ಬನ್ನಿಕೊಪ್ಪ ರಾಷ್ಟ್ರೀಯ ಹೆದ್ದಾರಿ ಕಿರುಸೇತುವೆಗೆ ಕಾರು ಡಿಕ್ಕಿ: ನಾಲ್ವರು ದುರಂತ ಸಾವು
ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಕಿರು ಸೇತುವೆಯ ಪಕ್ಕದ ಗೋಡೆಗೆ ಮದ್ಯಾಹ್ನದ ವೇಳೆಯೇ ವೇಗವಾಗಿ ಬರುತ್ತಿದ್ದ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಕೊಪ್ಪಳ (ಫೆ.16): ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿದ್ದ ಕಿರು ಸೇತುವೆಯ ಪಕ್ಕದ ಗೋಡೆಗೆ ಮದ್ಯಾಹ್ನದ ವೇಳೆಯೇ ವೇಗವಾಗಿ ಬರುತ್ತಿದ್ದ ಕಾರು ಗುದ್ದಿದ್ದು, ಕಾರಿನಲ್ಲಿದ್ದ ಚಾಲಕ ಸೇರಿದಂತೆ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಕೊಪ್ಪಳ ಜಿಲ್ಲೆಯ ಕೂಕುನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದ ಬಳಿ ಘಟನೆ ನಡೆದಿದೆ.
ಕಿರು ಸೇತುವೆಯ ಗೋಡೆಗೆ ಗುದ್ದಿದ ಕಾರು ಅಪಘಾತದಲ್ಲಿ ಇಬ್ಬರು ಮಹಿಳೆಯರು ಮತ್ತು ಚಾಲಕ ಸೇರಿ ಇಬ್ಬರು ಪುರುಷರು ಸೇರಿದಂತೆ ಸ್ಥಳದಲ್ಲಿಯೇ ನಾಲ್ವರೂ ಕೂಡ ಸಾವನ್ನಪ್ಪಿದ್ದಾರೆ. ಈ ಮೃತರನ್ನು ತೆಲಂಗಾಣ ರಾಜ್ಯದವರೆಂದು ಗುರುತಿಸಲಾಗಿದೆ. ಕೂಕುನೂರು ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದಾರೆ. ಕೊಪ್ಪಳದಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಕಾರು ಅಪಘಾತಕ್ಕೆ ಒಳಗಾಗಿದೆ.
ಕಾರು ಅಪಘಾತದಲ್ಲಿ ಸಾವನ್ನಪ್ಪಿದವರನ್ನು ವೆನ್ನಿಲ್ಲಾ (25), ರೂಪವತಿ(26), ಷಣ್ಮುಖ (28) ಎಂದು ಗುರುತಿಸಲಾಗಿದೆ. ಆದರೆ, ಇನ್ನೊಬ್ಬ ವ್ಯಕ್ತಿಯ ಮೃತದೇಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗುರುತಿಸಲು ಸಾಧ್ಯವಾಗದಂತೆ ಇದೆ. ಇನ್ನು ಈ ಕಾರಿನ್ನು ತೆಗೆದುಕೊಂಡು ಬರುವಾಗ ಯಾರಾರು ತೆಲಂಗಾಣದಿಂದ ಹೊರಟಿದ್ದರು ಎಂಬ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಮಾಹಿತಿ ನೀಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಮೃತರ ಸಂಬಂಧಿಕರಿಗೆ ವಿಷಯ ತಿಳಿಸಿದ್ದು, ಮೃತ ದೇಹಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ಪತ್ನಿಯ ಶೀಲದ ಮೇಲೆ ಶಂಕೆ!: ಕಲ್ಲು ಎತ್ತಿಹಾಕಿ ಕೊಲೆ ಮಾಡಿದ ಪತಿ
ತುಂಡರಿಸಿ ಬಿದ್ದ ಕಾರಿನ ಮುಂಭಾಗ : ಇನ್ನು ಕಾರು ವೇಗವಾಗಿ ಬಂದು ತಡೆಗೋಡೆಗೆ ಗುದ್ದಿದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ತುಂಡಾಗಿ ಬಿದ್ದಿದೆ. ಕಾರಿನ ಒಂದು ಚಕ್ರವೂ ಹೊರಗೆ ಬಿದ್ದಿದ್ದು, ಸುಮಾರು ಮೂರು ಎರಡೂವರೆ ಅಡಿ ಎತ್ತರದ ಗೋಡೆ ಕಾರಿನ ಭಾಗವನ್ನು ನಜ್ಜುಗುಜ್ಜಾಗುವಂತೆ ಮಾಡಿದೆ. ಇನ್ನು ಹೆಚ್ಚು ಬಿಸಿಲು ಇದ್ದುದರಿಂದ ರಸ್ತೆಯ ಪಕ್ಕದಲ್ಲಿದ್ದ ಗೋಡೆ ಚಾಲಕನಿಗೆ ಸರಿಯಾಗಿ ಕಾಣಿಸಿಲ್ಲವೆಂದು ಕಾಣುತ್ತದೆ. ಹೀಗಾಗಿ, ವೇಗವಾಗಿ ಬಂದು ಗುದ್ದಿದ್ದು, ಈ ರಭಸಕ್ಕೆ ಕಾರಿನಲ್ಲಿದ್ದವರಿಗೂ ದೊಡ್ಡ ಪ್ರಮಾಣದ ಹಾನಿಯಾಗಿ ಸಾವನ್ನಪ್ಪಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಬೈಕ್‌ಗೆ ಡಿಕ್ಕಿ ಹೊಡೆದ ಕಾರು- ಬೈಕ್ ಸವಾರರಿಗೆ ಗಂಭೀರ ಗಾಯ
ಕೊಪ್ಪಳ (ಫೆ.16): ಕೊಪ್ಪಳದ ಜಿಲ್ಲೆಯ ಅಳವಂಡಿ ಗ್ರಾಮದ ರಸ್ತೆಯಲ್ಲಿ ಬೈಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಈ ದುರ್ಘಟನೆಯಲ್ಲಿ ಇಬ್ಬರು ಬೈಕ್ ಸವಾರರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಪ್ಪಳದ ಬಳಿಯಿರುವ ಅಳವಂಡಿ ಹಾಗೂ ಹಿರೇಸಿಂದೋಗಿ ರಸ್ತೆಯಲ್ಲಿ ಅಪಘಾತ ಘಟನೆ ನಡೆದಿದೆ. ರಸ್ತೆಯನ್ನು ದುರಸ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ರಸ್ತೆ ಅಗೆಯಲಾಗಿದ್ದು, ಗುಂಡಿ ತಪ್ಪಿಸಲು ಮುಂದಾದಾಗ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ಗೆ ಡಿಕ್ಕಿಯಾಗಿದೆ. ಕೋಳೂರುನಿಂದ ಬರುತ್ತಿದ್ದ ಬೈಕ್ ಹಾಗೂ ಅಳವಂಡಿಯಿಂದ ಬರುತ್ತಿದ್ದ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ರಸ್ತೆಯ ಪಕ್ಕದ ಜಮೀನಿಗೆ ಕಾರು, ಬೈಕ್ ಉರುಳಿ ಬಿದ್ದಿವೆ.
Pocso case: ಅಪ್ರಾಪ್ತೆಗೆ ಮಗು ಜನನ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಹೊಲದ ಕೆಲಸಕ್ಕೆ ಹೊರಟಿದ್ದ ಬೈಕ್ ಸವಾರು: ಬೈಕ್ ಸವಾರರಾದ ಮಂಜುನಾಥ ರೆಡ್ಡಿ ಕೋಳೂರು, ಚಂದಣ್ಣ ಅಳವಂಡಿ ಬಳಿಯಿರುವ ತಮ್ಮ ಜಮೀನು ಕೆಲಸಕ್ಕೆ ಹೊರಟಿದ್ದರು. ಆದರೆ, ಅಳವಂಡಿ ನಿವಾಸಿ ರಾಜಾಸಾಬ್‌ಎನ್ನುವವರ ಕಾರು ಬಂದು ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯವಾಗಿದೆ. ಇನ್ನು ಗಾಯಾಳುಗಳನ್ನು ಕೊಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಘಟನೆಯು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.