Asianet Suvarna News Asianet Suvarna News

CCB Police Operation - ನಕಲಿ ಛಾಪಾ ಕಾಗದ ದಂಧೆ ಪ್ರಕರಣ ಭೇದಿಸಿದ ಪೊಲೀಸರು- 11 ಮಂದಿ ಬಂಧನ

ನಗರದ ಕಂದಾಯ ಭವನ ಆವರಣದಲ್ಲಿ ನಡೆಯುತ್ತಿದ್ದ ನಕಲಿ ಛಾಪಾ ಕಾಗದ ಮಾರಾಟ ದಂಧೆ ಪ್ರಕರಣ ಬೇಧಿಸಿರುವ ಬೆಂಗಳೂರುಸಿಸಿಬಿ ಪೊಲೀಸರು 11 ಮಂದಿಯನ್ನ ವಶಕ್ಕೆ ಪಡೆದಿದ್ದಾರೆ.

CCB Police Operation   arrersted11  who are selling Fake estamp at benglore rav
Author
Bangalore, First Published Aug 5, 2022, 4:03 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್.ಬೆಂಗಳೂರು

ಬೆಂಗಳೂರು (ಆ.5) : ಅತಿ ಭ್ರಷ್ಟಾಚಾರ ತಾಂಡವ ಆಡುವ, ಅತ್ಯಂತ ನಿರ್ಲಕ್ಷ್ಯ ಧೋರಣೆ ಇರೋ ಸರ್ಕಾರದ ಇಲಾಖೆ ಅಂತಾ ಜನ ಸಾಮಾನ್ಯರಿಂದ ಕರೆಸಿಕೊಳ್ಳುವ ಇಲಾಖೆ ಅಂದ್ರೆ ಅದು ಕಂದಾಯ ಇಲಾಖೆ ಹಿಂಗಂತ ನಾವು ಹೇಳ್ತಿಲ್ಲ.. ಜನಾನೇ ಹೇಳ್ತಾರೆ... ನಿಮ್ದು ಯಾವ್ದಾದ್ರೂ ಜಮೀನು, ಆಸ್ತಿ ಪಾಸ್ತಿ ದಾಖಲೆ ಬೇಕು ಅಂದ್ರೆ, ಜಮೀನು ಅಳತೆ ಮಾಡಿಸ್ಬೇಕು ಅಂದ್ರೆ ಈ ಸರ್ಕಾರಿ ಕಛೇರಿಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗಿಂತ ಬ್ರೋಕರ್ ಗಳದ್ದೇ ಕಾರು ಬಾರು. ದುಡ್ಡು ಕೊಟ್ರೆ ನಿಮ್ಗೆ ಯಾವ ರೀತಿ ಬೇಕಾದ್ರು ಕೆಲ್ಸ ಮಾಡ್ಕೊಟ್ ಬಿಡ್ತಾರೆ... ಅದೇ ರೀತಿ ಇಲ್ಲೊಂದ್ ಟೀಮ್ ಕಂದಾಯ ಭವನದಲ್ಲಿ ಸಕತ್ತಾಗೇ ದುಡ್ಡು ಮಾಡ್ಕೊತ್ತಿದೆ. ಅದು ಯಾವ ರೀತಿನಪ್ಪಾ ಅಂದ್ರೆ ಈ ಛಾಪಾ ಕಾಗದಗಳ ನಕಲಿ ಮಾಡೋದ್ರ ಮೂಲಕ.

Bengaluru Crime: ನಕಲಿ ದಾಖಲೆ ಬಳಸಿ ಎನ್‌ಆರ್‌ಐಗಳ ಸೈಟ್‌ ಮಾರಾಟ..!

ನಗರದ ಕಂದಾಯ ಭವನ ಆವರಣದಲ್ಲಿ ನಕಲಿ ಛಾಪಾ ಕಾಗದಗಳ ಮಾರಾಟ ಮತ್ತು ರಾಜ ಮಹಾರಾಜರ ಕಾಲದ ಛಾಪಾ ಕಾಗದ ಪತ್ರಗಳು ಕೂಡ ಭಾರಿ ಮೊತ್ತಕ್ಕೆ ಮಾರಾಟ ಆಗ್ತಿವೆ. ಅನ್ನೋ ಖಚಿತ ಮಾಹಿತಿಯ ಮೇರೆಗೆ ಸಿಸಿಬಿ(CCB) ಅಧಿಕಾರಿಗಳು ಕಂದಾಯ ಭವನದಲ್ಲಿ ಕಾರ್ಯಾಚರಣೆ ಮಾಡಿದಾಗ ಭರ್ಜರಿ ಬೇಟೆ ಆಗಿದೆ.  ಸರ್ಕಾರ ನಿಷೇಧ ಮಾಡಿರುವ ಸ್ಟಾಂಪ್ ಪೇಪರ್ ಗಳನ್ನ ನಿಮಗೆ ಬೇಕಾದ ಹಳೆಯ ವರ್ಷದ ಪೇಪರ್ ನಂತೆ ನಕಲಿ ಮಾಡಿಕೊಟ್ಟು ಆಸ್ತಿ ಪಾಸ್ತಿಗಳ ವಂಚನೆಯಲ್ಲಿ ಪ್ರಮುಖ ಕಾರಣಕರ್ತರಾಗಿದ್ದಾರೆ. ಒಟ್ಟಾರೆಯಾಗಿ 11 ಜನ ಆರೋಪಿಗಳನ್ನ ಅರೆಸ್ಟ್ ಮಾಡಿರುವ ಸಿಸಿಬಿ ಅಧಿಕಾರಿಗಳು ಕೋಟ್ಯಾಂತರ ಮೌಲ್ಯದ ಸ್ಟಾಂಪ್ ಪೇಪರ್ ಗಳನ್ನ ವಶಕ್ಕೆ ಪಡೆದಿದ್ದಾರೆ.  

ಆರೋಪಿಗಳು ಛಾಪಾ ಕಾಗದ ಪತ್ರ ಬೇಕಾದವರಿಗೆ ಅವರು ಕೇಳಿದ ಸರ್ಕಾರ ಈ ಸ್ಟಾಂಪ್ ನಿಷೇಧ ಮಾಡಿರುವ ವರ್ಷದಿಂದ ಹಿಂದಿನ ವರ್ಷದ ದಿನಾಂಕ ಇರುವಂತಹ ಸ್ಟಾಂಪ್ ಪತ್ರಗಳನ್ನ ಹಳೆಯ ದಿನಾಂಕಗಳಿರುವಂತೆ ನಕಲಿ ಛಾಪಾ ಕಾಗದ ತಯಾರಿಸಿ ಒಂದು ಪತ್ರಕ್ಕೆ ಐದರಿಂದ ಎಂಟು ಸಾವಿರ ದವರೆಗೆ ಹಣ ಪಡೆಯುತ್ತಿದ್ದರಂತೆ. ಆರೋಪಿಗಳ ಬಳಿ  ಇದ್ದಂತಹ ಬರೋಬ್ಬರಿ 2664 ನಕಲಿ ಸ್ಟಾಂಪ್ ಪೇಪರ್ ಗಳನ್ನ ವಶಕ್ಕೆ ಸಿಸಿಬಿ ಪೊಲೀಸ್ರು ವಶಕ್ಕೆ ಪಡೆದಿದ್ದಾರೆ. ಅವುಗಳಲ್ಲಿ 1990 ನೇ ಇಸವಿಯ ನಿವೇಶನವೊಂದರ ನಕಲಿ ಜಿಪಿಎ ಪತ್ರ, 1995 ನೇ ಇಸವಿಯ ನೀವೇಶನವೊಂದರ ನಕಲಿ ಜಿಪಿಎ ಪತ್ರ, 2002 ನೇ ಇಸವಿಯ ನಿವೇಶನವೊಂದರ ನಕಲಿ ಜಿಪಿಎ ಪತ್ರ, 2009 ನೇ ಇಸವಿಯ ಹೆಬ್ಬೆಟ್ಟು ಪಡೆದುಕೊಂಡಿರುವ ಒಂದು ದಾಖಲೆ ಇವೆಯಂತೆ.

Suvarna FIR; ತೆಲಗಿ ತೊಲಗಿದ್ದರೂ ನಿಂತಿಲ್ಲ ನಕಲಿ, ಸಾಮ್ರಾಜ್ಯ ಕಂಡು ಬೆಚ್ಚಿಬಿದ್ದ ಪೊಲೀಸರು!

ಒಟ್ಟಾರೆಯಾಗಿ ಈ ನಕಲಿ ಸ್ಟಾಂಪ್ ಪೇಪರ್ ಗಳನ್ನ ಮಾರಾಟ ಮಾಡುತ್ತಿದ್ದ ಈ ಮೋಸಗಾರರಿಂದ ಬರೋಬ್ಬರಿ ಕೋಟ್ಯಂತರ ಮೌಲ್ಯದ  2664 ಸ್ಟಾಂಪ್ ಪೇಪರ್ ಗಳನ್ನ ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಆರೊಪಿಗಳನ್ನ ವಿಚಾರಣೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios