ಕಗ್ಗಲಿಪುರದಲ್ಲಿ ಬೆಂಗಳೂರಿನ ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಸೇರಿ ಒಟ್ಟು 6 ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್  ದಾಖಲಿಸಲಾಗಿದೆ. ಉದ್ಯಮಿ ಆತ್ಮಹತ್ಯೆ: ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್‌ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆ

ರಾಮನಗರ (ಜ.02): ಕಗ್ಗಲಿಪುರದಲ್ಲಿ ಬೆಂಗಳೂರಿನ ಉದ್ಯಮಿ ಪ್ರದೀಪ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಶಾಸಕ ಅರವಿಂದ್ ಲಿಂಬಾವಳಿ ಸೇರಿ ಒಟ್ಟು 6 ಜನರ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಿಸಲಾಗಿದೆ. ಉದ್ಯಮಿ ಪ್ರದೀಪ್‌ ಆತ್ಮಹತ್ಯೆ ಪ್ರಕರಣದಲ್ಲಿ ಶಾಸಕ ಅರವಿಂದ ಲಿಂಬಾವಳಿ ವಿರುದ್ಧ ಎಫ್‌ಐಆರ್‌ ಪ್ರಶ್ನಿಸಿ ಪೊಲೀಸರಿಗೆ ಪ್ರಭಾವಿಗಳ ಕರೆಗಳು ಬರುತ್ತಿವೆ.

ಐಪಿಸಿ 306 ಅಡಿಯಲ್ಲಿ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್ ಐ ಆರ್ ದಾಖಲು ಆಗಿದೆ. ಎಫ್ ಐ ಆರ್ ಆಧರಿಸಿ ಎಲ್ಲರನ್ನೂ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಸಾಧ್ಯತೆಯಿದೆ. ಈ ಪ್ರಕರಣದಿಂದ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸಂಕಷ್ಟ ಎದುರುಗಲಿದೆ. ಡೆತ್ ನೋಟ್ ನಲ್ಲಿ ಅರವಿಂದ್ ಲಿಂಬಾವಳಿ ಹೆಸರು ಉಲ್ಲೇಖಿಸಿದ್ದರಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಇವರಿಗೆ ಮತ್ತಷ್ಟು ಸಂಕಷ್ಟ ಎದುರಾಗುವ ಮುನ್ಸೂಚನೆ ಕಂಡುಬರುತ್ತಿದೆ. ಆರೋಪಿಗಳ ವಿರುದ್ಧ ಮೃತನ ಪತ್ನಿ ನೀಡಿದ ದೂರಿನನ್ವಯ ಎಫ್ ಐ ಆರ್ ದಾಖಲು ಮಾಡಲಾಗಿದೆ.

Aravind Limbavali: ವ್ಯಕ್ತಿ ಆತ್ಮಹತ್ಯೆ: ಡೆತ್‌ನೋಟಲ್ಲಿ ಲಿಂಬಾವಳಿ ಹೆಸರು, FIR ದಾಖಲು

ಡೆತ್‌ ನೋಟ್‌ನಲ್ಲಿದ್ದವರ ಎಲ್ಲರ ಮೇಲೂ ಎಫ್‌ಐಆರ್ ದಾಖಲು: 
1. ಗೋಪಿ ಕೆ. ಉದ್ಯಮಿ 
2. ಸೋಮಯ್ಯ, ಉದ್ಯಮಿ 
3. ಅರವಿಂದ್ ಲಿಂಬಾವಳಿ, ಶಾಸಕ
4. ಜಿ ರಮೇಶ್ ರೆಡ್ಡಿ, ಉದ್ಯಮಿ
5. ಜಯರಾಮ್ ರೆಡ್ಡಿ, ಉದ್ಯಮಿ 
6. ರಾಘವ ಭಟ್, ಉದ್ಯಮಿ

ಪೊಲೀಸರ ಮೇಲೆ ಭಾರಿ ಒತ್ತಡ: ಕಗ್ಗಲಿಪುರ ಬಳಿ ಪ್ರದೀಪ್ ಗುಂಡು ಹಾರಿಸಿಕೊಂಡು ಅತ್ಮ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಶಾಸಕ ಅರವಿಂದ ಲಿಂಬಾವಳಿ ಸೇರಿ ಹಲವರ ಮೇಲೆ ಎಫ್ ಐ ಆರ್ ದಾಖಲಾಗ್ತಿದ್ದಂತೆ ರಾಮನಗರ ಪೊಲೀಸರಿಗೆ ಸಾಲು ಸಾಲು ಕರೆ ಬರುತ್ತಿವೆ. ಲಿಂಬಾವಳಿ ಹೆಸರು ಎಫ್ ಐ ಆರ್ ನಲ್ಲಿ ದಾಖಲಿಸಿದ್ದಕ್ಕೆ ಪ್ರಭಾವಿಗಳಿಂದ ಹಾಗೂ ಹಿರಿಯ ಅಧಿಕಾರಿಗಳಿಂದ ಕರೆ ಮಾಡಿ ಒತ್ತಡ ಹೇರಲಾಗುತ್ತಿದೆ. ಲಿಂಬಾವಳಿ ಹೆಸರು ಎಫ್ ಐ ಆರ್ ನಲ್ಲಿ ಲಿಂಬಾವಳಿ ಹೆಸರು ದಾಖಲಿಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಎಫ್ ಐ ಆರ್ ನಲ್ಲಿ ಶಾಸಕ ಅರವಿಂದ ಲಿಂಬಾವಳಿ ಎ-3 ಆರೋಪಿ ಆಗಿದ್ದಾರೆ. ಇಷ್ಟೊಂದು ತುರ್ತಾಗಿ ಎಫ್ ಐ ಆರ್ ದಾಖಲಿಸಿರೋದು ಯಾಕೆ ಎಂದು ಪ್ರಶ್ನೆ ಮಾಡಲಾಗಿದೆ. 

ಪ್ರದೀಪ್ ಬಾಲ್ಯದ ಸ್ನೇಹಿತ ಕುಮಾರ್ ಹೇಳಿಕೆ: ನಾನು ಮತ್ತು ಪ್ರದೀಪ್‌ 5 ನೇ ತರಗತಿಯಿಂದಲೂ ಇಬ್ಬರು ಜೊತೆಗೆ ಓದಿದ್ದೇವೆ. ಮೊದಲಿಗೆ ಹೋಟೆಲ್ ಬಿಸಿನೆಸ್ ಶುರು ಮಾಡಿದ್ದನು. ಇದಾದ ಬಳಿಕ ಹಲವು ರೀತಿಯ ಬಿಸಿನೆಸ್ ಮಾಡಲು ಮುಂದಾದನು. ಕೆಲ ವರ್ಷಗಳ ಹಿಂದೆ ಓಪೋಸ್ ಅನ್ನೋ ಪಬ್ ತೆರೆದಿದ್ದ. 80-90 ಲಕ್ಷದಷ್ಟು ಹಣ ಅದರಲ್ಲಿ ಹಾಕಿದ್ದೆ ಅಂತ ಹೇಳಿದ್ದನು. ಆದರೆ ಅದರಲ್ಲಿ ನಷ್ಟ ಆಗಿದೆ ಅಂತಾನೂ ಹೇಳ್ತಾ ಇದ್ದ. ಶಾಸಕರ ಹೆಸರು ಯಾಕೆ ಬರೆದಿದ್ದಾನೆ ಅಂತ ಗೊತ್ತಿಲ್ಲ. ಶಾಸಕರ ಜೊತೆಗೆ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದನು. ಎಲೆಕ್ಷನ್ ಟೈಂನಲ್ಲಿ ಪ್ರಚಾರಕ್ಕೂ ಸಹ ಹೋಗಿದ್ದ. ಆದರೆ, ಯಾಕೆ ಇಂತಹ ನಿರ್ಧಾರ ಮಾಡಿದ್ನೋ ಗೊತ್ತಿಲ್ಲ ಎಂದು ಪ್ರದೀಪ್ ಸ್ನೇಹಿತ ಕುಮಾರ್ ಹೇಳಿಕೆ ನೀಡಿದ್ದಾರೆ.

ಸಾವಿನ ಬಗ್ಗೆ ಸಿಎಂ ಹೇಳಿದ್ದೇನು?: ಬೆಂಗಳೂರಿನ ಉದ್ಯಮಿ ಪ್ರದೀಪ್ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಲಿಂಬಾವಳಿ ಮೇಲೆ ಎಫ್ ಐಅರ್ ದಾಖಲಿಸಲಾಗಿದೆ. ಮುಂದೆ ಏನು ನಡೆಯಬೇಕೋ ಅದೆಲ್ಲವೂ ಕಾನೂನಾತ್ಮಕವಾಗಿ ನಡೆಯಲಿದೆ. 

ಘಟನೆ ವಿವರವೇನು?: ವ್ಯವ​ಹಾ​ರ​ದ​ಲ್ಲಿ ಮೋಸ ಮಾಡಿ​ದ​ರೆಂಬ ಕಾರ​ಣಕ್ಕೆ ರಾಜಕಾರಣಿಯೊಬ್ಬರ ಹೆಸರು ಸೇರಿದಂತೆ ಪ್ರಭಾವಿಗಳ ಹೆಸರು ಉಲ್ಲೇಖಿಸಿ ಡೆತ್‌ನೋಟ್‌(Death note) ಬರೆ​ದಿಟ್ಟು ವ್ಯಕ್ತಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿ​ಕೊಂಡಿ​ರುವ ಘಟನೆ ರಾಮನಗರ(Ramanagara) ತಾಲೂ​ಕಿನ ನೆಟ್ಟಿ​ಗೆರೆ ಗ್ರಾಮದ ಬಳಿ ನಡೆ​ದಿ​ದೆ. ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌(HSR Layout) ಬಳಿಯ ಅಮಲೀಪುರದ ನಿವಾಸಿ ಪ್ರದೀಪ್‌(47) ಆತ್ಮಹತ್ಯೆ(Suicidee )ಗೆ ಶರಣಾದವ​ರು. ಆತ್ಮ​ಹ​ತ್ಯೆಗೂ ಮುನ್ನ ಮಾಜಿ ಸಚಿವ ಅರವಿಂದ ಲಿಂಬಾವಳಿ(Arvind), ಉದ್ಯಮಿಗಳಾದ ಗೋಪಿ, ಸೋಮಯ್ಯ, ರಮೇಶ್‌ ರೆಡ್ಡಿ, ಡಾ ಜಯರಾಮರೆಡ್ಡಿ, ರಾಘವ ಭಟ್‌ ಅವರ ಹೆಸರನ್ನು ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಹೊಸ ವರ್ಷಾಚರಣೆ ಸಲುವಾಗಿ ಪ್ರದೀಪ್‌ ಕುಟುಂಬ ಸಮೇತ ರಾಮನಗರದ ಕಗ್ಗಲೀಪುರ ಸಮೀಪವಿರುವ ನೆಟ್ಟಗೆರೆ ಬಳಿ ಇರುವ ರೆಸಾರ್ಟ್ ಗೆ ​ಆ​ಗ​ಮಿ​ಸಿ​ದ್ದರು.

ವಾಹನ ಚಲಾಯಿಸುವಾಗ ಮೊಬೈಲ್‌ ಬಳಕೆ : 1040 ಜನ ಬಲಿ

ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ರಾತ್ರಿ ಪಾರ್ಟಿ ಮಾಡಿರುವ ಪ್ರದೀಪ್‌ ಬೆಳಗ್ಗೆ ಶಿರಾಗೆ ಹೋಗಬೇಕೆಂದು ಹೇಳಿರೆಸಾರ್ಟ್ ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿ ಡೆತ್‌ನೋಟ್‌ ಬರೆದಿದ್ದಾರೆ. ಆನತರ ರೆಸಾರ್ಚ್‌ಗೆ ವಾಪಸ್ಸಾದ ಪ್ರದೀಪ್‌, ಕಾರಿನಲ್ಲಿ ಮತ್ತೊಂದು ಡೆತ್‌ನೋಟ್‌ ಬರೆದಿದ್ದಾರೆ. ಈ ವೇಳೆ ಕುಟುಂಬದವರು ಹೊರಟ್ಟಿದ್ದ ಕಾರನ್ನು ಓವರ್‌ ಟೇಕ್‌ ಮಾಡಿ, ತಾನು ಚಲಾಯಿಸುತ್ತಿದ್ದ ಕಾರಿನಲ್ಲಿಯೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಲುದಾರಿಕೆ ಹೆಸರಲ್ಲಿ ಮೋಸ: ಎಚ್‌ಎಸ್‌ಆರ್‌ ಲೇಔಟ್‌ ಬಳಿ ರೆಸಾರ್ಟ್ ತೆರೆಯಲು ಐದು ಮಂದಿ ನನ್ನ ಬಳಿ ಮಾತುಕತೆ ನಡೆ​ಸಿ​ದ್ದರು. ಆದ​ರಂತೆ ಒಂದೂ​ವರೆ ಕೋಟಿ ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರುವು​ದರ ಜೊತೆಗೆ ಸಾಕಷ್ಟುಸಾಲ ಮಾಡಿಕೊಂಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ಪಾಲು​ದಾ​ರರೇ ನನಗೆ ಮೋಸ ಮಾಡಿದ್ದಾರೆ. ನನಗೆ ಒಟ್ಟು ಎರಡೂವರೆ ಕೋಟಿ ಹಣ ಬರಬೇಕಿತ್ತು. ಈ ಮಧ್ಯೆ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜಿ ಮಾಡುವ ಪ್ರಯತ್ನ ಮಾಡಿ ತಿಂಗಳಿಗೆ ಒಂದು ಲಕ್ಷದಂತೆ ಒಂಬತ್ತು ತಿಂಗಳು ಹಣ ನೀಡುವಂತೆ ಮಾತುಕತೆ ನಡೆಸಿ ಒಪ್ಪಿ​ಸಿದ್ದರು. ಅದರಂತೆ ಕೇವಲ 9 ಲಕ್ಷ ಹಣವಷ್ಟೆವಾಪಸ್‌ ಬಂದಿದೆ. ಆನಂತರ ಲಿಂಬಾವಳಿ ಅವ​ರು ಸಹ ನನಗೆ ಸಹಾಯ ಮಾಡಿಲ್ಲ ಎಂದು ಡೆತ್‌ನೋಟ್‌ನಲ್ಲಿ ಪ್ರದೀಪ್‌ ಬರೆ​ದಿ​ದ್ದಾ​ರೆ. ಹಿರಿಯ ಪೊಲೀಸ್‌ ಅಧಿ​ಕಾ​ರಿ​ಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿ​ಶೀ​ಲನೆ ನಡೆ​ಸಿ​ದರು. ಕಗ್ಗಲೀಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Scroll to load tweet…