Asianet Suvarna News Asianet Suvarna News

Karnataka High Court: ಮದುವೆಯಾಗುವ ಭರವಸೆ ಉಲ್ಲಂಘಿಸೋದು ವಂಚನೆ ಅಲ್ಲ!

* ಮದುವೆಯಾಗುವ ಭರವಸೆ ಉಲ್ಲಂಘನೆ ಅಪರಾಧ ಅಲ್ಲ
* ಕರ್ನಾಟಕ ಹೈ ಕೋರ್ಟ್ ಮಹತ್ವದ ಆದೇಶ
* ಯುವಕ ಮತ್ತು ಆತನ ಕುಟುಂಬದ ಮೇಲೆ ದಾಖಲಾಗಿಉದ್ದ ಎಫ್‌ಐಆರ್

Breach of promise to marry not cheating under Section 420 IPC says Karnataka High Court mah
Author
Bengaluru, First Published Jan 25, 2022, 8:07 PM IST

ಬೆಂಗಳೂರು(ಜ. 25) ಮದುವೆಯಾಗುವುದಾಗಿ (Marriage) ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಕೂಕೊಟ್ಟ.. ಮದುವೆಯಾಗುವುದಾಗಿ ನಂಬಿಸಿ ವಂಚನೆ.. ಈ ರೀತಿ ಹಲವಾರು ಸುದ್ದಿಗಳನ್ನು  ಕೇಳುತ್ತ ಇರುತ್ತೇವೆ. ಆದರೆ ಇದೀಗ ಕರ್ನಾಟಕ ಹೈಕೋರ್ಟ್ (Karnataka High Court) ನೀಡಿರುವ ತೀರ್ಮಾನ ಇದೆಲ್ಲದಕ್ಕೆ ಭಿನ್ನವಾಗಿ ನಿಲ್ಲುತ್ತಿದೆ.

ಮದುವೆಯಾಗುತ್ತೇನೆ ಎಂದು  ನೀಡಿದ್ದ ಭರವಸೆ ಉಲ್ಲಂಘಿಸುವುದು ಭಾರತೀಯ ದಂಡ ಸಂಹಿತೆ (IPC)ಪ್ರಕಾರ ಅಪರಾಧ ಆಗುವುದಿಲ್ಲ ಎಂದು  ಕರ್ನಾಟಕ ಹೈಕೋರ್ಟ್ ಹೇಳಿದೆ.  ಮದುವೆಯಾಗುವ ಭರವಸೆಯನ್ನುಉಲ್ಲಂಘಿಸುವುದು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ವಂಚನೆಯಾಗುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಪುನರುಚ್ಚರಿಸಿದೆ.

ಯುವಕ ಮತ್ತು ಆತನ ಕುಟುಂಬದ ವಿರುದ್ಧ ದಾಖಲಾಗಿದ್ದ ಎಫ್‌ ಐಆರ್ ನ್ನು  ನ್ಯಾಯಮೂರ್ತಿ ಕೆ ನಟರಾಜನ್ ರದ್ದುಗೊಳಿಸಿ ಈ ಮಾತನ್ನು ಹೇಳಿದರು. ಮದುವೆಯಾಗುವುದಾಗಿ ಭರವಸೆಯ ಉಲ್ಲಂಘನೆಯು ಐಪಿಸಿಯ ಸೆಕ್ಷನ್ 417 ಮತ್ತು 420 ರ ಅಡಿಯಲ್ಲಿ ವಂಚನೆಯ ಅಪರಾಧವಾಗುವುದಿಲ್ಲ. ಅರ್ಜಿದಾರರ ವಿರುದ್ಧದ ವಿಚಾರಣೆ ಅಥವಾ ತನಿಖೆಯನ್ನು ಮುಂದುವರಿಸುವುದು ಪ್ರಕ್ರಿಯೆ ಕಾನೂನಿನ ದುರುಪಯೋಗವಾಗಿದೆ ಎಂದು  ಹೇಳಿದರು.

ಮಹಿಳೆಯೊಬ್ಬರು ದೂರು ದಾಖಲಿಸಿದ್ದರು.  8 ವರ್ಷಗಳ ಹಿಂದೆ ನಮ್ಮಿಬ್ಬರ ಪರಿಚಯ ಆಗಿತ್ತು. ಇಬ್ಬರು ಪ್ರೀತಿಸುತ್ತ  ಇದ್ದೆವು.   ಆದರೆ  ಕೊನೆ ಕ್ಷಣದಲ್ಲಿ ಮದುವೆಗೆ ಒಪ್ಪಿರಲಿಲ್ಲ. ಯುವಕ ಒಪ್ಪಿಕೊಂಡಿದ್ದರೂ ಅವರ ಕುಟುಂಬದವರು ಹೇಳಿದಂತೆ ಬೇರೆ ಮದುವೆಯಾಗಿ ನನ್ನನ್ನು ತೊರೆದ ಎಂದು ಮಹಿಳೆ ದೂರು ದಾಖಲಿಸಿದ್ದರು.

ಐಪಿಸಿಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆ), 506 (ಅಪರಾಧ ಬೆದರಿಕೆ) ಸೆಕ್ಷನ್ 34 (ಸಾಮಾನ್ಯ ಉದ್ದೇಶದಿಂದ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ದೂರು ದಾಖಲಾಗಿತ್ತು. 

ಮದುವೆಯಾಗುವ ಭರವಸೆಯು ಐಪಿಸಿಯ ಸೆಕ್ಷನ್ 415 (ವಂಚನೆ) ಅಡಿಯಲ್ಲಿ ಅಪರಾಧಿಯಾಗುವುದಿಲ್ಲ. ಇದಲ್ಲದೆ, ಮೇ 2020 ರಲ್ಲಿ ಪ್ರಕರಣವನ್ನು ದಾಖಲಿಸಿದ ನಂತರ, ಪೊಲೀಸರು ಯಾವುದೇ ತನಿಖೆ ನಡೆಸಲಿಲ್ಲ ಮತ್ತು ಕೇವಲ ವ್ಯಕ್ತಿ ಮತ್ತು ಅವನ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಆರೋಪಿ ಪರ ವಕೀಲರು ವಾದ ಮಂಡಿಸಿದ್ದರು.

ವಯಸ್ಕ ಹುಡುಗಿಯೊಂದಿಗೆ ಸಮ್ಮತಿ ಲೈಂಗಿಕ ಕ್ರಿಯೆ ಅಪರಾಧವಲ್ಲ ಆದರೆ ಅನೈತಿಕ : ಅಲಹಾಬಾದ್ ಹೈಕೋರ್ಟ್!

ಕರ್ನಾಟಕ ನ್ಯಾಯಾಲಯವು  ಮದ್ರಾಸ್ ಹೈಕೋರ್ಟಿನ KU ಪ್ರಭುರಾಜ್  ವರ್ಸಸ್  ರಾಜ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ AWPS ತಾಂಬರಂ ಮತ್ತು ಎಎನ್‌ ಆರ್ ಪ್ರಕರಣದ  ತೀರ್ಪು ಮತ್ತು SW ಪಳನಿಟ್ಕರ್ ಮತ್ತು ಓಆರ್ ಎಸ್ ವರ್ಸಸ್ ಬಿಹಾರ ಸರ್ಕಾರ ಪ್ರಕರಣದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲೇಖಿಸಿತು.  ಭರವಸೆ ಉಲ್ಲಂಘನೆಯ ಆಧಾರದಲ್ಲಿ ಅಪರಾಧಿ ಎಂದು  ಹೇಳಲು ಸಾಧ್ಯವಿಲ್ಲ. ಯುವತಿಯನ್ನು ಹತ್ತಿರ ಸೆಳೆದುಕೊಳ್ಳಲು ಅನ್ಯ ಮಾರ್ಗ ಬಳಸಿದ್ದರೆ ಅದನ್ನು ವಿಚಾರಣೆಗೆ ಒಳಪಡಿಸಬಹುದು ಎಂದಿತು. ಅರ್ಜಿದಾರರ ಪರ ವಕೀಲ ಎನ್.ಎಸ್.ಶ್ರೀರಾಜಗೌಡ ವಾದ ಮಂಡಿಸಿದ್ದು, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ವಕೀಲ ಮಹೇಶ್ ಶೆಟ್ಟಿ ವಾದ ಮಂಡಿಸಿದ್ದರು.

Propose ಮಾಡುವುದು ‘ಲೈಂಗಿಕ ದೌರ್ಜನ್ಯ’  ಅಲ್ಲ:    ‘ಓರ್ನಾ’ (ಮಹಿಳಾ ಸ್ಕಾರ್ಫ್) ಎಳೆಯುವುದು, ಸಂತ್ರಸ್ತೆಯ ಕೈ ಎಳೆದು ಆಕೆಯನ್ನು ಮದುವೆಯಾಗಲು Propose ಮಾಡುವುದು ‘ಲೈಂಗಿಕ
ದೌರ್ಜನ್ಯ’ (Sexual Assault) ಅಥವಾ ‘ಲೈಂಗಿಕ ಕಿರುಕುಳ’ (Sexual Harassment) ಎಂಬ ವ್ಯಾಖ್ಯೆಯೊಳಗೆ ಪೋಕ್ಸೋ ಕಾಯ್ದೆಯಡಿ (POCSO Act) ಬರುವುದಿಲ್ಲ ಎಂದು
ಕೊಲ್ಕತ್ತಾ ಹೈಕೋರ್ಟ್ (Calcutta High Court) ಹೇಳಿತ್ತು. ನ್ಯಾಯಮೂರ್ತಿ ಬಿಬೇಕ್ ಚೌಧುರಿ ಅವರ ಪೀಠವು ದಾಖಲೆಯ ಸಾಕ್ಷ್ಯಗಳ ಆಧಾರದಲ್ಲಿ ಇಂತಹುದ್ದೊಂದು ಅಭಿಪ್ರಾಯ ನೀಡಿತ್ತು.

ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತ ಬಾಲಕಿಯು ಆಗಸ್ಟ್ 2017 ರಲ್ಲಿ ಶಾಲೆಯಿಂದ (School) ಹಿಂದಿರುಗುತ್ತಿದ್ದಾಗ, ಆರೋಪಿಯು ಅವಳ ಶಾಲು ಎಳೆದುಕೊಂಡು ಮದುವೆಯಾಗಲು ಪ್ರಸ್ತಾಪಿಸಿದ್ದ. ಸಂತ್ರಸ್ತ ಬಾಲಕಿತನ್ನ ಪ್ರಸ್ತಾಪಕ್ಕೆ ಒಪ್ಪದಿದ್ದರೆ ಆಕೆಯ ದೇಹಕ್ಕೆ ಆಸಿಡ್ ಎರಚಿ ಗಾಯಗೊಳಿಸುವುದಾಗಿ ಬೆದರಿಕೆ ಹಾಕಿದ್ದ. ವಿಚಾರಣೆ ನಡೆಸಿದ ನ್ಯಾಯಾಲಯ, ಸಾಕ್ಷ್ಯವನ್ನು ಗಮನಿಸಿ, ಸಂತ್ರಸ್ತ ಬಾಲಕಿಯ 'ಒರ್ನಾ'ವನ್ನು ಎಳೆದುಕೊಂಡುತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ ಆರೋಪಿಯ ನಿರ್ದಿಷ್ಟ ಕೃತ್ಯವು ಲೈಂಗಿಕ ಉದ್ದೇಶದಿಂದಲ್ಲ, ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಮಾಡಲಾಗಿದೆ ಎಂದಿತ್ತು.

ಇನ್ನು ಟ್ರಯಲ್ ನ್ಯಾಯಾಧೀಶರು, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕಾಂಡಿ, ಆರೋಪಿಯು ಸಂತ್ರಸ್ತೆಯ ಕೈ ಹಿಡಿದು ದೈಹಿಕ ಸಂಪರ್ಕ (Physical Contact) ಮಾಡಿ ಅವಳಿಗೆ ಲೈಂಗಿಕ ದೌರ್ಜನ್ಯ ಮತ್ತುಕಿರುಕುಳವನ್ನು ಉಂಟುಮಾಡಿದ್ದಾನೆ ಮತ್ತು ಅವನನ್ನು ಅಲ್ಲದೇ ಮದುವೆಯಾಗುವಂತೆ ಒತ್ತಾಯಿಸಿ ಮಾನಸಿಕ ಕಿರುಕುಳ ನೀಡಿದ್ದಾನೆ. ಹೀಗಾಗಿ ಆರೋಪಿ ಪೋಕ್ಸೊ ಕಾಯ್ದೆಯ ಸೆಕ್ಷನ್ 8 ಮತ್ತು 12, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354, 354 ಬಿ, 506 ಮತ್ತು 509 ರ ಅಡಿಯಲ್ಲಿ ಅಪರಾಧ ಎಸಗಿದ್ದಾನೆ ಎಂದು ತೀರ್ಪು ನೀಡಿತ್ತು.  ಕೃತ್ಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 A (1) (ii) ರ ಅರ್ಥದಲ್ಲಿ ಲೈಂಗಿಕ ಕಿರುಕುಳದ ಸ್ವರೂಪದಲ್ಲಿದೆ ಎಂದು ಹೇಳಿತ್ತು

ಸಾಕ್ಷ್ಯವನ್ನು ಮರುಪರಿಶೀಲಿಸಿದಾಗ, ಸಂತ್ರಸ್ತೆಯ ಸಾಕ್ಷ್ಯದಲ್ಲಿ ವ್ಯತ್ಯಾಸಗಳಿರುವುದನ್ನು ನ್ಯಾಯಾಲಯವು ಗಮನಿಸಿದೆ. ಎಫ್‌ಐಆರ್‌ನಲ್ಲಿ ಆರಂಭದಲ್ಲಿ ಕೊಟ್ಟ ದೂರಿನಲ್ಲಿ ಚಿಕ್ಕಪ್ಪ, ಆರೋಪಿಯು ಸಂತ್ರಸ್ತೆಯ ಕೈಯನ್ನ ಎಳೆದಿದ್ದಾನೆ ಎಂದು ಎಂದಿಗೂ ಹೇಳಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ, ಆದಾಗ್ಯೂ, 10 ದಿನಗಳ ನಂತರ ಸೆಕ್ಷನ್ 164 CrPC ಅಡಿಯಲ್ಲಿ ದಾಖಲಿಸಿದ ತನ್ನ ಹೇಳಿಕೆಯಲ್ಲಿ, ಸಂತ್ರಸ್ತ ಮಹಿಳೆ ಮೊದಲ ಬಾರಿಗೆ ಆರೋಪಿ ತನ್ನ ಕೈಗಳನ್ನು ಹಿಡಿದು ಎಳೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಈ ಎಲ್ಲ ಗೊಂದಲಗಳು ಪ್ರಕರಣದಲ್ಲಿವೆ ಎಂದು ಹೇಳಿತ್ತು. 

 

Follow Us:
Download App:
  • android
  • ios