Asianet Suvarna News Asianet Suvarna News

ಡ್ರಗ್ ಮಾಫಿಯಾ: ಸಂಜನಾ ಜತೆ ವ್ಯವಹಾರ, ನಿರ್ಮಾಪಕನ ವಿಚಾರಣೆ

ನಿರ್ಮಾಪಕ ಸೌಂದರ್ಯ ಜಗದೀಶ್‌ ಸೇರಿದಂತೆ ಮೂವರ ವಿಚಾರಣೆ| ವಿಚಾರಣೆಗೆ ಹಾಜರಾದ ಚಲನಚಿತ್ರ ನಿರ್ಮಾಪಕರಾದ ಸೌಂದರ್ಯ ಜಗದೀಶ್‌ ಹಾಗೂ ಸಂಜನಾ ಮಾವ| ನಟಿ ಸಂಜನಾಳಿಗೆ ಸೌಂದರ್ಯ ಜಗದೀಶ್‌ 30 ಲಕ್ಷ ಕೊಟ್ಟಿದ್ದರು ಎಂಬ ಮಾಹಿತಿ ಮೇರೆಗೆ ವಿಚಾರಣೆ| 

CCB Police Investigate Producer on Sanjana Drug Mafia Case grg
Author
Bengaluru, First Published Oct 22, 2020, 7:16 AM IST

ಬೆಂಗಳೂರು(ಅ.22): ಮಾದಕ ವಸ್ತು ಜಾಲದ ಸುಳಿಗೆ ಸಿಲುಕಿರುವ ನಟಿ ಸಂಜನಾ ಗಲ್ರಾನಿ ಜತೆ ಹಣಕಾಸು ವ್ಯವಹಾರ ಹಿನ್ನೆಲೆಯಲ್ಲಿ ನಿರ್ಮಾಪಕ ಸೌಂದರ್ಯ ಜಗದೀಶ್‌ ಸೇರಿದಂತೆ ಮೂವರನ್ನು ಸಿಸಿಬಿ ಪೊಲೀಸರು ಬುಧವಾರ ವಿಚಾರಣೆ ನಡೆಸಿದ್ದಾರೆ.

ನೋಟಿಸ್‌ ಹಿನ್ನೆಲೆಯಲ್ಲಿ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಯಲ್ಲಿ ಅಧಿಕಾರಿಗಳ ಮುಂದೆ ಚಲನಚಿತ್ರ ನಿರ್ಮಾಪಕರಾದ ಸೌಂದರ್ಯ ಜಗದೀಶ್‌ ಹಾಗೂ ಸಂಜನಾ ಮಾವ ವಿಚಾರಣೆಗೆ ಹಾಜರಾಗಿದ್ದರು. ನಟಿ ಜತೆ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿ ಅವರು ದಾಖಲೆ ಸಲ್ಲಿಸಿದ್ದಾರೆ. ‘ನಮಗೆ ಆಕೆಯ ಡ್ರಗ್ಸ್‌ ಪ್ರಕರಣಕ್ಕೂ ನಂಟಿಲ್ಲ. ಕೆಲವು ಸಾಲದ ರೂಪದಲ್ಲಿ ಹಣಕಾಸು ನೆರವು ನೀಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.

ಡ್ರಗ್‌ ಮಾಫಿಯಾ: ನಟಿ ಸಂಜನಾ ಜಾಮೀನು ಅರ್ಜಿ, CCBಗೆ ಹೈಕೋರ್ಟ್‌ ನೋಟಿಸ್‌

ನಟಿ ಸಂಜನಾಳಿಗೆ ಸೌಂದರ್ಯ ಜಗದೀಶ್‌ 30 ಲಕ್ಷ ಕೊಟ್ಟಿದ್ದರು ಎಂಬ ಮಾಹಿತಿ ಲಭಿಸಿದ ಕಾರಣ ವಿಚಾರಣೆ ನಡೆದಿದೆ.
 

Follow Us:
Download App:
  • android
  • ios