ಕೈಯಲ್ಲಿ ಆಯುಧ ಹಿಡಿದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳ ಹೊಂಚು ಹಾಕುತ್ತಿದ್ದಾನೆ.  ಕಳ್ಳನ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.  ಅರಸೀಕೆರೆ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಚಡ್ಡಿ ಗ್ಯಾಂಗ್ ಕಾಣಿಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದೆ ಕೂಡ ನಗರದಲ್ಲಿ ಚಡ್ಡಿ ಗ್ಯಾಂಗ್ ಆತಂಕ ಮೂಡಿಸಿತ್ತು.  

ಹಾಸನ(ಜು.24): ಹಾಸನ ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಮತ್ತೆ ಪ್ರತ್ಯಕ್ಷವಾಗಿದೆ. ಹೌದು, ಜಿಲ್ಲೆಯ ಅರಸೀಕೆರೆ ಪಟ್ಟಣದ ಮಾರುತಿ ನಗರದಲ್ಲಿ ಮತ್ತೆ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದೆ. ಪಟ್ಟಣದ ಕೆಎಸ್ಆರ್‌ಟಿಸಿ ಬಸ್ ಡಿಪೋ ಹಿಂಭಾಗದಲ್ಲಿ ಖತರ್ನಾಕ್ ಚಡ್ಡಿ ಗ್ಯಾಂಗ್‌ನ ಕಳ್ಳ ಕಾಣಿಸಿಕೊಂಡಿದ್ದಾನೆ. 

ಕೈಯಲ್ಲಿ ಆಯುಧ ಹಿಡಿದು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕಳ್ಳ ಹೊಂಚು ಹಾಕುತ್ತಿದ್ದಾನೆ. ಕಳ್ಳನ ಓಡಾಟದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅರಸೀಕೆರೆ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಹಲವು ದಿನಗಳಿಂದ ಚಡ್ಡಿ ಗ್ಯಾಂಗ್ ಕಾಣಿಸಿಕೊಳ್ಳುತ್ತಿದೆ. ಕೆಲ ತಿಂಗಳ ಹಿಂದೆ ಕೂಡ ನಗರದಲ್ಲಿ ಚಡ್ಡಿ ಗ್ಯಾಂಗ್ ಆತಂಕ ಮೂಡಿಸಿತ್ತು. 

Chaddi gang : ಮಳೆಗಾಲ ಬರ್ತಿದ್ದಂತೆ ಆ್ಯಕ್ಟೀವ್ ಚಡ್ಡಿ ಗ್ಯಾಂಗ್ ! ರಾಬರಿ ಗ್ಯಾಂಗ್‌ನ ಭರ್ಜರಿ ಬೇಟೆ ಹೇಗಿತ್ತು ಗೊತ್ತಾ?

ಅರಸೀಕೆರೆ ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ. ಚಡ್ಡಿ ಗ್ಯಾಂಗ್‌ ಮತ್ತೆ ಕಾಣಿಸಸಿಕೊಂಡಿದ್ದರಿಂದ ಪಟ್ಟಣದ ನಿವಾಸಿಗಳಲ್ಲಿ ಆತಂಕ ಮತ್ತಷ್ಟು ಹೆಚ್ಚಾಗಿದೆ. ಪೊಲೀಸ್ ಬೀಟ್ ಹೆಚ್ಚಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.