ಭುವನೇಶ್ವರ[ನ.19]: ಮಾನವೀಯತೆ ಮರೆತ ಕ್ಯಾಬ್ ಚಾಲಕನೊಬ್ಬ ರಸ್ತೆ ಬದಿಯಲ್ಲಿದ್ದ ನಾಲ್ಕು ಪುಟ್ಟ ನಾಯಿ ಮರಿಗಳ ಮೇಲೆ ಕಾರು ಚಲಾಯಿಸಿರುವ ಘಟನೆ ಒಡಿಶಾದ ಭುವನೇಶ್ವರದಲ್ಲಿ ನಡೆದಿದೆ. ಪ್ರಾಣಿ ದಯಾ ಸಂಘದ ಸದಸ್ಯರು ನೀಡಿದ ದೂರನ್ನು ಸ್ವೀಕರಿಸಿದ ಪೊಲೀಸರು ಸದ್ಯ ಕ್ಯಾಬ್ ಚಾಲಕನನ್ನು ಬಂಧಿಸಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿರುವ ಭುವನೇಶ್ವರ ಡಿಸಿಪಿ ಅನುಪ್ ಕುಮಾರ್ ಸಾಹೂ 'ಭಾನುವಾರದಂದು ಈ ಘಟನೆ ನಡೆದಿದ್ದು, ಭುವನೇಶ್ವರದ ಶೈಲಶ್ರೀ ವಿಹಾರ್ ಪ್ರದೇಶದಲ್ಲಿ ಕ್ಯಾಬ್ ಚಾಲಕ ಕನ್ಹು ಚರಣ್ ಗಿರಿ ನಾಯಿ ಮರಿಗಳನ್ನು ಆಹುತಿ ಪಡೆದಿದ್ದಾನೆ. ಅಲ್ಲೇ ಕರ್ತವ್ಯದಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಕ್ಯಾಬ್ ಚಾಲಕನನ್ನು ತಡೆಯಲು ಯತ್ನಿಸಿದರಾದರೂ ಚಾಲಕ ಪರಾರಿಯಾಗಿದ್ದಾನೆ' ಎಂದಿದ್ದಾರೆ.

ಪೀಕ್ ಟೈಮ್‌ನಲ್ಲಿ ಬೆಲೆ ಹೆಚ್ಚಳವಿಲ್ಲ; ಪ್ರಯಾಣಿಕರಿಗೆ ಒಲಾ ಕೊಡುಗೆ!

ಘಟನೆಯ ಮಾಹಿತಿ ಪಡೆದ ಪ್ರಾಣಿ ದಯಾ ಸಂಘದ ಸದಸ್ಯರು ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಐಪಿಸಿ ಸೆಕ್ಷನ್ 279, 429 ಹಾಗೂ ಮೋಟಾರು ವಾಹನ ಕಾಯ್ದೆ184ರಡಿಯಲ್ಲಿ ಕ್ಯಾಬ್ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. 

2016ರ ಮಾರ್ಚ್ ನಲ್ಲಿ 8 ನಾಯಿ ಮರಿಗಳನ್ನು ಕೊಂದಿದ್ದ ಆರೋಪದಡಿಯಲ್ಲಿ ನಿವೃತ್ತ ವಾಯಿಸೇನಾಧಿಕಾರಿಯ ಪತ್ನಿಯನ್ನು ಬಂಧಿಸಲಾಗಿತ್ತು. ಬಳಿಕ ತಾನು ತಾಯಿ ನಾಯಿಗೆ ಬುದ್ಧಿ ಕಲಿಸುವ ಸಲುವಾಗಿ ಹೀಗೆ ಮಾಡಿದ್ದೆ ಎಂಬ ಉತ್ತರ ನೀಡಿದ್ದರು.