ಆಸ್ತಿಗಾಗಿ ಅತ್ತೆ - ಮಾವನನ್ನೇ ಕೊಲೆ ಮಾಡಿದ ರಾಕ್ಷಸಿ ಸೊಸೆ: ಬಾಯ್‌ಫ್ರೆಂಡ್ ನೆರವಿನಿಂದ ಹತ್ಯೆ!
70 ರ ಹರೆಯದ ಇಬ್ಬರು ಹಿರಿಯ ನಾಗರಿಕರು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಸೊಸೆ ಮೋನಿಕಾ ಕೊಲೆ ಮಾಡಲು ಇಬ್ಬರು ಪುರುಷರ ಸಹಾಯವನ್ನು ಕೋರಲಾಗಿದೆ. ಈ ಇಬ್ಬರಲ್ಲಿ ಒಬ್ಬರು ಆಕೆಯ ಬಾಯ್‌ಫ್ರೆಂಡ್ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಏಪ್ರಿಲ್ 11, 2023): ಅತ್ತೆ - ಮಾವ ಎಂದರೆ ಸೊಸೆಗೆ ಎರಡನೇ ತಾಯಿ ಹಾಗೂ ತಂದೆ ಎಂದು ಹೇಳಲಾಗುತ್ತದೆ. ಆದರೆ, ಆಸ್ತಿಯಾಸೆಗಾಗಿ ಸ್ವಂತ ಅತ್ತೆ - ಮಾವನನ್ನೇ ರಾಕ್ಷಸಿ ಸೊಸೆ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ವರದಿಯಾಗಿದೆ. ಹೌದು, ಇಬ್ಬರು ಸಹಚರರ ನೆರವಿನೊಂದಿಗೆ ವೃದ್ಧ ದಂಪತಿಯನ್ನು ಅವರ ಸೊಸೆ ಮೋನಿಕಾ ಭಾನುವಾರ ದೆಹಲಿಯಲ್ಲಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
70 ರ ಹರೆಯದ ಇಬ್ಬರು ಹಿರಿಯ ನಾಗರಿಕರು ದೆಹಲಿಯ ಗೋಕುಲಪುರಿ ಪ್ರದೇಶದಲ್ಲಿ ತಮ್ಮ ಮಗ, ಸೊಸೆ ಮತ್ತು ಮೊಮ್ಮಕ್ಕಳೊಂದಿಗೆ ವಾಸಿಸುತ್ತಿದ್ದರು. ಅವರ ಸೊಸೆ ಮೋನಿಕಾ ಕೊಲೆ ಮಾಡಲು ಇಬ್ಬರು ಪುರುಷರ ಸಹಾಯವನ್ನು ಕೋರಲಾಗಿದೆ. ಈ ಇಬ್ಬರಲ್ಲಿ ಒಬ್ಬರು ಆಕೆಯ ಬಾಯ್‌ಫ್ರೆಂಡ್ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕುಡುಕ ಪತಿ ಕಾಟಕ್ಕೆ ಬೇಸತ್ತು 3 ಮಕ್ಕಳನ್ನು ನದಿಗೆ ತಳ್ಳಿ ತಾನೂ ಆತ್ಮಹತ್ಯೆ ಮಾಡ್ಕೊಂಡ ಮಹಿಳೆ..!
ಮಗ ಹಾಗೂ ಸೊಸೆ ಜತೆಗೆ ಅತ್ತೆ ಹಾಗೂ ಮಾವ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಸರ್ಕಾರಿ ಶಾಲೆಯ ನಿವೃತ್ತ ಉಪ ಪ್ರಾಂಶುಪಾಲರಾದ ವೃದ್ಧ ರಾಧೇಶ್ಯಾಮ್ ವರ್ಮಾ ಅವರು ತಮ್ಮ ಪತ್ನಿಯೊಂದಿಗೆ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದರೆ, ಮೋನಿಕಾ, ಅವರ ಪತಿ ಮತ್ತು ಅವರ ಮಗ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು.
ಭಾನುವಾರ ಸಂಜೆ 7 ಗಂಟೆಗೆ, ಮೋನಿಕಾ ತನ್ನ ಗೆಳೆಯ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಮನೆಯ ಟೆರೇಸ್‌ಗೆ ಕರೆದೊಯ್ದರು, ಅಲ್ಲಿ ಅವರು ರಾತ್ರಿ ಕೆಲವು ಗಂಟೆಗಳ ಕಾಲ ಅಡಗಿಕೊಂಡಿದ್ದರು. ನಂತರ, ವೃದ್ಧ ದಂಪತಿಯ ಮಲಗುವ ಕೋಣೆಗೆ ನುಗ್ಗಿ ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಂಪತಿಯ ಪುತ್ರ ರವಿ ಭಾನುವಾರ ರಾತ್ರಿ 10.30ಕ್ಕೆ ಪೋಷಕರನ್ನು ಕೊನೆಯದಾಗಿ ನೋಡಿದ್ದಾಗಿ ಪೊಲೀಸರಿಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಬಳಿ ಬಿರುಗಾಳಿಗೆ ಉರುಳಿದ ಬೃಹತ್ ಮರ: 7 ಭಕ್ತರು ಬಲಿ, 20 ಕ್ಕೂ ಹೆಚ್ಚು ಮಂದಿಗೆ ಗಾಯ
ಮನೆ ಕಳ್ಳತನ ಮಾಡುವ ವೇಳೆ ವೃದ್ಧ ದಂಪತಿಯನ್ನು ಕೊಲೆ ಮಾಡಲಾಗಿದೆ ಎಂದು ಆರಂಭದಲ್ಲಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಆದರೆ, ಈ ಅಪರಾಧದ ಹಿಂದೆ ಸೊಸೆಯ ಕೈವಾಡವಿದೆ ಎಂದಿ ಅವರಿಗೆ ಬಲವಾದ ಅನುಮಾನ ಬಂದಿದ್ದು, ಬಳಿಕ ಅರೆಸ್ಟ್ ಮಾಡಿದ್ದಾರೆ.
ಇನ್ನು, ಕೊಲೆಯಾದ ವೃದ್ಧ ದಂಪತಿಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಅಲ್ಲದೆ, ಆರೋಪಿ ಸೊಸೆ ಮೋನಿಕಾಳನ್ನು ಬಂಧಿಸಲಾಗಿದ್ದು, ಆಕೆಯ ಗೆಳೆಯ ಮತ್ತು ಇತರ ಸಹಚರನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Crime: ರೇಪ್ ಮಾಡಿ ಮಹಿಳೆಗೆ ಬೆಂಕಿ ಹಚ್ಚಿದ ರಾಕ್ಷಸ: ಆಸ್ಪತ್ರೆಯಲ್ಲಿ ಬಲಿಯಾದ ಸಂತ್ರಸ್ತೆ
ಈ ಹತ್ಯೆಯ ಹಿಂದಿನ ಉದ್ದೇಶ ಆಸ್ತಿ ವಿವಾದ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮನೆ ಮಾರಾಟದ ಮುಂಗಡ ಪಾವತಿಯ ಭಾಗವಾಗಿದ್ದ ಕನಿಷ್ಠ ₹ 4 ಲಕ್ಷ ನಗದು ಕೂಡ ದಂಪತಿಯ ಮನೆಯಲ್ಲಿ ನಾಪತ್ತೆಯಾಗಿದೆ ಎಂದೂ ದೆಹಲಿ ಪೊಲೀಸರು ತಿಳಿಸಿದ್ದಾರೆ.
ವೃದ್ಧ ದಂಪತಿ ತಮ್ಮ ಹಳೆಯ ಮನೆಯ ಕೆಲವು ಭಾಗವನ್ನು ಮಾರಾಟ ಮಾಡಿದ ನಂತರ ಮೋನಿಕಾ ಕೋಪಗೊಂಡಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆ ವೇಳೆ ಡೀಲ್‌ಗಾಗಿ 5 ಲಕ್ಷ ರೂ. ನಗದು ಪಡೆದಿದ್ದು, ಆ ಹಣವನ್ನು ಮನೆಯಲ್ಲಿ ಇರಿಸಲಾಗಿತ್ತು. ಹಣ ಪಡೆದು ಮನೆ ಬಿಡಲು ಅವರನ್ನು ಕೊಂದು ಹಾಕಲು ಸೊಸೆ ಮೋನಿಕಾ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಹಾವಿನ ತಲೆ ಕಚ್ಚಿ ಹಿಂಸಿಸಿ ಕೊಂದ ದುರುಳರು: ವಿಡಿಯೋ ವೈರಲ್ ಬೆನ್ನಲ್ಲೇ ಮೂವರ ಅರೆಸ್ಟ್