Asianet Suvarna News Asianet Suvarna News

ಮುಸ್ಲಿಂ ಹುಡುಗಿ ಜೊತೆಗಿದ್ದ ಹಿಂದೂ ಯುವಕನ ಮೇಲೆ ಹಲ್ಲೆ: ಫ್ರೆಂಡ್ಸ್‌ ಅಂದ್ರೂ ಬಿಡ್ಲಿಲ್ಲ

ಚಿಕ್ಕಬಳ್ಳಾಪುರದಲ್ಲಿ ಮುಸ್ಲಿಂ ಹುಡುಗಿಯೊಂದಿಗೆ ಹಿಂದೂ ಯುವಕ ಸುತ್ತಾಡುತ್ತಿರುವುದನ್ನು ಕಂಡ ಮುಸ್ಲಿಂ ಯುವಕರ ಗುಂಪು ನೈತಿಕ ಪೊಲೀಸ್‌ಗಿರಿ ನಡೆಸಿ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದೆ.

Chikkaballapur Muslim youth group show moral policing on chintamani hindu young man sat
Author
First Published Jun 7, 2023, 5:42 PM IST

ಚಿಕ್ಕಬಳ್ಳಾಪುರ (ಜೂ.07): ಚಿಕ್ಕಬಳ್ಳಾಪುರ ನಗರದಲ್ಲಿ ಮುಸ್ಲಿಂ ಸಮುದಾಯದ ಹುಡುಗಿಯೊಂದಿಗೆ ಹಿಂದೂ ಯುವಕ ಸುತ್ತಾಡುತ್ತಿರುವುದನ್ನು ಕಂಡ ಮುಸ್ಲಿಂ ಯುವಕರ ಗುಂಪು ನೈತಿಕ ಪೊಲೀಸ್‌ಗಿರಿ ನಡೆಸಿ ಹಿಂದು ಯುವಕನ ಮೇಲೆ ಹಲ್ಲೆ ನಡೆಸಿದೆ. ತಾವು ಸ್ನೇಹಿತರು ಎಂದು ಹೇಳಿದರೀ ಕೇಳದೇ ಹಲ್ಲೆ ನಡೆಸಿ ಅವಮಾನಿಸಿದ ಘಟನೆ ನಡೆದಿದೆ.

ರಾಜ್ಯದಲ್ಲಿ ಧರ್ಮದಂಗಲ್‌ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದ್ದು, ಹಿಮದೂ ಮತ್ತು ಮುಸ್ಲಿಂ ಯುವಕ ಅಥವಾ ಯುವತಿಯರು ಜೊತೆಗಿದ್ದರೆ ಅದನ್ನು ನೋಡಿ ಸಹಿಸಿಕೊಳ್ಳದೇ ನೈತಿಕ ಪೊಲೀಸ್‌ಗಿರಿ ನಡೆಸುವ ಗುಂಪುಗಳ ಸಂಖ್ಯೆ ಹಚ್ಚಾಗಿತ್ತಿವೆ. ಕರಾವಳಿ ತೀರದ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದ ನೈತಿಕ ಪೊಲೀಸ್‌ಗಿರಿ ಈಗ ರಾಜ್ಯಾದ್ಯಂತ ಹೆಚ್ಚಾಗಿ ಪಸರಿಸುತ್ತಿದೆ. ಕರ್ನಾಟಕದ ಬೆಂಗಳೂರು ಸರ್ವಜನಾಂಗದ ಶಾಂತಿಯ ತೋಟದಂತಿದ್ದು, ಎಲ್ಲ ಸಮುದಾಯ, ಜಾತಿ, ಧರ್ಮ, ಭಾಷೆ ಸೇರಿದಂತೆ ಎಲ್ಲರೂ ನೆಲೆಸಿದ್ದಾರೆ. ಈಗ ಬೆಂಗಳೂರಿನ ನೆರೆಹೊರೆ ಜಿಲ್ಲೆಯಾಗಿರುವ ಚಿಕ್ಕಬಳ್ಳಾಪುರದಲ್ಲಿ ಈಗ ನೈತಿಕ ಪೊಲೀಸ್‌ಗಿರಿ ನಡೆದಿದೆ. ಈ ವೇಳೆ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ.

BENGALURU ಕುಡಿದ ಮತ್ತಲ್ಲಿ ಬಾಲಕನ ಮೇಲೆಯೇ ವಾಟರ್ ಟ್ಯಾಂಕರ್‌ ಹರಿಸಿದ ಚಾಲಕ: ಸ್ಥಳದಲ್ಲೇ ಸಾವು

ಚಿಂತಾಮಣಿ ಮೆಹಬೂಬ ನಗರದಲ್ಲಿ ಸುತ್ತುವರಿದ ಮುಸ್ಲಿಂ ಯುವಕರು: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಮೆಹಬೂಬ ನಗರದಲ್ಲಿ ಘಟನೆ ನಡೆದಿದೆ. ಚೇಳೂರು ಮೂಲದ ಮುಸ್ಲಿಂ ಯುವತಿ ಹಾಗು ಚಿಂತಾಮಣಿ ಮೂಲದ ಹಿಂದು ಯುವಕ ನೈತಿಕ ಪೊಲೀಸ್‌ಗಿರಿಯಿಂದ ಪೇಚಿಗೆ ಸಿಲುಕಿದ್ದವರಾಗಿದ್ದಾರೆ. ಮುಸ್ಲಿಂ ಸಮುದಾಯದ ಯುವಕರ ಗುಂಪಿನಿಂದ ನೈತಿಕ ಪೊಲೀಸ್ ಗಿರಿ ನಡೆಸಲಾಗಿದೆ. ಮುಸ್ಲಿಂ ಯುವತಿ ಹಿಂದೂ ಸಮುದಾಯದ ಯುವಕನ ಜೊತೆ ಇದ್ದಿದಕ್ಕೆ ನೈತಿಕ ಪೊಲೀಸ್‌ಗಿರಿ ನಡೆದಿರುವುದು ಕಂಡುಬಂದಿದೆ. ಮುಸ್ಲಿಂ ಹುಡುಗಿ ಹಿಂದೂ ಯುವಕನ ಜೊತೆ ಆಗಮಿಸಿದ್ದಕ್ಕೆ ಯುವತಿಗೆ ತರಾಟೆ ತೆಗೆದುಕೊಂಡಿದ್ದಾರೆ. ಈ ವೇಳೆ ಯುವತಿ ಈಗ ತನ್ನ ಸ್ನೇಹಿತ ಎಂದು ಎಷ್ಟೇ ಬೇಡಿಕೊಂಡರೂ ಬಿಡದೇ ಅವಮಾನ ಮಾಡಿ ಹಲ್ಲೆ ಮಾಡಿದ್ದಾರೆ. 

ಹಲ್ಲೆಗೆ ಅಡ್ಡಿಪಿಸಿದ ಯುವತಿ ಮೇಲೆಯೂ ದೌರ್ಜನ್ಯ: ಯುವಕನ ಮೇಲೆ ನಿಂದಿಸಿ ಹಲ್ಲೆಗೆ ಯತ್ನಿಸಿದ ವೇಳೆ ಅಡ್ಡಬಂದ ಯುವತಿಯ ಮೇಲೆ ಕೂಡ ದೌರ್ಜನ್ಯ ನಡೆಸಿದ್ದಾರೆ. ನಾವಿಬ್ಬರೂ ಕೇವಲ ಸ್ನೇಹಿತರು ಎಂದು ಗೋಗರೆದರೂ ಬಿಡದೇ ನೈತಿಕ ಪೊಲೀಸ್ ಗಿರಿ ಪ್ರದರ್ಶನ ಮಾಡಲಾಗಿದೆ. ಮಂಗಳವಾರ ಈ ಘಟನೆ ನಡೆದಿದ್ದು, ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ. ಇನ್ನು ಗುಂಪಿನ ವಿರುದ್ಧ ಯುವಕ ಮಾತನಾಡಿದ್ದಕ್ಕೆ ಅವಮಾನಿಸಲು ಯತ್ನ ಮಾಡಲಾಗಿದೆ. ಈ ಘಟನೆ ಚಿಂತಾಮಣಿ  ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

ಮಾನಸಿಕ ಖಿನ್ನತೆಯಿಂದಾಗಿ 19ನೇ ಫ್ಲೋರ್‌ನಿಂದ ಬಿದ್ದ ಯುವಕ: ದೇಹವೆಲ್ಲಾ ಪೀಸ್ ಪೀಸ್‌

ಹಿರಿಯರು ಕೂಡ ನ್ಯಾಯ ಬಗೆಹರಿಸಲಿಲ್ಲ: ಮುಸ್ಲಿಂ ಯುವಕರ ಗುಂಪಿನ ವಿರುದ್ಧ ತಪ್ಪಿಸಿಕೊಂಡು ಹೋಗಲು ಎಷ್ಟೇ ಪ್ರಯತ್ನ ಮಾಡಿದರೂ ಯುವಕರು ತಡೆದು ನಿಲ್ಲಿಸುತ್ತಿದ್ದರು. ಇನ್ನು ಮೆಹಬೂಬ ನಗರದಲ್ಲಿ ಓಡಾಡುತ್ತಿದ್ದ ಮುಸ್ಲಿಂ ಸಮುದಾಯದ ಕೆಲವು ಹಿರಿಯರು ಸ್ಥಳಕ್ಕೆ ಆಗಮಿಸಿ ಗುಂಪಿನ ಗಲಾಟೆಯನ್ನು ಆಲಿಸಿದ್ದಾರೆ. ಹುಡುಗನನ್ನು ನೀನು ಇಲ್ಲಿಂದ ಹೋಗು ಎಂದು ಹೇಳಿದರೂ, ಹುಡುಗಿಯನ್ನು ಕರೆದುಕೊಂಡು ಹೋಗುವುದಾಗಿ ಹುಡಗನೂ ಹಠ ಹಿಡಿದಿದ್ದಾನೆ. ಈ ವೇಳೆ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ನೈತಿಕ ಪೊಲೀಸ್‌ಗಿರಿಯ ಅರ್ಧ ವಿಡಿಯೋ ಮಾತ್ರ ಲಭ್ಯವಾಗಿದ್ದು, ಕೊನೆಯಲ್ಲಿ ಏನಾಗಿದೆ ಎಂಬ ಪೂರ್ಣ ವಿವರ ಲಭ್ಯವಾಗಿಲ್ಲ.

Follow Us:
Download App:
  • android
  • ios