ಮದ್ವೆಯಾದ ಮರುದಿನವೇ ಲಕ್ಷ ಲಕ್ಷ ಹಣ, ಒಡವೆಯೊಂದಿಗೆ ಎಸ್ಕೇಪ್‌ ಆದ ವಧು!

ಮದುವೆಯಾದ ಮರು ದಿನವೇ ತನ್ನ ಗಂಡನ ಮನೆಯಿಂದ 1.5 ಲಕ್ಷ ನಗದು ಮತ್ತು ಆಭರಣಗಳ ಸಮೇತ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ.

bride runs away with 1 5 lakh rs cash jewellery on second day of marriage ash

ಗುರುಗ್ರಾಮ್‌ (ಅಕ್ಟೋಬರ್ 17, 2023): ಆಘಾತಕಾರಿ ಘಟನೆಯೊಂದರಲ್ಲಿ, ಹರ್ಯಾಣದ ಗುರುಗ್ರಾಮ್‌ ಜಿಲ್ಲೆಯ ಬಿಲಾಸ್‌ಪುರ ಪ್ರದೇಶದಲ್ಲಿ ಮಹಿಳೆಯೊಬ್ಬಳು ಮದುವೆಯಾದ ಮರುದಿನವೇ ಹಣ, ಒಡವೆಯೊಂದಿಗೆ ಓಡಿಹೋಗಿರುವ ಘಟನೆ ನಡೆದಿದೆ. ಮದುವೆಯಾದ ಎರಡನೇ ದಿನವೇ ತನ್ನ ಗಂಡನ ಮನೆಯಿಂದ 1.5 ಲಕ್ಷ ನಗದು ಮತ್ತು ಆಭರಣಗಳ ಸಮೇತ ಓಡಿಹೋಗಿದ್ದಾರೆ ಎಂದು ತಿಳಿದುಬಂದಿದೆ. ಬಿಲಾಸ್‌ಪುರದ ಭೋಡಾ ಖುರ್ದ್ ನಿವಾಸಿ ಅಶೋಕ್ ಕುಮಾರ್ ಅವರು ತಮ್ಮ ಕಿರಿಯ ಮಗನಿಗೆ ಮದುವೆ ಮಾಡಲು ಹುಡುಗಿಯನ್ನು ಹುಡುಕುತ್ತಿದ್ದರು. ಈ ವೇಳೆ, ಕುಮಾರ್‌ನ ಪರಿಚಯಸ್ಥರಲ್ಲಿ ಒಬ್ಬರಾದ ಮನೀಷ್‌ ಎಂಬುವರು ಮಂಜು ಎಂಬಾತನನ್ನು ಪರಿಚಯಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಅವರು ತನ್ನ ಮಗನಿಗೆ ಪರಿಪೂರ್ಣ ಹುಡುಗಿಯನ್ನು ಹುಡುಕಿ ಕೊಡುತ್ತೇವೆ ಎಂದು ತಿಳಿದಿದ್ದರು ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ. ಜುಲೈ ತಿಂಗಳಲ್ಲಿ ಈತನ ಪರಿಚಯಸ್ಥ ಭಟ್ಸಾನಾ ಗ್ರಾಮದ ಮನೀಷ್ ಎಂಬಾತ ಮಂಜು ಎಂಬ ಮಹಿಳೆಯನ್ನು ಪರಿಚಯ ಮಾಡಿಸಿದ್ದ. 

ಇದನ್ನು ಓದಿ: ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್‌!

"ಇದಾದ ನಂತರ ಪ್ರೀತಿ ಎಂಬ ಹುಡುಗಿ ನನ್ನ ಕುಟುಂಬಕ್ಕೆ ಇಷ್ಟವಾದಳು. ನಾನು ಅವಳ ಕುಟುಂಬಕ್ಕೆ  1 ಲಕ್ಷ ರೂ. ಮತ್ತು ಕೆಲವು ಬಟ್ಟೆಗಳನ್ನು ನೀಡಿದ್ದೇನೆ. ಜುಲೈ 26 ರಂದು ಮಂಜು ಮತ್ತು ಅವನ ಸಹಚರರು ಪ್ರೀತಿಯೊಂದಿಗೆ ಜಜ್ಜರ್ ನ್ಯಾಯಾಲಯಕ್ಕೆ ಬಂದರು. ಕೋರ್ಟ್‌ ಮದುವೆಯ ನಂತರ ನಾವು ಸೊಸೆಯೊಂದಿಗೆ ನನ್ನ ಮನೆಗೆ ಮರಳಿದೆ. ತಡರಾತ್ರಿಯವರೆಗೂ ನನ್ನ ಮನೆಯಲ್ಲಿ ಸಂಭ್ರಮಾಚರಣೆ ಇತ್ತು. ಆದರೆ ಬೆಳಗ್ಗೆ ನನ್ನ ಮಗ ಕೆಲಸಕ್ಕೆ ಹೋಗಿದ್ದಾಗ ಪ್ರೀತಿ ಕಾಣೆಯಾಗಿದ್ದಳು" ಎಂದು ಕುಮಾರ್ ತಿಳಿಸಿದ್ದಾರೆಂದು ವರದಿಯಾಗಿದೆ. 

ದೂರುದಾರರು ನಿವಾಸವನ್ನು ಪರಿಶೀಲಿಸಿದಾಗ ಪ್ರೀತಿ 1.5 ಲಕ್ಷ ರೂಪಾಯಿ ನಗದು ಮತ್ತು ಚಿನ್ನಾಭರಣಗಳೊಂದಿಗೆ ಪರಾರಿಯಾಗಿರುವುದು ಪತ್ತೆಯಾಗಿದೆ. ಪ್ರೀತಿಯೊಂದಿಗೆ ಸಂಪರ್ಕದಲ್ಲಿರಲು ಪ್ರಯತ್ನಿಸುವುದಾಗಿ ಭರವಸೆ ನೀಡಿದ ಮಂಜು ಎಂಬುವರನ್ನು ಕುಮಾರ್‌ ಸಂಪರ್ಕ ಮಾಡಿದರು. ಅವರು ಸಂಪರ್ಕಕ್ಕೆ ಬರದಿದ್ದಾಗ ಮಂಜು ಸಹಚರರೊಂದಿಗೆ ಕುಮಾರ್ ಸಂಪರ್ಕಕ್ಕೆ ಬಂದರು. ಅವರು ಕುಮಾರ್‌ ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನು ಓದಿ: ಹೊಸಕೋಟೆ ಬಿರಿಯಾನಿ ಹೋಟೆಲ್‌ ಮಾಲೀಕರಿಂದ ಜಿಎಸ್‌ಟಿ ವಂಚನೆ: ಕೋಟಿ ಕೋಟಿ ಹಣ ವಶಕ್ಕೆ!

ಈ ಸಂಬಂಧ ಅಕ್ಟೋಬರ್ 15 ರಂದು ಬಿಲಾಸ್‌ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಇದನ್ನೂ ಓದಿ: ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ

Latest Videos
Follow Us:
Download App:
  • android
  • ios