ಚಂಡೀಘಡ(ಜ. 09)  ಇದೊಂದು ಕಾರು ಕಳ್ಳತನ ಪ್ರಕರಣ.. ಅಷ್ಟಕ್ಕೆ ಸುಮ್ಮನೆ ಆಗುವಂತೆ ಇಲ್ಲ..ಪಂಜಾಬ್‌ನ ಡೇರಾ ಬಸ್ಸಿಯ ಕಾರ್ಜಾಕಿಂಗ್  ಬಳಿ ಕಾರು ಕಳ್ಳತನವಾಗುತ್ತದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಗುರುವಾರ ಟಾಟಾ ಟಿಯಾಗೊ ಕಾರು ಕದ್ದಿದ್ದಾರೆ. ಆದರೆ  ಕಾರಿನಲ್ಲಿ ಮಾಲೀಕನ ಹೆಂಡತಿ ಹಾಗೆ ಇದ್ದಳು. ನಂತರ ಅವಳನ್ನು ಹೆದ್ದಾರಿಯಲ್ಲಿ ಇಳಿಸಿ ಪರಾರಿಯಾಗಿದ್ದಾರೆ.

ಖಾಸಗಿ ಕಂಪನಿಯ ಉದ್ಯೋಗಿ ರಾಜೀವ್ ಚಂದ್ ಮತ್ತು ಅವರ ಪತ್ನಿ ರಿತು ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ  ಬ್ಯಾಂಕ್ ಕೆಲಸದ ನಿಮಿತ್ತ ತೆರಳಿದ್ದರು.  ಕಾರಿನಲ್ಲಿಯೇ ಕೀ ಇಟ್ಟು ಗಂಡ ಹೆಂಡತಿಗೆ ಕಾಯುವಂತೆ ತಿಳಿಸಿ ಹೊರಗೆ ಹೋಗಿದ್ದಾರೆ.

ಅಷ್ಟಕ್ಕೂ ವಂಚಕ ಯುವರಾಜ್ ಹೇಳಿದ್ದ ಭವಿಷ್ಯವಾಣಿಗಳು ನಿಜವಾಗಿದ್ದವಾ?

ಇದ್ದಕ್ಕಿದ್ದಂತೆ ಇಬ್ಬರು  ವ್ಯಕ್ತಿಗಳು ಮಾಸ್ಕ್ ಧರಿಸದೆಯೇ ಕಾರಿನ ಒಳ ಪ್ರವೇಶ ಮಾಡಿದ್ದಾರೆ.  ಒಬ್ಬ ಚಾಲಕನ ನಸೀಟ್ ನಲ್ಲಿ ಕುಳಿತೆ ಇನ್ನೊಬ್ಬ ರಿತು ಹಿಂದೆ ಕುಳಿತು ಆಕೆಯ ಮುಖ ಮುಚ್ಚಿದ್ದಾನೆ. ಹೆದ್ದಾರಿ ಕಡೆ ವಾಹನ ತಿರುಗಿಸಿ ಸುಮಾರು ಐದು ಕಿಮೀ ಚಲಾಯಿಸಿ ನಂತರ ಆಕೆಯನ್ನು ಇಳಿಸಿ ಪರಾರಿಯಾಗಿದ್ದಾರೆ.

ನಂತರ ದಂಪತಿ ಪೊಲೀಸರನ್ನು ಸಂಪರ್ಕ ಮಾಡಿದ್ದು ಟೋಲ್ ಗೇಟ್ ನಲ್ಲಿ   ವಾಹನ ಪಾಸ್ ಆದ ಆಧಾರದ ಮೇಲೆ ಪೊಲೀಸರು ತನಿಖೆ  ನಡೆಸುತ್ತಿದ್ದಾರೆ.