Hassan Crime: ನರ್ಸ್ ವೇಷದಲ್ಲಿ ಬಂದು ಸರ್ಕಾರಿ ಆಸ್ಪತ್ರೆಯಿಂದ ಮಗು ಅಪಹರಣ
* ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ
* ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದ ಯಾಸ್ಮಿನ್
* ಮಗು ಎತ್ತಿಕೊಂಡು ಓಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಅರಕಲಗೂಡು(ಮಾ.15): ನರ್ಸ್ ವೇಷದಲ್ಲಿ ಬಂದು ನವಜಾತ ಶಿಶುವೊಂದನ್ನು ಅಪಹರಣ ಮಾಡಿರುವ ಘಟನೆ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಅಸ್ಸಾಂ(Assam) ಮೂಲದ ಯಾಸ್ಮಿನ್ ಮಗು ಕಳೆದುಕೊಂಡವರು. ಯಾಸ್ಮಿನ್ ಭಾನುವಾರ ರಾತ್ರಿ ಸರ್ಕಾರಿ ಆಸ್ಪತ್ರೆಯಲ್ಲಿ(Government Hospital) ಗಂಡು ಮಗುವಿಗೆ ಜನ್ಮ ನೀಡಿದ್ದರು. ರಾತ್ರಿ 10.50ರ ವೇಳೆಗೆ ರೋಗಿಗಳ ಸೋಗಿನಲ್ಲಿ ಆಸ್ಪತ್ರೆಗೆ ಆರೋಪಿಗಳು(Accused) ಆಗಮಿಸಿದ್ದು, ತಡರಾತ್ರಿ 12.30ರ ತನಕ ಎಲ್ಲರ ಚಲನವಲನ ಗಮಿಸಿದ್ದಾರೆ. ಈ ವೇಳೆ ನರ್ಸ್ ವೇಷದಲ್ಲಿ ವಾರ್ಡ್‌ಗೆ ಬಂದ ಆರೋಪಿಯೊಬ್ಬಳು, ಔಷಧಿ ತರುವಂತೆ ಚೀಟಿಯೊಂದನ್ನು ಯಾಸ್ಮಿನ್ ಪತಿಗೆ ನೀಡಿದ್ದಾಳೆ. ಆತ ವಾರ್ಡ್‌ನಿಂದ ಆಚೆ ತೆರಳುತ್ತಿದ್ದಂತೆ ಕ್ಷಣ ಮಾತ್ರದಲ್ಲಿ ಮಗುವನ್ನು ಎತ್ತಿಕೊಂಡು ಆರೋಪಿ, ಆಸ್ಪತ್ರೆಯ ಹಿಂಬಾಗಿಲಿನಿಂದ ಪರಾರಿ ಆಗಿದ್ದಾಳೆ. ಸಿಸಿಟೀವಿಯಲ್ಲಿ(CCTV) ದೃಶ್ಯಗಳು ಸೆರೆಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.
Vijayapura Kidnap Case: 8 ಗಂಟೆಯಲ್ಲೇ ಐವರು ಅಪಹರಣಕಾರರ ಹೆಡೆಮುರಿ ಕಟ್ಟಿದ ಪೊಲೀಸರು
ಆರೋಪಿ ಮಗುವನ್ನು ಕದ್ದ ಬಳಿಕ, ಇನ್ನುಳಿದ ಇಬ್ಬರು ಆರೋಪಿಗಳು ಆಸ್ಪತ್ರೆಯಲ್ಲೇ ಇದ್ದು ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಅಪಹರಣವಾದ ಮಗು ಪಾಲಕರ ಮಡಿಲಿಗೆ
ಹಾವೇರಿ(Haveri): ಹಾನಗಲ್ಲಿನಲ್ಲಿ ನಡೆದ ಮಗು ಅಪಹರಣ(Kidnap)ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ(Arrest), ಮಗುವನ್ನು(Child) ಪಾಲಕರ ಮಡಿಲಿಗೆ ಒಪ್ಪಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣಗಳ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಹನುಮಂತರಾಯ, ಫೆ. 27 ರಂದು ಹಾನಗಲ್ಲ(Hanagal) ಪಟ್ಟಣದ ಇಂದಿರಾ ನಗರದ ತನ್ನ ಮನೆ ಎದುರು ಆಟವಾಡುತ್ತಿದ್ದ 2 ವರ್ಷದ ಮಗುವನ್ನು ಅಪರಿಚಿತರಿಬ್ಬರು ಅಪಹರಣ ಮಾಡಿಕೊಂಡು ಹೋದ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಸಿದಂತೆ 3 ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ಆರೋಪಿತರು ಹಿರೇಕೆರೂರಿನಲ್ಲಿ ಬೈಕ್ ಕಳ್ಳತನ ಮಾಡಿಕೊಂಡು ಬಂದು ಮಗುವನ್ನು ಅಪಹರಿಸಿದ್ದಾರೆ. ಮಾ. 10 ರಂದು ಆರೋಪಿಗಳು ಲಕ್ಷ್ಮೇಶ್ವರದಲ್ಲಿ ಕಳ್ಳತನ(Theft) ಮಾಡಲಾಗಿದ್ದ ಮೊಬೈಲ್‌ನಿಂದ ಮಗುವಿನ ಪಾಲಕರಿಗೆ ಕರೆ ಮಾಡಿ 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿದರು.
ಮಗುವಿನ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ ತಕ್ಷಣ ತನಿಖೆಯನ್ನು ಚುರುಕುಗೊಳಿಸಿದಾಗ ಆರೋಪಿಗಳು ಮಗುವನ್ನು ಹಾಸನ ಜಿಲ್ಲೆ ಅರಸೀಕೆರೆ ಸಮೀಪದ ಜಾವಗಲ್ಲ ದರ್ಗಾದಲ್ಲಿ ಬಚ್ಚಿಟ್ಟಿರುವುದು ತಿಳಿದುಬಂತು. ಆರೋಪಿಗಳು ವಾಪಾಸ್ ಬರುತ್ತಿದ್ದ ವೇಳೆ ಹರಿಹರ ರೈಲ್ವೆ ನಿಲ್ದಾಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯಾಂಶವನ್ನು ಒಪ್ಪಿಕೊಂಡಿದ್ದಾರೆ. ಬಳಿಕ ಮಗುವನ್ನು ರಕ್ಷಣೆ ಮಾಡಿ, ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪೋಷಕರಿಗೆ ಒಪ್ಪಿಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದರು.
ಕುರಿಗಾಹಿ ಕೊಲೆ:
ಕುರಿಗಾಹಿಯನ್ನು ಕೊಲೆ(Murder) ಮಾಡಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಸಿದಂತೆ ಹಾವೇರಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹರಿಹರ(Harihara) ತಾಲೂಕು ಬಾನುವಳ್ಳಿ ಗ್ರಾಮದ ನಾಗರಾಜ ತಂದೆ ಬಲರಾಮಪ್ಪ ಆಡಿನವರ ಕೊಲೆಯಾದ ವ್ಯಕ್ತಿ.
Kidnap Case: ಆಶ್ರಯ ನೀಡುವ ನೆಪದಲ್ಲಿ ನವಜಾತು ಶಿಶು ಅಪಹರಿಸಿದ ಸ್ವಾಮೀಜಿ: ಮೂವರ ವಿರುದ್ಧ ಪ್ರಕರಣ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ನೀಡಿದ ದೂರಿನನ್ವಯ ತನಿಖೆಯನ್ನು ಆರಂಭಿಸಲಾಯಿತು. ಹರಿಹರ ತಾಲೂಕು ಬಾನುವಳ್ಳಿ ಗ್ರಾಮದವರೇ ಆದ ದೇವರಾಜ ಬಲರಾಮಪ್ಪ ಕೋಣನತಲೆ ಹಾಗೂ ನಾರಾಯಣ ಬಲರಾಮಪ್ಪ ಕೊಣನತೆಲೆ ಎಂಬ ಸಹೋದರರು ಕೊಲೆಗೈದಿರುವುದು ಗೊತ್ತಾಯಿತು.
ಆರೋಪಿಗಳು ವಿವಿಧ ಕಾರಣದಿಂದಾಗಿ ಕುರಿಗಾಹಿ ತಲೆಗೆ ಕೊಡಲಿಯಿಂದ ಹೊಡೆದು ಹತ್ಯೆ ಮಾಡಿದ್ದು, ಬಳಿಕ ಬೈಕ್ ಅಪಘಾತ ಎನ್ನುವಂತೆ ಬಿಂಬಿಸುವ ಪ್ರಯತ್ನವನ್ನು ಮಾಡಿದ್ದರು. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಿದರು.
ಬೆಳ್ಳಿ, ಬಂಗಾರ ಕಳ್ಳತನ:
ಬ್ಯಾಡಗಿ ಶಹರದ ದಾಸರ ಓಣಿಯಲ್ಲಿರುವ ಮನೆಯೊಂದರಲ್ಲಿ ಸುಮಾರು 3 ಲಕ್ಷಗಳ ಬೆಳ್ಳಿ, ಬಂಗಾರ ಹಾಗೂ ನಗದು ಕಳ್ಳತನವಾಗಿರುವ ಕುರಿತು ಮಾ. 4 ರಂದು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತಗತಿಯಲ್ಲಿ ಪೊಲೀಸ್ ಇಲಾಖೆ ತನಿಖೆ ನಡೆಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನೋರ್ವ ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗಿದೆ. ಆರೋಪಿಯಿಂದ ಕಳ್ಳತನವಾದ ಆಭÜರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಈ ವೇಳೆ ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಸಂತೋಷ, ಡಿವೈಎಸ್‌ಪಿ ಶಂಕರ ಮಾರಿಹಾಳ, ಶಿಗ್ಗಾಂವಿ ಡಿವೈಎಸ್‌ಪಿ ಒ.ಬಿ. ಕಲ್ಲೇಶಪ್ಪ, ಡಿಎಸ್‌ಪಿ ಡಿಸಿಆರ್‌ಬಿ ಎಂ.ಎಸ್. ಪಾಟೀಲ ಇದ್ದರು.