ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ/ ಕರೆ ಮಾಡಿ ಬೈಕ್ ನಲ್ಲಿ ಸುತ್ತಾಡೋಣ ಎಂದು ಪೀಡಿಸುತ್ತಿದ್ದ/ ಮಹಿಳಾದಿನ ಒಂದು ಗಂಟೆಗೂ ಅಧಿಕ ಕಾಲ ಮಾತನಾಡಿದ್ದ/ ನಂತರ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದ  ಯುವತಿ

ಹೈದರಾಬಾದ್ (ಮಾ. 10) ಯುವಕನ ಕಿರುಕುಳ ತಾಳಲಾರದೆ ಯುವತಿ ಮಗಳು ನೇಣಿಗೆ ಶರಣಾಗಿದ್ದಾಳೆ ಎಂದು ಹುಡುಗಿಯ ಪಾಲಕರು ಆರೋಪ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ತೆಲಂಗಾಣದ ಮೈಲಾದೇರ್ವಪಲ್ಲಿಯಿಂದ ಘಟನೆ ವರದಿಯಾಗಿದೆ. ಲೀಜಾ ( 19) ಸುಸೈಡ್ ಮಾಡಿಕೊಂಡಿದ್ದಾರೆ. ಸ್ಥಳೀಯ ಯುವಕ ಅಕ್ರಮ್ ಎಂಬಾತ ಕಿರುಕುಳ ನೀಡುತ್ತಿದ್ದ ಎಂದು ಪಾಲಕರು ಆರೋಪಿಸಿದ್ದಾರೆ.

ಸೊಸೆ ಕೊಂದು ಮಾವ ನೇಣಿಗೆ ಶರಣಾದ

ಒಂದೇ ಏರಿಯಾದಲ್ಲಿ ಇದ್ದ ಕಾರಣ ಆಗಾಗ ಕರೆ ಮಾಡುವುದು, ತನ್ನ ಜತೆ ಸುತ್ತಾಡಲು ಬೈಕ್ ನಲ್ಲಿ ಬಾ ಎಂದು ಯುವತಿಯನ್ನು ಪೀಡಿಸುತ್ತಿದ್ದ ಎಂದು ಆರೋಪಿಸಿದ್ದಾರೆ.

ಮಹಿಳಾ ದಿನಾಚರಣೆ ದಿನ ಸುಮಾರು ಒಂದು ಗಂಟೆಗೂ ಅಧಿಕ ಕಾಲ ಯುವತಿ ಮತ್ತು ಅಕ್ರಂ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇದಾದ ಮೇಲೆ ಯುವತಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ನೇಣಿಗೆ ಶರಣಾಗಿದ್ದಾಳೆ. ಯುವತಿ ಕರೆ ಕಟ್ ಮಾಡಿದ ಮೇಲೆ ಸುಮಾರು 150 ಕ್ಕೂ ಅಧಿಕ ಸಾರಿ ಅಕ್ರಂ ಕರೆ ಮಾಡಿದ್ದು ತನಿಖೆಯಲ್ಲಿ ಗೊತ್ತಾಗಿದೆ. ಒರಿಸ್ಸಾ ಮೂಲದ ಹುಡುಗಿಯ ಕುಟುಂಣ ಇಪ್ಪತ್ತು ವರ್ಷದ ಹಿಂದೆ ಆಂಧ್ರಪ್ರದೇಶಕ್ಕೆ ಬಂದು ನೆಲೆಸಿತ್ತು.