ದಂಪತಿಗಳು ನಾಪತ್ತೆ!

ಮೈಸೂರು (ಜು.14) ಸಾಲ ಮಾಡಿಕೊಂಡಿದ್ದರಿಂದ ತಮ್ಮಿಬ್ಬರು ಮಕ್ಕಳೊಡನೆ ದಂಪತಿ ನಾಪತ್ತೆಯಾಗಿದ್ದಾರೆ. ಉದಯಗಿರಿ ನಿವಾಸಿ ರೇಷ್ಮಾಬಾನು ಅವರ ಅಳಿಯ ಶೇಕ್‌ ಜಿಷಾನ್‌ (34), ಪುತ್ರಿ ಬಿ. ಹಾಜೀರಾ (25), ನೂರ್‌ ಅಫ್‌್ಜ (6) ಮತ್ತು ಶೇಕ್‌ ಜೈಯಾನ್‌ (3) ನಾಪತ್ತೆಯಾದವರು.

ಮೇ 28 ರಂದು ನಾಲ್ವರು ಆಟೋದಲ್ಲಿ ತೆರಳಿದ್ದಾರೆ. ಇದನ್ನು ನೋಡಿದ ರೇಷ್ಮಾ ಬಾನು ಅವರು ಪ್ರಶ್ನಿಸಿದಾಗ ಆಸ್ಪತ್ರೆಗೆ ಹೋಗುತ್ತಿರುವುದಾಗಿ ತಿಳಿಸಿದ್ದು, ನಂತರ ಅವರ ಮೊಬೈಲ್‌ ಸ್ವಿಚ್‌ಆಫ್‌ ಆಗಿದೆ.

5.8 ಅಡಿ ಎತ್ತರದ ಶೇಕ್‌ ಜಿಷಾನ್‌, ಕೋಲು ಮುಖ, ದೃಢಕಾಯ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಐಟಿಐ ವ್ಯಾಸಂಗ ಮಾಡಿದ್ದಾರೆ. ಇವರು ಕನ್ನಡ ಮತ್ತು ಉರ್ದು ಮಾತನಾಡಬಲ್ಲರು. ಬಿ. ಹಾಜೀರಾ 5.4 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣವಿದ್ದು, ಬಿಎಡ್‌ ಓದಿದ್ದಾರೆ. ನೂರ್‌ ಅಫ್‌್ಜ 3 ಅಡಿ ಎತ್ತರ, ಕೋಲುಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣವಿದ್ದಾಳೆ. ಶೇಕ್‌ ಜೈಯಾನ್‌ 3 ವರ್ಷ 2.5 ಅಡಿ ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣವಿದ್ದಾನೆ. ಮಕ್ಕಳಿಬ್ಬರೂ ಉರ್ದು ಮಾತನಾಡುತ್ತಾರೆ.

3 ತಿಂಗಳ ಹಿಂದೆ ದೇವಸ್ಥಾನಕ್ಕೆ ಹೋದ ಗಂಡ-ಪುಟ್ಟ ಕಂದಮ್ಮ ನಾಪತ್ತೆ, ಮತ್ತೊಬ್ಬಾಕೆಯ ಜತೆ ಓಡಿ ಹೋದನಾ ಗಂಡ!

ಈ ಚಹರೆಯುಳ್ಳವರು ಕಂಡುಬಂದಲ್ಲಿ ಸಮೀಪದ ಪೊಲೀಸ್‌ ಠಾಣೆಗೆ ತಿಳಿಸಬೇಕು. ಈ ಸಂಬಂಧ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂ. 0821-2418309 ಸಂಪರ್ಕಿಸಬಹುದು.