ಅಪ್ರಾಪ್ತರ ಲವ್ವಿ-ಡವ್ವಿ, ಪರೀಕ್ಷೆಯೆಂದು ದೂರವಿಟ್ಟ ಪ್ರಿಯತಮೆ, ಸೂಸೈಡ್‌ನಲ್ಲಿ ಪ್ರೀತಿ ಅಂತ್ಯಗೊಳಿಸಿದ ಯುವಕ!
ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮನನೊಂದು ಲಾರಿಗೆ ಸಿಕ್ಕಿ ಅಪ್ರಾಪ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕಿನ ಬೀಚ್ಗಾನಹಳ್ಳಿ ಕ್ರಾಸ್ ಬಳಿ ನಡೆದಿದೆ.
ರವಿಕುಮಾರ್ ವಿ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಬಳ್ಳಾಪುರ (ಏ.11): ಅಪ್ರಾಪ್ತ ಬಾಲಕಿಯನ್ನ ಪ್ರೀತಿಸಿ ಮನನೊಂದು ಲಾರಿಗೆ ಸಿಕ್ಕಿ ಅಪ್ರಾಪ್ತ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ, ಗುಡಿಬಂಡೆ ತಾಲೂಕಿನ ಬೀಚ್ಗಾನಹಳ್ಳಿ ಕ್ರಾಸ್ ಬಳಿ ನಡೆದಿದೆ. ಬೀಚಗಾನಹಳ್ಳಿ ಗ್ರಾಮದ ಮನೋಹರ್ 17 ವರ್ಷ ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕ ಎಂದು ತಿಳಿದಿದೆ. ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ಅದೇ ಗ್ರಾಮದ ಮನೋಹರ್ ಲವ್ ನಲ್ಲಿ ತೇಲಾಡುತ್ತಿದ್ದ. ಅಪ್ರಾಪ್ತ ಬಾಲಕಿ ಮನೋಹರ್ ನನ್ನ ಅವಾಯ್ಡ್ ಮಾಡುತ್ತಿದ್ದಳು. ಹೀಗಾಗಿ ಮನನೊಂದ ಮನೋಹರ್ ಕೈ ಮೇಲೆ ಬ್ಲೇಡ್ನಿಂದ ಕೊಯ್ದುಕೊಂಡು ರಕ್ತಸ್ರಾವದಿಂದ ಬಳಲಿದ್ದಾನೆ. ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ವೇಳೆ ಮನೋಹರ್ ಪ್ರಿಯತಮೆ ಕೂಡ ಜೊತೆಯಲ್ಲೇ ಇದ್ದಳು ಅಂತ ಪೋಷಕರು ಆರೋಪಿಸಿದ್ದಾರೆ.
ಕೊಡಗು ಜಿಪಂ ಸಿಇಒ ಆಕಾಶ್ ವಿರುದ್ಧ ವರದಕ್ಷಿಣೆ ಕಿರುಕುಳ ಕೇಸ್: ಐಎಎಸ್ ಆಧಿಕಾರಿಗೆ
ಬಾಲಕಿಯರ ಹಾಸ್ಟೆಲ್‌ನಲ್ಲೇ ಪ್ರಿಯತಮೆಯನ್ನ ಭೇಟಿಯಾಗುತ್ತಿದ್ದ ಮನೋಹರ್:
ಬಾಲಕಿಯರ ಹಾಸ್ಟೆಲ್ ನಲ್ಲಿ ಲವ್ವಿ ಡವ್ವಿ ಜೊತೆಗೆ ಸಲುಗೆಯಿಂದ ಇರುವ ಫೋಟೋಗಳು ಕೂಡ ವೈರಲ್ ಆಗಿದ್ದು, ಹಾಸ್ಟೆಲ್ ನಲ್ಲಿ ಮನೋಹರ್ ಆಕೆಯನ್ನು ಭೇಟಿ ಮಾಡಲು ಹೇಗೆ ಸಾಧ್ಯವಾಯ್ತು ಎಂಬ ಪ್ರಶ್ನೆ ಕಾಡುತ್ತಿದೆ. ಇನ್ನೂ ಕಳೆದ ಎರಡು ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು ಹಾಸ್ಟೆಲ್ ಬಳಿಯೇ ಬಂದು ಆಕೆಯನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ, ಆದರೆ ಇತ್ತೀಚಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸಿದ್ದಳಾಗುತ್ತಿದ್ದ ಪ್ರಿಯತಮೆ ಮನೋಹರ್ ನನ್ನ ಅವಾಯ್ಡ್ ಮಾಡಿದ್ದಳು ಎನ್ನಲಾಗಿದೆ. ಇದರಿಂದ ಬೇಸರಗೊಂಡ ಮನೋಹರ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್ ನೆರವಿನಿಂದ ಹತ್ಯೆ!
ಕಾಲೇಜು ಬಿಟ್ಟು ಕ್ಲೀನರ್ ಕೆಲಸ ಮಾಡಿಕೊಂಡಿದ್ದ ಮನೋಹರ್
ಮನೋಹರ್ ತಂದೆ ಕೂಡ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ತಾಯಿ ಕೂಲಿ ಮಾಡಿ ಮಗನನ್ನ ಓದಿಸಲು ಕಾಲೇಜಿಗೆ ಸೇರಿಸಿದಳು. ಆದರೆ ಮನೋಹರ್ ಕಾಲೇಜನ್ನು ಅರ್ಧಕ್ಕೆ ನಿಲ್ಲಿಸಿ ಕ್ಲೀನರ್ ಕೆಲಸ ಮಾಡಿಕೊಂಡು ಹಣ ಸಂಪಾದನೆ ಮಾಡುತ್ತಿದ್ದ, ಬಾಲಕಿಯ ಪರಿಚಯವಾಗಿ ಅದು ಪ್ರೇಮಕ್ಕೆ ತಿರುಗಿತ್ತು. ಈ ಸಂಬಂಧ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.