Asianet Suvarna News Asianet Suvarna News

ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ, ನಾಲ್ವರು ಸ್ಥಳದಲ್ಲೇ ಸಾವು!

ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.  ಟ್ರಕ್ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತವಾಗಿದೆ.

car and truck accident in Vijayapura many dead  gow
Author
First Published Apr 13, 2024, 8:43 AM IST

ವಿಜಯಪುರ (ಏ.13): ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತವಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.  ಟ್ರಕ್ ಹಾಗೂ ಕಾರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ದುರಂತವಾಗಿದ್ದು, ಕಾರನಲ್ಲಿದ್ದ ನಾಲ್ವರ ಸಾವು ಸ್ಥಳದಲ್ಲೆ ಸಾವು ಕಂಡಿದ್ದಾರೆ. ಓರ್ವ ಬಾಲಕ, ಮಹಿಳೆ, ಇನ್ನಿಬ್ಬರು ವ್ಯಕ್ತಿಗಳು  ಮೃತಪಟ್ಟಿದ್ದಾರೆ. 

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಘಟನೆ ನಡೆದಿದೆ. ವಿಜಯಪುರದಿಂದ ಜಮಖಂಡಿ ಕಡೆಗೆ ಹೊರಟಿದ್ದ ಕಾರು ಮತ್ತು ಜಮಖಂಡಿಯಿಂದ ವಿಜಯಪುರದ ಕಡೆಗೆ ಬರ್ತಿದ್ದ ಸಿಮೆಂಟ್‌ ಟ್ರಕ್ ನಡುವೆ ನಸುಕಿನ ಜಾವ ಈ ಅವಘಡವಾಗಿದೆ. ಸ್ಥಳಕ್ಕೆ ಬಬಲೇಶ್ವರ ಪೊಲೀಸರ ದೌಡಾಯಿಸಿದ್ದಾರೆ.

Rameshwaram Cafe Blast case ಹುಬ್ಬಳ್ಳಿಯಲ್ಲಿ ಶಂಕಿತ ಉಗ್ರ ವಶಕ್ಕೆ 

ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಗುರುತು ಪತ್ತೆಯಾಗಿದ್ದು, ವಿಜಯಪುರ ಮೂಲದ ಅರ್ಜುನ ಕುಶಾಲಸಿಂಗ್ ರಜಪೂತ (32), ರವಿನಾಥ ಸುನಿಲಾಲ್ ಪತ್ತಾರ ( 52 ), ಪುಷ್ಟಾ ರವಿನಾಥ ಪತ್ತಾರ ( 40), ಮೇಘರಾಜ ಅರ್ಜುನಸಿಂಗ್ ರಜಪೂತ (12) ಎಂದು ಗುರುತಿಸಲಾಗಿದೆ. ಮೃತರು ವಿಜಯಪುರದಿಂದ ಜಮಖಂಡಿಯ ದೇವಸ್ಥಾನಕ್ಕೆ KA 28 D 1021 ನಂಬರಿನ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ  ಜಮಖಂಡಿಯಿಂದ ಸಿಮೆಂಟ್ ಲೋಡ್ ಇದ್ದ KA 16 B 6472 ನಂಬರಿನ ಲಾರಿ ವಿಜಯಪುರದತ್ತ ಬರುತ್ತಿದ್ದ ವೇಳೆ ಮುಖಾಮುಖಿ ಡಿಕ್ಕಿ ಹೊಡೆದಿದೆ.

ಬಬಲೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶವಗಳ ಹೊರತೆಗೆದಿದ್ದಾರೆ.  ಸ್ಥಳಕ್ಕೆ ಎಸ್ಪಿ ಋಷಿಕೇಶ ಸೋನೆವಣೆ ಹಾಗೂ ಇತರ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಟ್ಟು 7 ಜನರು ಕಾರ್ ನಲ್ಲಿದ್ದರು. ಅದರಲ್ಲಿ ನಾಲ್ವರ ದುರ್ಮರಣ ಹೊಂದಿದ್ದಾರೆ. ಇನ್ನುಳಿದ ಮೂವರು ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳು ಜಿಲ್ಲಾಸ್ಪತ್ರೆಗೆ  ದಾಖಲು ಮಾಡಲಾಗಿದೆ. ಮರೋಣತ್ತರ ಪರೀಕ್ಷೆಗಾಗಿ ಮೃತ ದೇಹಗಳು ಜಿಲ್ಲಾ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಬೆಂಗಳೂರಿನಲ್ಲಿ ಭಿಕ್ಷಾಟನೆಯಲ್ಲಿದ್ದ 47 ಅಪ್ರಾಪ್ತ ಮಕ್ಕಳ ರಕ್ಷಣೆ, 36 ಮಹಿಳೆಯರು ಕೂಡ ವಶಕ್ಕೆ

 

Follow Us:
Download App:
  • android
  • ios