Asianet Suvarna News Asianet Suvarna News

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ : ಲಂಚದ ಹಣ ಹೊಂದಿಸಲು ಫ್ಲ್ಯಾಟ್‌ ಮಾರಲು ಮುಂದಾಗಿದ್ದ ಮಾಹಿತಿ ಬಹಿರಂಗ!

ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಲಂಚದ ಹಣ ಹೊಂದಿಸಲು ಪರಶುರಾಮ ಹೆಣಗಾಡಿದ್ದು ಬೆಳಕಿಗೆ ಬಂದಿದೆ.

Yadgir PSI Parashuram death case more information revealed rav
Author
First Published Aug 5, 2024, 10:06 AM IST | Last Updated Aug 5, 2024, 10:06 AM IST

ಕೊಪ್ಪಳ (ಆ.5)  ಯಾದಗಿರಿ ಪಿಎಸ್‌ಐ ಪರಶುರಾಮ ಸಾವು ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ಲಂಚದ ಹಣ ಹೊಂದಿಸಲು ಪರಶುರಾಮ ಹೆಣಗಾಡಿದ್ದು ಬೆಳಕಿಗೆ ಬಂದಿದೆ.

ಪರಶುರಾಮ ಸ್ನೇಹಿತ ಯರ್ರಿಸ್ವಾಮಿ, ಸಹೋದರ ಹನುಮಂತಪ್ಪ ಹಾಗೂ ತಾಯಿ ಗಂಗಮ್ಮ ಸ್ಫೋಟಕ ಮಾಹಿತಿಯನ್ನು ಮಾಧ್ಯಮದವರೊಂದಿಗೆ ಹಂಚಿಕೊಂಡಿದ್ದಾರೆ.‌ ಸ್ನೇಹಿತ ಯರ್ರಿಸ್ವಾಮಿ ಮಾತನಾಡಿ, ಗೆಳೆಯ ಸಾಯುವ ನಾಲ್ಕು ದಿನ ಮುನ್ನ ನನಗೆ ಕರೆ ಮಾಡಿ ಎಲ್ಲವನ್ನು ಹೇಳಿದ್ದ. 

ಪಿಯುಸಿ ಫೇಲಾಗಿ ಬೆಂಗ್ಳೂರಲ್ಲಿ ಕೂಲಿ ಮಾಡಿ, 10 ಸರ್ಕಾರಿ ನೌಕರಿ ತ್ಯಜಿಸಿ ಪಿಎಸ್‌ಐ ಆಗಿದ್ದ ಪರಶುರಾಮ..!

ಪತ್ನಿಯ ಬಂಗಾರ ಅಡವಿಟ್ಟಿದ್ದನ್ನು ಹೇಳಿದ್ದ, ಅಷ್ಟೇ ಅಲ್ಲ ಬ್ಯಾಂಕಿನಲ್ಲಿ ಸಾಲವನ್ನೂ ಮಾಡಿದ್ದ. ಇದ್ಯಾವುದು ಸಾಲದ್ದಕ್ಕೆ ಫ್ಲ್ಯಾಟ್‌ವೊಂದನ್ನು ಮಾರಲು ಮುಂದಾಗಿದ್ದನ್ನು ನನ್ನ ಬಳಿ ಹೇಳಿಕೊಂಡಿದ್ದ. ಇದರ ಆಡಿಯೋ ಸಹ ನನ್ನ ಬಳಿ ಇದ್ದು, ಬಳಿಕ ನೀಡಲಾಗುವುದು. ಪರಶುರಾಮ ಲಂಚದ ಒತ್ತಡದಿಂದಲೇ ಸಾವನ್ನಪ್ಪಿದ್ದಾನೆ ಎನ್ನುವುದು ಸ್ಪಷ್ಟ ಎಂದು ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios