ಸೊಸೆ ಕೊಂದು ಮಾವನೂ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಹಲವು ರೀತಿಯ ತಿರುವುಗಳನ್ನ ಪಡೆದುಕೊಂಡಿದೆ. ಈ ಎರಡು ಸಾವಿನ ನಡುವಿದೆ ವಿವಿಧ ಕಾರಣ

ಕೊಳ್ಳೆಗಾಲ (ಮಾ.08): ಸೊಸೆ ಕೊಂದು ಮಾವ ತಾನೂ ನೇಣು ಬಿಗಿದುಕೊಮಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಳ್ಳೆಗಾಲ ನಗರ ಠಾಣೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಾಗಿದೆ. 

ಕೊಲೆಯಾದ ಸುಮಿತ್ರ ಸಹೋದರ ಊಟಿ ಜಿಲ್ಲೆ ರಾಕೋಡ್ ಎಸ್ಟೇಟ್‌ನ ಮಣಿ ಈ ಸಂಬಂಧ ಆದರ್ಶ ನಗರಕ್ಕೆ ಆಗಮಿಸಿ ಅಕ್ಕ ಸುಮಿತ್ರಗೆ ಮಾವ ಚಿಕ್ಕಹುಚ್ಚಯ್ಯ ಮಗ ಸುರೇಂದ್ರ ಅತ್ತೆ ನಿಂಗರಾಜಮ್ಮ ಹಾಗೂ ಮೈದುನ ರಾಜೇಂದ್ರ ಪ್ರಸಾದ್ ಮಾನಸಿಕ ಹಿಂಸೆ ನೀಡುತ್ತಿದ್ದರೆಂದು ತವರಿಗೆ ಕಳುಹಿಸುತ್ತಿಲ್ಲ. ನನ್ನ ಕೊಲೆ ಮಾಡುತ್ತಾರೆ ಎಂದು ದೂರವಾಣಿಯಲ್ಲಿ ತೀಲಿಸಿದ್ದಾಗಿ ಹೇಳಿದ್ದಾರೆ. 

ಮಾರ್ಚ್ 6 ರಂದು ಭಾವನ ಫೊನ್‌ನಿಂದ ಕರೆ ಮಾಡಿ ನಿನ್ನ ಅಕ್ಕ ಹಾಗೂ ಮಾವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಬೇಗ ಬಾ ಎಂದು ಮಾಹಿತಿ ನೀಡಿದರು. ಇಲ್ಲಿ ಬಂದಾಗ ಅಕ್ಕ ರಕ್ತದ ಮಡುವಿನಲ್ಲಿ ಬಿದ್ದಿದ್ದು ಮಾವನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಕ್ಕನನ್ನು ಕುಟುಂಬದವರೆ ಕೊಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 

ಮಾನ್ವಿ: ಕಾಣೆಯಾಗಿದ್ದ ಮಾಜಿ ಶಾಸಕ ನಾಯಕರ ಮೊಮ್ಮಕ್ಕಳು ಶವವಾಗಿ ಪತ್ತೆ

ಏನಿದು ಘಟನೆ : ಹೈ ಫೈ ಜೀವನಕ್ಕೆ ಸೊಸೆ ಮಾರುಹೋಗಿದ್ದು ಪರ ಪುರುಷನೊಂದಿಗೆ ಸಂಬಮಧ ಈ ಕೃತ್ಯಕ್ಕೆ ಕಾರಣ ಎಂದು ಮೂಲಗಳು ಹೇಳುತ್ತಿದ್ದು, ಹಲವು ಬಾರಿ ಪಂಚಾಯಿತಿ ಮಾಡಿದರು ಸರಿಹೋಗದೆ ಕಲಹ ಮುಂದುವರಿದಿತ್ತು. 

ಆಕೆಯಿಂದ ನೆಮ್ಮದಿ ಇಲ್ಲ : ಮೊಬೈಲ್‌ನಲ್ಲಿ ಹೆಚ್ಚು ಕಾಲ ಹರಣ. ಮಕ್ಕಳನ್ನು ನೋಡಿಕೊಳ್ಳುತ್ತಿರಲಿಲ್ಲ. ಈಕೆ ಸೊಸೆಯಾಗಿ ಬಂದಾಗಿನಿಂದ ಮನೆಯಲ್ಲಿ ನೆಮ್ಮದಿ ಇಲ್ಲ. ಆಕೆಯ ನಡವಳಿಕೆಯಲ್ಲಿ ಅನುಮಾನವಿತ್ತು.