ಪ್ರಯಾಗರಾಜ್ ನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಫಸ್ಟ್ನೈಟ್ ನಲ್ಲಿ ವಧು ಹಾಲಿನ ಬದಲು ಚಾಕು ಹಿಡಿದು ರೂಮಿಗೆ ಬಂದಿದ್ದಾಳೆ. ಅವಳ ಮಾತು ಕೇಳಿ ವರ ಬೆವರಿ ಮೂಲೆ ಸೇರಿದ್ದ.
ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ (Boyfriend) ಜೊತೆ ಜೀವನ ನಡೆಸೋಕೆ ಹುಡುಗೀರಿಗೆ ಮದುವೆ ದಾಳವಾಗಿದೆ. ಅಮಾಯಕರನ್ನು ಮದುವೆ ಮಾಡ್ಕೊಂಡು, ಅವ್ರನ್ನ ಹೆದರಿಸಿ ಇಲ್ವೆ ಹತ್ಯೆ ಮಾಡಿ ನಂತ್ರ ಬಾಯ್ ಫ್ರೆಂಡ್ ಬಳಿ ಹೋಗ್ತಿರೋ ಪ್ರಕರಣ ಹೆಚ್ಚಾಗಿದೆ. ಮದುವೆಯಾದ ಹುಡುಗ ಒಳ್ಳೆಯವನಾದ್ರೂ ಕಷ್ಟ, ಕೆಟ್ಟವನಾದ್ರೂ ಕಷ್ಟ. ಪತಿ ಒಳ್ಳೆಯವನು, ಅವನಷ್ಟು ಒಳ್ಳೆ ಗಂಡ ನನಗೆ ಬೇಡ ಅಂತ ಮದುವೆಯಾದ ನಾಲ್ಕೇ ದಿನಕ್ಕೆ ಮಹಿಳೆಯೊಬ್ಬಳು ಪತಿಗೆ ಡಿವೋರ್ಸ್ ನೀಡಿದ್ದಾಳೆ. ಇನ್ನು ಸೋನಂ, ಐಶ್ವರ್ಯ ಕಥೆ ಮತ್ತಷ್ಟು ಭಿನ್ನವಾಗಿದೆ. ಅವ್ರು ಡಿವೋರ್ಸ್ ಬಗ್ಗೆ ಯೋಚನೆ ಮಾಡ್ದೆ ಡೈರೆಕ್ಟ್ ಹತ್ಯೆಗೆ ಸ್ಕೆಚ್ ಹಾಕಿ, ಗಂಡನ ಕಥೆಯನ್ನೇ ಮುಗಿಸಿದ್ದಾರೆ. ದಿನಕ್ಕೊಂದು ಇಂಥ ಸುದ್ದಿ ಹೊರ ಬರ್ತಿದ್ದಂತೆ ಹುಡುಗೀರ ಮೇಲೆ ನಂಬಿಕೆ ಕಡಿಮೆ ಆಗ್ತಿದೆ. ಮದುವೆ ಆದ್ಮೇಲೆ ಹುಡುಗ್ರು ಪ್ರಾಣ ಕೈನಲ್ಲಿ ಹಿಡ್ಕೊಂಡು ಬದುಕುವಂತಾಗಿದೆ. ಪತ್ನಿಯಿಂದ ಅಪಾಯ ಎಲ್ಲಿಂದ, ಯಾವಾಗ ಬೇಕಾದ್ರೂ ಬರ್ಬಹುದು. ಉತ್ತರ ಪ್ರದೇಶದ ಪ್ರಯಾಗ್ರಾಜ್ ಹುಡುಗನೊಬ್ಬ ಕೂದಲೆಳೆಯಲ್ಲಿ ಬಚಾವ್ ಆಗಿದ್ದಾನೆ. ಮೂರ್ನಾಲ್ಕು ದಿನ ನಿದ್ರೆ ಮಾಡ್ದೆ ಕಣ್ಣು ಬಿಟ್ಕೊಂಡು ಕುಳಿತಿದ್ದ ಹುಡುಗ ಕೊನೆಗೂ ನಿರಾಳನಾಗಿದ್ದಾನೆ. ಬಡ ಜೀವ ಉಳಿತು ಅಂತ ನಿಟ್ಟುಸಿರು ಬಿಟ್ಟಿದ್ದಾನೆ.
ಕಪ್ತಾನ್ ಮತ್ತು ಸಿತಾರ ಅರೇಂಜ್ಡ್ ಮ್ಯಾರೇಜ್ ಮಾಡ್ಕೊಂಡಿದ್ರು. ಮದುವೆಗೆ ಮುನ್ನ ಕಪ್ತಾನ್ ಫುಲ್ ಖುಷಿಯಲ್ಲಿದ್ದ. ಮದುವೆ ನಂತ್ರ ಲೈಫ್ ಇನ್ನಷ್ಟು ಕಲರ್ಫುಲ್ ಆಗಿರುತ್ತೆ ಅಂದ್ಕೊಂಡಿದ್ದ. ಕಪ್ತಾನ್ ಕುಟುಂಬಸ್ಥರು ಕೂಡ ಸೀತಾರಾಳನ್ನು ಅದ್ಧೂರಿಯಾಗಿ ವೆಲ್ ಕಂ ಮಾಡ್ಕೊಂಡಿದ್ರು. ಆದ್ರೆ ಫಸ್ಟ್ ನೈಟ್ ನಲ್ಲೇ ಕಪ್ತಾನ್ ಬೆವರಿಳಿದಿದೆ. ಯಾಕಪ್ಪ ಮದುವೆ ಆದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಫಸ್ಟ್ನೈಟ್ ಆಗಿದ್ದೇನು? : ಫಸ್ಟ್ ನೈಟ್ (First Night) ದಿನ ಎಲ್ಲರೂ ಹಾಲು ಹಿಡಿದು ಬಂದ್ರೆ ಸಿತಾರಾ ಚಾಕು ಹಿಡಿದು ಬಂದಿದ್ಲು. ಸಿತಾರಾ ಕನಸು ಕಾಣ್ತಾ ಕುಳಿತಿದ್ದ ಕಪ್ತಾನ್ ಗೆ ಸಿತಾರಾ ವರ್ತನೆ ನೋಡಿ ಶಾಕ್ ಆಗಿತ್ತು. ಗಂಡ ಹತ್ತಿರ ಬರ್ತಿದ್ದಂತೆ ಚಾಕು ತೋರಿಸಿದ ಸಿತಾರಾ, ಹತ್ತಿರ ಬಂದ್ರೆ ಹುಷಾರ್. ನನ್ನನ್ನು ಮುಟ್ಟಿದ್ರೆ 35 ತುಂಡುಗಳಾಗಿ ನಿನ್ನನ್ನು ಕತ್ತರಿಸ್ತೇನೆ ಅಂತ ಎಚ್ಚರಿಕೆ ನೀಡಿದ್ಲು. ರಾತ್ರಿ ಪೂರ್ತಿ ಸರಿಯಾಗಿ ನಿದ್ರೆ ಮಾಡದ ಕಪ್ತಾನ್, ಹನಿಮೂನ್ಗೆ ಹೋಗೋದಿರಲಿ, ಮನೆಯಲ್ಲಿ ಇರೋದಕ್ಕೂ ಹೆದರಿದ್ದ. ಬರೀ ಒಂದು ರಾತ್ರಿಯಲ್ಲಿ ಸತತ ಮೂರು ರಾತ್ರಿ ಸಿತಾರಾ ಇದೇ ಬೆದರಿಕೆ ಹಾಕಿ, ಕಪ್ತಾನ್ ನನ್ನು ದೂರ ಮಲಗಿಸಿದ್ಲು.
ಮದುವೆಯಾಗಿ ಮೂರು ದಿನವಾದ್ರೂ ಸಿತಾರಾ ಬದಲಾಗಿರಲಿಲ್ಲ. ಉಸಿರುಗಟ್ಟಿಸುವ ವಾತಾವರಣದಲ್ಲಿ ಇರೋಕಾಗ್ದೆ ಕಪ್ತಾನ್ ತನ್ನ ಅಮ್ಮನಿಗೆ ವಿಷ್ಯ ತಿಳಿಸಿದ್ದಾನೆ. ಮನೆಯಲ್ಲಿ ಇದ್ರ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಕಪ್ತಾನ್ ಕುಟುಂಬ ಹಾಗೂ ಸಿತಾರಾ ಮಧ್ಯೆ ಗಲಾಟೆಯಾಗಿದೆ. ಯಾವುದಕ್ಕೂ ಸಿತಾರಾ ಕ್ಯಾರೆ ಎನ್ನಲಿಲ್ಲ. ನಾನು ಕಪ್ತಾನ್ ಪ್ರೀತಿ ಮಾಡೋದಿಲ್ಲ. ನನಗೆ ಬಾಯ್ ಫ್ರೆಂಡ್ ಇದ್ದಾನೆ. ನನ್ನನ್ನು ಅಮನ್ ಜೊತೆ ಕಳುಹಿಸಿ ಅಂತ ಕಪ್ತಾನ್ ಮನೆಯವರಿಗೆ ಆರ್ಡರ್ ಮಾಡಿದ್ದಾಳೆ. ವಿಷ್ಯ ಅಲ್ಲಿಗೆ ನಿಲ್ಲಲಿಲ್ಲ. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪಂಚಾಯತಿ ಕೂಡ ನಡೀತು. ಸಿತಾರಾ ಮನವೊಲಿಸೋಕೆ ಎಲ್ಲ ಕಡೆಯಿಂದ ಕಪ್ತಾನ್ ಪ್ರಯತ್ನ ಮಾಡಿದ್ದ. ಆದ್ರೆ ಪ್ರಯೋಜನವಾಗ್ಲಿಲ್ಲ. ಮರುದಿನ ಮಾಸ್ಟರ್ ಪ್ಲಾನ್ ಮಾಡಿದ ಸಿತಾರಾ, ರಾತ್ರಿ ಎಲ್ಲರೂ ಮಲಗಿದ್ಮೇಲೆ ಗೋಡೆ ಹಾರಿ ಪ್ರೇಮಿ ಜೊತೆ ಓಡಿ ಹೋಗಿದ್ದಾಳೆ. ಸಿತಾರಾ ಓಡಿ ಹೋಗಿದ್ದ ಕಪ್ತಾನ್ ಗೆ ಬೇಸರವಾದ್ರೂ ಜೀವ ಉಳಿತು ಎನ್ನುವ ನೆಮ್ಮದಿಯಲ್ಲಿ ಮನೆಯವರಿದ್ದಾರೆ.
