ಚಿಕ್ಕಮಗಳೂರಿನಲ್ಲಿ ಲವ್ ಮ್ಯಾರೇಜ್ ಆಗಿ 2 ಮಕ್ಕಳಾದ ಬಳಿಕ ಮತ್ತೊಂದು ಪ್ರೀತಿಯಲ್ಲಿ ಬಿದ್ದ ಮಹಿಳೆ ತನ್ನ ಗಂಡನನ್ನೇ ಕೊಂದಿರುವ ಘಟನೆ ನಡೆದಿದೆ. ಲವರ್ ಜೊತೆ ಸೇರುವ ಸಲುವಾಗಿ ಗಂಡನನ್ನು ಕೊಲ್ಲಿಸಲು ಸುಪಾರಿ ನೀಡಿದ್ದಳು. ಪೊಲೀಸರ ವಿಚಾರಣೆಯಲ್ಲಿ ಮಹಿಳೆಯೇ ಹಂತಕಿ ಅನ್ನೋದು ಸಾಬೀತಾಗಿದೆ.
ಚಿಕ್ಕಮಗಳೂರು (ಮೇ.26): ಲವ್ ಮ್ಯಾರೇಜ್ ಆಗಿ 2 ಮಕ್ಕಳಾದ ಬಳಿಕ ಮತ್ತೊಂದು ಪ್ರೀತಿಯಲ್ಲಿ ಬಿದ್ದ ಮಹಿಳೆ ತನ್ನ ಗಂಡನನ್ನೇ ಕೊಂದಿರುವ ಘಟನೆ ನಡೆದಿದೆ. ಈಗ ಪ್ರೀತಿ ಮಾಡುತ್ತಿರುವ ಯುವಕನ ಜೊತೆ ಸೇರುವ ಸಲುವಾಗಿ, ಗಂಡನನ್ನೇ ಮಹಿಳೆ ಕೊಲೆ ಮಾಡಿದ್ದಾಳೆ.
ಲವರ್‌ಗೆ ಸುಪಾರಿ ನೀಡಿ ಗಂಡನನ್ನು ಕೊಲ್ಲಿಸಿರುವ ಘಟನೆ ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ಕರಗುಂದಲ್ಲಿ ನಡೆದಿದೆ. ಮಹಿಳೆಯನ್ನು ಕಮಲಾ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯನ್ನು ಈಕೆಯ ಪತಿ 35 ವರ್ಷದ ಸುದರ್ಶನ್ ಎನ್ನಲಾಗಿದೆ. ಸುದರ್ಶನ್ ಮತ್ತು ಕಮಲ 10 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಜನಿಸಿದ್ದರು.
ಇಬ್ಬರು ಮಕ್ಕಳಾದ ಬಳಿಕ ಕಮಲಾಳಿಗೆ ಶಿವರಾಜ್ ಎಂಬುವನ ಜೊತೆ ಮತ್ತೊಂದು ಪ್ರೇಮವಾಗಿದೆ. ಲವರ್ ಜೊತೆ ಸೇರುವ ಸಲುವಾಗಿ ಗಂಡನನ್ನೇ ಕೊಲ್ಲಲು ಕಮಲಾ ಸುಪಾರಿ ನೀಡಿದ್ದಳು.
ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿ ಹೆಣವನ್ನ ಕರಗುಂದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದರು. ಎನ್.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈಗ ಎನ್.ಆರ್.ಪುರ ಪೊಲೀಸರಿಂದ ಕಮಲಾ ಸೇರಿ ಮೂವರ ಬಂಧನವಾಗಿದೆ.
ಗಂಡನನ್ನು ತಾನೇ ಕೊಲೆ ಮಾಡಿದ್ದಲ್ಲದೆ, ಗಂಡನ ಸಾವಿಗೆ ಠಾಣೆಯಲ್ಲಿ ಕಮಲಾ ದೂರು ಕೂಡ ನೀಡಿದ್ದಳು. ಪೊಲೀಸರ ವಿಚಾರಣೆಯಲ್ಲಿ ಅವಳೇ ಹಂತಕಿ ಅನ್ನೋದು ಸಾಬೀತಾಗಿದೆ.
