ಉತ್ತರ ಪ್ರದೇಶದಲ್ಲಿ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಮೈದುನನೊಬ್ಬ, ಸಂಬಂಧಕ್ಕೆ ಅಡ್ಡಿಯಾಗಿದ್ದ ಅಣ್ಣನನ್ನೇ ಕೊಲೆಗೈದಿದ್ದಾನೆ. ವಿಷ ಬೆರೆಸಿದ ಮದ್ಯ ಕುಡಿಸಿ ಕೊಲೆ ಮಾಡಿದ್ದು, ಮರಣೋತ್ತರ ಪರೀಕ್ಷೆಯ ವರದಿಯಿಂದ ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಸಂಬಂಧಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ತಾಯಿ ಸಮಾನವೆಂದು ತಿಳಿದುಕೊಳ್ಳುವ ಅತ್ತಿಗೆಯೊಂದಿಗೆ ಸ್ವತಃ ಮೈದುನನೇ ಅಕ್ರಮ ಸಂಬಂಧವನ್ನು ಹೊಂದಿದ್ದು, ಇದಕ್ಕೆ ಅಡ್ಡಿಯಾಗಿದ್ದ ಅತ್ತಿಗೆಯ ಗಂಡ ಅಂದರೆ ಸ್ವಂತ ಅಣ್ಣನನ್ನೆ ಕೊಲೆ ಮಾಡಿದ್ದಾನೆ. ಕೊಲೆಯನ್ನು ಸಹಜ ಸಾವು ಎಂದು ಬಿಂಬಿಸಲು ಮುಂದಾಗಿದ್ದು, ಮರಣೋತ್ತರ ಪರೀಕ್ಷೆಯಿಂದ ಕೊಲೆ ಎಂಬುದು ಸಾಬೀತಾಗಿದ್ದು, ಆರೋಪಿಯನ್ನ ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ.

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಕುಲ್ಪಹಾಡ್ ಠಾಣಾ ಕ್ಷೇತ್ರದ ಇಂದೋರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ದುರ್ಜನ್‌ಲಾಲ್ ಅಹಿರ್ವಾರ್ ಅವರ ಮಗ ಪರಮಲಾಲ್ ಅಹಿರ್ವಾರ್ (40) ಅವರನ್ನು ಜನವರಿ 18 ರಂದು ಗಂಭೀರ ಸ್ಥಿತಿಯಲ್ಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯರು ಅವರನ್ನು ಈತ ಸಾವನ್ನಪ್ಪಿದ್ದಾನೆ ಎಂದು ಘೋಷಿಸಿದರು. ಆದರೆ, ಮೃತರ ಮಗ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಚಿಕ್ಕಪ್ಪ ಖೇಮಚಂದ್ರ ಅಹಿರ್ವಾರ್ ತನ್ನ ತಂದೆಗೆ ಮದ್ಯದಲ್ಲಿ ವಿಷ ಬೆರೆಸಿ ಕುಡಿಸಿದ್ದರಿಂದ ಅವರ ಸಾವು ಸಂಭವಿಸಿದೆ ಎಂದು ಆರೋಪಿಸಿದ್ದಾನೆ. 

ಮರಣೋತ್ತರ ಪರೀಕ್ಷೆಯಿಂದ ಮಾಹಿತಿ ಬಹಿರಂಗ: ತನ್ನ ತಂದೆಯ ಸಾವಿನ ಪ್ರಕರಣದ ತನಿಖೆ ಮತ್ತು ಕ್ರಮ ಕೈಗೊಳ್ಳುವಂತೆ ಮಗ ಮನವಿ ಮಾಡಿದ್ದಾನೆ. ಪೊಲೀಸರು ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಇನ್ನು ತನಿಖಾ ವರದಿಯ ಬಗ್ಗೆ ಮಾಹಿತಿ ನೀಡಿದ ಕುಲ್ಪಹಾಡ್ ಕ್ಷೇತ್ರಾಧಿಕಾರಿ ಹರ್ಷಿತಾ ಗಂಗವಾರ್ ಅವರು, ಮೃತರ ಪೋಸ್ಟ್‌ಮಾರ್ಟಮ್ ವರದಿಯಲ್ಲಿ ವಿಷಪ್ರಾಶನದಿಂದ ಸಾವು ಸಂಭವಿಸಿದೆ ಎಂದು ದೃಢಪಟ್ಟಿದೆ. ಇದರ ನಂತರ ಪೊಲೀಸರು ಸಾಕ್ಷಿಗಳ ಹೇಳಿಕೆಗಳು ಮತ್ತು ತನಿಖೆಯ ಆಧಾರದ ಮೇಲೆ ಆರೋಪಿ ಖೇಮಚಂದ್ರ ಅಹಿರ್ವಾರ್‌ನನ್ನು ಬಂಧಿಸಿದ್ದಾರೆ. ವಿಚಾರಣೆಯಲ್ಲಿ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: ಅಪ್ರಾಪ್ತ ಮೈದುನನೊಂದಿಗೆ 2 ಮಕ್ಕಳನ್ನು ಬಿಟ್ಟು ಓಡಿಹೋದ ಅತ್ತಿಗೆ; ಕಣ್ಣೀರಿಡುತ್ತಿರುವ ಅಣ್ಣ!

ಅತ್ತಿಗೆಯೊಂದಿಗಿನ ಅಕ್ರಮ ಸಂಬಂಧಕ್ಕೆ ಕೊಲೆ: ಇನ್ನು ಪೊಲೀಸರ ವಿಚಾರಣೆಯನ್ನು ಮೃತನ ಸಹೋದರ ಆರೋಪಿ ಖೇಮಚಂದ್ರ ಅಹಿರ್ವಾರ್ ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾಗಿ ತಿಳಿಸಿದ್ದಾನೆ. ಆದರೆ, ಆತ ತನ್ನ ಮತ್ತು ಅತ್ತಿಗೆ ಸಂಬಂಧಕ್ಕೆ ಅಣ್ಣನೇ ಅಡ್ಡಿಯಾಗಿದ್ದನು. ಈ ಕಾರಣಕ್ಕಾಗಿ ಅವನು ಸೇವನೆ ಮಾಡುತ್ತಿದ್ದ ಮದ್ಯದಲ್ಲಿ ವಿಷ ಬೆರೆಸಿ ಕೊಲ್ಲುವ ಸಂಚು ರೂಪಿಸಿ, ನಂತರ ಈತನಿಗೆ ಮದ್ಯದಲ್ಲಿ ವಿಷಬೆರೆಸಿ ಕೊಟ್ಟು ಈ ಕೃತ್ಯ ಎಸಗಲಾಗಿದೆ ಎಂದು ತಿಳಿಸಿದ್ದಾನೆ.

ಗ್ರಾಮದಲ್ಲಿ ಸಂಚಲನ: ಈ ಘಟನೆ ಇಡೀ ಗ್ರಾಮದಲ್ಲಿ ಸಂಚಲನ ಮೂಡಿಸಿದೆ. ಕೌಟುಂಬಿಕ ಸಂಬಂಧಗಳನ್ನು ಕಳಂಕಗೊಳಿಸುವ ಈ ಕೊಲೆಯ ಚರ್ಚೆ ಎಲ್ಲೆಡೆ ನಡೆಯುತ್ತಿದೆ. ಪೊಲೀಸರು ಆರೋಪಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.