ಮನೆಯಲ್ಲಿ ಸಾವಾಗುತ್ತೆ ಎಂದು ಬುಡುಬುಡುಕೆ ದಾಸ ಹೇಳಿದನ್ನ ನಂಬಿ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಬೆಂಗಳೂರು (ಆ.28): ಪೊಲೀಸರು ಎಷ್ಟೇ ಅರಿವು ಮೂಡಿಸಿದ್ರೂ ಜನ ಮಾತ್ರ ಬುದ್ದಿ ಕಲಿಯಲ್ಲ. ಮೌಡ್ಯಕ್ಕೆ ಬಲಿಯಾದವರ ಕಥೆ ಇದು. ಮನೆಯಲ್ಲಿ ಸಾವಾಗುತ್ತೆ ಎಂದು ನರ ಮನುಷ್ಯ ಹೇಳಿದನ್ನ ನಂಬಿ ಬೆದರಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಳೆದುಕೊಂಡ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌. ನಗರದ ಜ್ಞಾನ ಭಾರತಿ ಬಳಿಯ ಕೆಪಿಎಸ್ ಸಿ ಲೇಔಟ್ ನ ವರದರಾಜು ಎಂಬುವವರ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದರು. ಅವರ ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನ‌ ನೋಡಿ ಮನೆಗೆ ಬಂದಿದ್ದ ಬುಡುಬುಡುಕೆ ದಾಸ ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನ ಕೇಳಿ ದಂಪತಿ ಬೆದರಿದ್ದರು. ನಂತರ ಮಾರನೇ ದಿನವೂ ಬಂದಿದ್ದ ಬುಡುಬುಡುಕೆಯವನು, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನ ನೋಡಿ ಮತ್ತೆ ಮೂರು ಸಾವಗುತ್ತೆ ಎಚ್ಚರ ಮತ್ತೆ ಬೆದರಿಸಿದ್ದ. ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡುಬುಡಕೆಯವನನ್ನ ಮನೆಯೊಳಗೆ ಕರೆಸಿ ಮಾತನಾಡಿಸಿದ್ದಳು.

ಈ ವೇಳೆ ಪೂಜೆ ಮಾಡಬೇಕು ಐದು ಸಾವಿರ ಆಗುತ್ತೆ ಎಂದಿದ್ದ ಬುಡುಬುಡುಕೆಯವನು. ಐದು ಸಾವಿರ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಇರುವ ಬೊಟ್ಟನ್ನ ಹಣೆ ಹಚ್ಚಿದ್ದ. ಈ ಸಂಧರ್ಭದಲ್ಲಿ ಮೈಮೇಲಿದ್ದ ಒಡವೆಗಳ ಬುಡುಬುಡಕೆ ದಾಸ ಕೇಳಿದ್ದ. ಆಕೆಗೆ ಅರಿವಿಲ್ಲದಂತೆ ಅದನ್ನ ತೆಗೆದುಕೊಟ್ಟಿದ್ರು. ಒಂದು ಚೈನ್ ಹಾಗು ಎರಡು ಉಂಗುರವನ್ನ ಬಿಚ್ಚಿ ಕೊಟ್ಟಿದ್ರು. ಇದೇ 12 ಗಂಟೆಯೊಳಗೆ ಪೂಜೆ ಮಾಡಿ ಕೊಡ್ತೀನಿ ಎಂದು ಹೇಳಿ ತನ್ನ ಹೆಸರು ಕೃಷ್ಣಪ್ಪ ಎಂದು ಹೇಳಿ ಫೋನ್ ನಂಬರ್ ಇಟ್ಟು ಹೋಗಿದ್ದ. ಪತಿ ವರದರಾಜು ಬಂದ ಬಳಿಕ ಅಸಲಿ ಸಂಗತಿ ತಿಳಿದು ಕೃಷ್ಣಪ್ಪನ ನಂಬರ್ ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಮೋಸ ಹೋಗಿರೋ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ರು. ದೂರು ಪಡೆದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

48 ಪ್ರಕರಣದಲ್ಲಿ 45 ಬೈಕ್‌ ವಶ: 14 ಸೆರೆ
ಆನೇಕಲ್‌:ತಾಲೂಕಿನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ವಾಹನ ಕಳವು, ಮನೆಗಳವು ಸೇರಿದಂತೆ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಿದ ಪೊಲೀಸರು ಕಳವು ಮಾಲನ್ನು ವಶಪಡಿಸಿಕೊಂಡು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ಬೆಂಗಳೂರು: ದೂರವಾಗಿದ್ದ ಪ್ರಿಯಕರನ ಅಪಹರಿಸಿ ಥಳಿಸಿದ ಪ್ರಿಯತಮೆ..!

ಆನೇಕಲ್‌ ಉಪವಿಭಾಗದ ಹೆಬ್ಬಗೋಡಿ, ಸೂರ್ಯನಗರ, ಅತ್ತಿಬೆಲೆ, ಸರ್ಜಾಪುರ, ಬನ್ನೇರುಘಟ್ಟಪೊಲೀಸರು ಆರೋಪಿಗಳನ್ನು ಬಂಧಿಸಿ ಹೆಬ್ಬಗೋಡಿ ಠಾಣೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾಲಿಕರನ್ನು ಕರೆಸಿ ಮಾಲನ್ನು ಹಿಂತಿರುಗಿಸಿದರು.

ವಿದ್ಯಾರ್ಥಿನಿಗೆ ಬ್ಲ್ಯಾಕ್‌ಮೇಲ್‌, 1.9 ಕೆಜಿ ಚಿನ್ನ ಸುಲಿದ ಲವರ್ ಬಾಯ್!

ಎಸ್ಪಿ ಮಲ್ಲಿಕಾರ್ಜುನ ಬಾಲದಂಡೆ ಮಾಹಿತಿ ನೀಡಿ, ಪೊಲೀಸರು 48 ಪ್ರಕರಣ ಬೇಧಿಸಿದ್ದಾರೆ. ತಮಿಳುನಾಡಿನ 17 ಪ್ರಕರಣ ಪತ್ತೆ ಮಾಡಿದ್ದಾರೆ. 45 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು 14 ಮಂದಿ ಕಳ್ಳರನ್ನು ಬಂಧಿಸಿದ್ದಾರೆ. ಇವರಿಂದ 65 ಲಕ್ಷ ಮೌಲ್ಯದ ಬೈಕ್‌, ನಗ-ನಾಣ್ಯ ವಶಪಡಿಸಿಕೊಳ್ಳಲಾಗಿದೆ ಎಂದರು. ಅಡಿಷನಲ್‌ ಎಸ್ಪಿ ಪುರುಷೋತ್ತಮ್‌ ವಾಹನಗಳ ಮಾಲಿಕರಿಗೆ ಬೈಕ್‌ಗಳ ಕೀ, ಚಿನ್ನಾಭರಣ ಹಸ್ತಾಂತರಿಸಿದರು. ವೃತ್ತ ನಿರೀಕ್ಷಕರಾದ ಶ್ವನಾಥ್‌, ಜಗದೀಶ್‌, ಚಂದ್ರಪ್ಪ, ಸುದರ್ಶನ್‌ ಉಮಾಶಂಕರ್‌, ಮಂಜುನಾಥ್‌, ರಾಘವೇಂದ್ರ ಇದ್ದರು.