Asianet Suvarna News Asianet Suvarna News

ಐಷಾರಾಮಿ ಮನೆಗೆ ಬಂದಿದ್ದು ಕಳ್ಳತನಕ್ಕೆ; ಮಾಡಿಕೊಂಡಿದ್ದು ಆತ್ಮಹತ್ಯೆ!

ಐಷಾರಾಮಿ ಮನೆಗೆ ಕಳ್ಳತನಕ್ಕೆ ನುಗ್ಗಿದ್ದ ಮನೆಗಳ್ಳನೊಬ್ಬ ಅದೇ ಮನೆಯಲ್ಲಿ ದೇವರ ಕೋಣೆಯಲ್ಲಿ ನೇಣಿಗೆ ಶರಣಾಗಿರುವ ವಿಚಿತ್ರ ಘಟನೆ ನಡೆದಿದೆ. ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿರುವು ಈ ಘಟನೆ ಪೊಲೀಸರು ಸಂಶಯಾಸ್ಪದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Came to steal but he Committed suicide bengaluru indiranagar
Author
First Published Oct 22, 2022, 9:32 AM IST

ಬೆಂಗಳೂರು (ಅ.22) : ಬೆಂಗಳೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ಕಳೆದ ವರ್ಷಕ್ಕಿಂತ ಅಧಿಕವಾಗಿವೆ. ಸರ್ಕಾರ ಎಷ್ಟೇ ಕಟ್ಟುನಿಟ್ಟಿನ ಕ್ರಮ ಎಂದು ಹೇಳುತ್ತಿದ್ದರೂ, ಮನೆಗಳ್ಳರ ಹಾವಳಿ ನಿಯಂತ್ರಣಕ್ಕೆ ಬರುತ್ತಿಲ್ಲ. ಕುಟುಂಬ ಮನೆ ಬಿಟ್ಟು ಹೊರಹೋಗಲು ಭಯ ಪಡುತ್ತಿದ್ದಾರೆ. ಮನೆಗಳ್ಳರ ಜಾಲ ವ್ಯಾಪಕವಾಗಿ ಹರಡಿದೆ. ಒಂಟಿ ಮನೆಗಳು, ಹಲವು ದಿನಗಳಿಂದ ಲಾಕ್ ಹಾಕಿರುವ ಮನೆಗಳನ್ನು ಪತ್ತೆ ಹಚ್ಚುವ ಗ್ಯಾಂಗ್ ಅಂಥ ಮನೆಗಳಿಗೆ ನುಗ್ಗಿ ಚಿನ್ನಾಭರಣ, ಹಣ ದೋಚುತ್ತಿದ್ದಾರೆ. 

ಅತಿವೃಷ್ಟಿಯಿಂದ ಬೆಳೆ ಹಾನಿ: ಹಾವೇರಿಯಲ್ಲಿ 10 ತಿಂಗಳಲ್ಲಿ 112 ರೈತರ ಆತ್ಮಹತ್ಯೆ

ಮನೆಗಳತನಕ್ಕೆ ಐಷಾರಾಮಿ ಮನೆಗೆ ನುಗ್ಗಿದ ಕಳ್ಳನೊಬ್ಬ ಅದೇ ಮನೆಯ ದೇವರ ಕೋಣೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಪ್ರಕರಣವೊಂದು ಬೆಂಗಳೂರಿನ ಇಂದಿರಾನಗರದಲ್ಲಿ ನಡೆದಿದೆ.

ಯುರೋಪ್ ಪ್ರವಾಸಕ್ಕೆ ಹೋಗಿದ್ದ ಮನೆಯ ಕುಟುಂಬದವರು. ಐಷಾರಾಮಿ ಮನೆಯಲ್ಲಿ ಹಲವು ದಿನಗಳಿಂದ ಲಾಕ್ ಆಗಿರುವುದನ್ನು ಗಮನಿಸಿ ಮನೆಗಳ್ಳ ಐಷಾರಾಮಿ ಮನೆಗೆ ನುಗ್ಗಿದ್ದಾನೆ.  ಚಿನ್ನ, ಹಣ ದೋಚಿ ಪರಾರಿಯಾಗುವ ಬದಲು ದೇವರ ಕೋಣೆಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸರ ತಲೆಬಿಸಿ ಮಾಡಿದೆ. 

ಐಷಾರಾಮಿ ಮನೆಗೆ ಕಳ್ಳತನಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಅಸ್ಸಾಂ ಮೂಲದವನಾಗಿದ್ದು, ದಿಲೀಪ್ ಕುಮಾರ ಎಂದು ಗುರುತಿಸಲಾಗಿದೆ. ಬೆಂಗಳೂರಿನಲ್ಲಿ ಹಿಂದೆ ನಡೆದ ಹಲವು ಮನೆಗಳ್ಳತನ ಪ್ರಕರಣಗಳಲ್ಲಿಭಾಗಿಯಾಗಿದ್ದವನು.  ಮೃತ ದಿಲೀಪ್ ಕುಮಾರ್ ಮೇಲೆ ಎಂಒ ಕಾರ್ಡ್ ಕೂಡ ತೆರೆದಿದ್ದ ಪೊಲೀಸರು. 

ಸಾಲ ಮಾಡಿ ಖರೀದಿಸಿದ ಟ್ರಾಕ್ಟರ್ ಸೀಜ್, ಚೆಕ್ ಬೌನ್ಸ್: ರೈತ ಆತ್ಮಹತ್ಯೆ

ಯುರೋಪ್ ಪ್ರವಾಸಕ್ಕೆ ಹೋಗಿ ಮರಳಿದ್ದ ಕುಟುಂಬದವರು ಮನೆಗೆ ಬಂದಿದ್ದಾರೆ. ಈ ವೇಳೆ ಮನೆಯಲ್ಲಿ ಯಾರೋ ಇರುವ ಬಗ್ಗೆ ಅನುಮಾನ ಬಂದಿದೆ.  ಕೂಡಲೇ ದೇವರ ಮನೆ ಕಿಟಕಿ ತೆರೆದು ನೋಡಿದಾಗ, ಸೀಲಿಂಗ್ ಫ್ಯಾನ್‌ಗೆ ನೇತಾಡುತ್ತಿರುವುದು ಕಾಣಿಸಿದೆ. ಗಾಬರಿಗೊಂಡ ಕುಟುಂಬ ತಕ್ಷಣ ಇಂದಿರಾನಗರ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಇಂದಿರಾನಗರ ಪೊಲೀಸರಿಗೆ ಮೃತ ವ್ಯಕ್ತಿ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಮನೆಗಳ್ಳ ದಿಲೀಪ್ ಕುಮಾರ್ ಎಂಬುದು ಗೊತ್ತಾಗಿದೆ. ಆದರೆ ಕಳ್ಳತನಕ್ಕೆ ಬಂದು ಅದೇ ಮನೆಯಲ್ಲಿ ನೇಣುಹಾಕಿಕೊಂಡಿರುವುದು ಯಾಕೆ ಎಂಬುದು ತಲೆ ಬಿಸಿ ಮಾಡಿದೆ. ಅವನೊಂದಿಗೆ ಯಾರಾದರೂ ಬಂದು ಕೊಲೆ ಮಾಡಿರಬಹುದಾ? ಅಥವಾ ದೇವರ ಮನೆಯಲ್ಲಿ ಕಳ್ಳತನದ ಬಗ್ಗೆ ಪ್ರಾಯಶ್ಚಿತವಾಗಿ ದೇವರ ಮುಂದೆಯೇ ನೇಣಿಗೆ ಶರಣಾಗಿರಬಹುದಾ?  ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿರುವ ಇಂದಿರಾನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ

Follow Us:
Download App:
  • android
  • ios