*ಕಣ್ಣಲ್ಲಿ‌ ಕಾರದಪುಡಿ ಎರಚಿ ಹಣ ದರೋಡೆ ನಾಟಕವಾಡಿ ಪೊಲೀಸರ ದಿಕ್ಕು ತಪ್ಪಿಸಿದ್ದ ಲಾರಿ ಚಾಲಕ.*36 ಗಂಟೆಯಲ್ಲೆ ಪ್ರಕರಣ ಬೇಧಿಸಿದ ಚಿಕ್ಕೋಡಿ ಪೊಲೀಸರು.*12 ವರ್ಷಗಳಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲಿಕನಿಗೆ ಮೋಸ.

ಚಿಕ್ಕೋಡಿ (ಏ. 17): ಡೈರಿಗಳಿಗೆ ಹತ್ತಿಕಾಳು ಹಿಂಡಿ ಸ್ಟಾಕ್ ಸಪ್ಲೈ ಮಾಡಿ ಬಂದಿದ್ದ ಹಣವನ್ನು, ಕಣ್ಣಲ್ಲಿ ಖಾರ ಎರಚಿ ಯಾರೋ ದರೋಡೆ ಮಾಡಿದ್ದಾರೆಂದು ನಾಟಕವಾಡಿದ್ದ ಚಾಲಕ ಆನಂದನನ್ನು ಪೋಲಿಸರು ಬಂಧಿಸಿದ್ದಾರೆ. 12 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಂಪನಿ ಮಾಲಿಕನಿಗೆ ಆನಂದ ಮೋಸ ಮಾಡಿದ್ದು ಕಣ್ಣಲ್ಲಿ‌ ಕಾರದಪುಡಿ ಎರಚಿ ಹಣ ದರೋಡೆ ಮಾಡಿದ್ದಾರೆ ಎಂದು ಸುಳ್ಳು ಹೇಳಿದ್ದ.ಕಳೆದ ಶುಕ್ರವಾರದಂದು ಮಧ್ಯಾಹ್ನ ಹಣ ದರೋಡೆಯಾಗಿದೆ ಎಂದು ಆನಂದ್ ಚಿಕ್ಕೋಡಿ ಪೊಲೀಸರಿಗೆ ದೂರು ನೀಡಿದ್ದ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆದರೆ ಪೊಲೀಸರಿಗೆ ಆನಂದ ದಿಕ್ಕು ತಪ್ಪಿಸಿದ್ದು, ವಿಚಾರಣೆಯಲ್ಲಿ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ತನ್ನ ವೈಯಕ್ತಿಕ ಸಾಲಕ್ಕಾಗಿ ದರೋಡೆ ನಾಟಕ ಮಾಡಿದ್ದು, 8 ಲಕ್ಷ 52 ಸಾವಿರ ರೂಪಾಯಿ ದರೋಡೆಯಾಗಿದೆ ಎಂದು ಮನೆಯಲ್ಲಿ ಮುಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ತಾಲೂಕಿನ ಬೆಳಕುಡ ಕ್ರಾಸ್ ಬಳಿ ನಾಲ್ಕು ಜನ ಕಣ್ಣಲ್ಲಿ ಕಾರ ಎರಚಿ ದರೋಡೆ ಮಾಡಿದ್ದಾರೆಂದು ಆನಂದ್ ನಾಟಕವಾಡಿದ್ದ. 

ಇದನ್ನೂ ಓದಿ:ಮನೆಗೆ ನುಗ್ಗಿದ ಕಳ್ಳನೊಂದಿಗೆ ಗುದ್ದಾಡಿ ಹಿಡಿದ ಗೃಹಿಣಿ..!

36 ಗಂಟೆಯಲ್ಲೇ ಚಿಕ್ಕೋಡಿ ಪೊಲೀಸರು ಪ್ರಕರಣ ಬೇಧಿಸಿದ್ದು, ಲಾರಿ ಚಾಲಕ ಆನಂದ ಮಲ್ಲಾಡಿಯನ್ನು ಬಂಧಿಸಿದ್ದಾರೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕೋಡಿ ಕಾಗವಾಡ ತಾಲೂಕಿನ ವಿವಿಧ ಗ್ರಾಮಗಳ ಹಾಲಿನ ಡೈರಿಗಳಿಗೆ ಆನಂದ್ ಹತ್ತಿಕಾಳು ಹಿಂಡಿ (ದನಗಳ ಆಹಾರ) ಸಪ್ಲೈ ಮಾಡುತ್ತಿದ್ದ.