Asianet Suvarna News Asianet Suvarna News

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಬೆನ್ನಲ್ಲೇ ಮತ್ತೊರ್ವ ಸಿಸಿಬಿ ಇನ್ಸ್‌ಪೆಕ್ಟರ್ ಆತ್ಮಹತ್ಯೆ!

ಯಾದಗಿರಿ ಪಿಎಸ್‌ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣ ಬೆನ್ನಲ್ಲೇ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

CCB Inspector Thimmegowda committed suicide in bidadi at ramanagara rav
Author
First Published Aug 5, 2024, 11:42 AM IST | Last Updated Aug 5, 2024, 5:41 PM IST

ಬೆಂಗಳೂರು (ಆ.5): ಯಾದಗಿರಿ ಪಿಎಸ್‌ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣ ಬೆನ್ನಲ್ಲೇ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ತಿಮ್ಮೇಗೌಡ(45) ಮೃತ ಇನ್ಸ್‌ಪೆಕ್ಟರ್. ರಾತ್ರಿಯೇ ನೇಣಿಗೆ ಶರಣಾಗಿರುವ ತಿಮ್ಮೇಗೌಡ. ಬೆಳಗ್ಗೆ ಸಾರ್ವಜನಿಕರು ನೋಡಿ‌ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಕಗ್ಗಲೀಪುರ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ನಡೆಸಿದಾಗ ಇನ್ಸಪೆಕ್ಟರ್ ಎಂಬುದು ಪತ್ತೆಯಾಗಿತ್ತು. ಕುಂಬಳಗೂಡಿನ ತಗಚುಗುಪ್ಪೆ ನಿವಾಸದ ಸಮೀಪದ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ತಿಮ್ಮೇಗೌಡ.. ಕಳೆದ ಒಂದೂವರೆ ವರ್ಷದಿಂದ ಬೆಂಗಳೂರಿನ ಸಿಸಿಬಿ ಇನ್ಸ್‌ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್. ಇದೀಗ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದ. ಸದ್ಯ ಘಟನೆ ಸಂಬಂಧ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ : ಲಂಚದ ಹಣ ಹೊಂದಿಸಲು ಫ್ಲ್ಯಾಟ್‌ ಮಾರಲು ಮುಂದಾಗಿದ್ದ ಮಾಹಿತಿ ಬಹಿರಂಗ!.

ವರ್ಗಾವಣೆ ವಿಚಾರಕ್ಕೆ ಆತ್ಮಹತ್ಯೆ?

ಬೆಂಗಳೂರು ಸಿಸಿಬಿಯ ಆರ್ಥಿಕ ಅಪರಾಧ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಇನ್ಸಪೆಕ್ಟರ್ ತಿಮ್ಮೇಗೌಡ. ಕಳೆದ 15 ದಿದನದ ಹಿಂದೆ ಸಿಸಿಬಿಗೆ ವರ್ಗಾವಣೆಯಾಗಿದ್ದರು. ಪೋಸ್ಟಿಂಗ್ ವಿಚಾರಕ್ಕೆ ತಿಮ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ್ರ? ಕಳೆದ ಒಂದು ವರ್ಷದಿಂದ ಪೋಸ್ಟಿಂಗ್‌ಗಾಗಿ ಅಲೆದಾಡಿದ್ದ ತಿಮ್ಮೇಗೌಡ.
ಬಿಡದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ. ಅತ್ತಿಬೆಲೆ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ವೇಳೆ ಸಸ್ಪೆಂಡ್ ಮಾಡಲಾಗಿತ್ತು. ಪಟಾಕಿ ಗೋದಾಮಿನಲ್ಲಿ ಬೆಂಕಿ ಬಿದ್ದು ಹಲವು ಸಾವನ್ನಪ್ಪಿದ್ದರು. ಈ ವೇಳೆ ಕರ್ತವ್ಯ ಲೋಪ ಆರೋಪದಡಿ ತಿಮ್ಮೇಗೌಡರನ್ನ ಅಮಾನತ್ತು ಮಾಡಲಾಗಿತ್ತು.

ಬಳಿಕ ಎಲ್ಲಿಯೂ ಪೋಸ್ಟಿಂಗ್ ಸಿಕ್ಕಿರಲಿಲ್ಲ. 'ಅಣ್ಣ ನನ್ನದೇನು ತಪ್ಪಿಲ್ಲ. ಯಾರೋ ಮಾಡಿದ ತಪ್ಪಿಗೆ ನನ್ನ ಬಲಿ ಹಾಕಿದ್ದಾರೆ. ದಯವಿಟ್ಟು ನನಗೆ ನ್ಯಾಯ ಕೊಡಿಸಿ' ಎಂದು ಗೋಳಾಡುತ್ತಿದ್ದ ಇನ್ಸ್ ಪೆಕ್ಟರ್ ತಿಮ್ಮೇಗೌಡ. ಹಿರಿಯ ಅಧಿಕಾರಿಗಳ ಮುಂದೆ ಗೋಳಾಟ ಮಾಡಿದ್ದರು.  ಈ ಮೊದಲು ಸಿಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಳಿಕ ಬಿಡದಿ ಠಾಣೆಗೆ ವರ್ಗಾವಣೆಗೊಂಡಿದ್ದರು. ಅಲ್ಲಿಂದ ಅತ್ತಿಬೆಲೆಗೆ ವರ್ಗಾವಣೆಯಾಗಿತ್ತು. ಪಟಾಕಿ ದುರಂತದ ಬಳಿಕ ಸಸ್ಪೆಂಡ್ ಆಗಿದ್ದ ಇನ್ಸ್ಪೆಕ್ಟರ್.. ಸಸ್ಪೆಂಡ್ ಬಳಿಕ ಕೆಲಸವಿಲ್ಲದೆ ದಿನನಿತ್ಯ ಕಮಿಷನರ್ ಆಫೀಸ್, ಡಿಜಿ ಕಚೇರಿಗೆ ಅಲೆದಾಡಿದ್ದ ಇನ್ಸಪೆಕ್ಟರ್ ತಿಮ್ಮೇಗೌಡ. ಕೆಲ ಅಧಿಕಾರಿಗಳು ಸಮಾಧಾನ ಮಾಡಿದ್ರು. ಆದರೂ ಸಸ್ಪೆಂಡ್ ಆಗಿದ್ದರಿಂದ ನೊಂದುಹೋಗಿದ್ದರು. ಇದರಿಂದಲೇ ಕೊನೆಗೆ ಸಾವಿಗೆ ತೀರ್ಮಾನ ಮಾಡಿ ಇಂದು ನೇಣುಬಿಗಿದುಕೊಂಡು ಆತ್ಮಹತ್ಯೆ. ಪೋಸ್ಟಿಂಗ್ ಕೊಡದೇ ರಾಜ್ಯ ಸರ್ಕಾರ ಪ್ರಮಾಣಿಕ ವ್ಯಕ್ತಿಗೆ ಅನ್ಯಾಯ ಮಾಡಿದೆ ಎಂಬ ಮಾತುಗಳು ಪೊಲೀಸ್ ಇಲಾಖೆಯಲ್ಲಿ ಕೇಳಿಬರುತ್ತಿವೆ.

ಶಾಸಕನ ಧನದಾಹ, ವರ್ಗಾವಣೆ ದಂಧೆಗೆ ಬಲಿಯಾದ್ರಾ ಪಿಎಸ್​ಐ ಪರಶುರಾಮ್‌?

ಆತ್ಮಹತ್ಯೆಗೆ ಇನ್ನೂ ಸಿಗದ ಕಾರಣ:

ಇನ್ಸ್‌ಪೆಕ್ಟರ್ ತಿಮ್ಮೇಗೌಡರ ಸಾವಿಗೆ ವರ್ಗಾವಣೆ/ಸಸ್ಪೆಂಡ್ ವಿಚಾರಣೆಯೇ ಕಾರಣ ಎಂದು ಮೇಲ್ನೋಟಕ್ಕೆ ಕೇಳಿಬರುತ್ತಿದೆಯಾದರೂ ನಿಖರ ಕಾರಣವೇನೆಂಬುದು ತಿಳಿದಿಲ್ಲ. ತಿಮ್ಮೇಗೌಡರ ಬಳಿ  ಡೆತ್ ನೋಟ್ ಸಹ ಸಿಕ್ಕಿಲ್ಲ. ಇಲಾಖೆಯೊಂದಿಗೆ ಯಾವುದೇ ಸಮಸ್ಯೆ ಇರಲಿಲ್ಲ ಎನ್ನುತ್ತಿರುವ ಪೊಲೀಸರು. ಹಾಗಾದರೆ ಸಾಲದ ವಿಚಾರವಾಗಿ ಸಾವಿಗೆ ಶರಣಾದರೂ ತಿಮ್ಮೇಗೌಡ. ಅದಕ್ಕೆ ಇಂಬು ಕೊಡುವಂತೆ ಮೃತ ಇನ್ಸ್‌ಪೆಕ್ಟರ್ ತಿಮ್ಮೇಗೌಡರ ಜೇಬಿನಲ್ಲಿ ಸಾಲಕ್ಕೆ ಸಂಬಂಧಿಸಿದ ಕೆಲ ಚೀಟಿಗಳು ಲಭ್ಯವಾಗಿವೆ. ಆ ಸಾಲದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕುತ್ತಿರುವ ಪೊಲೀಸರು. ಕೆಲ ವೈಯಕ್ತಿಕ ಕಾರಣಗಳಿಗಾಗಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾರಾ ಎಂಬ ಬಗ್ಗೆಯೂ ಅನುಮಾನ ಹಿನ್ನೆಲೆ ಎಲ್ಲ ಆಯಾಮದಲ್ಲೂ ತನಿಖೆ ನಡೆಸುತ್ತಿರುವ ಪೊಲೀಸರು. ತನಿಖೆ ಪ್ರಕ್ರಿಯೆಯಲ್ಲಿ ರಾಮನಗರ ಪೊಲೀಸರಿಗೆ ಬೆಂಗಳೂರು ಸಿಸಿಬಿ ಪೊಲೀಸರ ಸಾಥ್ ನೀಡುತ್ತಿದ್ದಾರೆ.

Latest Videos
Follow Us:
Download App:
  • android
  • ios