ಬೆಂಗಳೂರು [ಡಿ.17]:  ವಿಧಾನಸೌಧಕ್ಕೆ ಬಾಂಬ್ ಇಡುವುದಾಗಿ ಫೇಸ್ಬುಕ್ನಲ್ಲಿ ವ್ಯಕ್ತಿಯೋರ್ವ ಪೋಸ್ಟ್ ಹಾಕಿದ್ದು ಎಲ್ಲೆಡೆ ವೈರಲ್ ಆಗಿದೆ. 

ಟಕ್ಲಾ ಚಾಟ್ ಎನ್ನುವ ಖಾತೆಯಿಂದ ಫೇಸ್ಬುಕ್ ನಲ್ಲಿ ಇನ್ನೊಂದು ವಾರದಲ್ಲಿ ವಿಧಾನಸೌಧಕ್ಕೆ ಬಾಂಬ್ ಇಡುತ್ತೇನೆ ಎಂದು ಪೋಸ್ಟ್ ಹಾಕಿದ್ದಲ್ಲದೇ,  ತಾ ಕತ್ ಇರೋನು ತಡಿರೋ ಎಂದು ಪೋಸ್ಟ್ ನಲ್ಲಿ ಹಾಕಲಾಗಿದೆ. 

ಅವಾಚ್ಯ ಶಬ್ದಗಳನ್ನು ಪೋಸ್ಟ್ ನಲ್ಲಿ ಬಳಸಿದ್ದು, ಇದೇ ಅಕೌಂಟ್ ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧವೂ ಅವಹೇಳನಕಾರಿಯಾಗಿ ಬರೆಯಲಾಗಿದೆ. ಪೌರತ್ವ ಕಾಯ್ದೆ ವಿರುದ್ಧ ಬರೆದಿದ್ದು, ಕಾಯ್ದೆ ವಾಪಸ್ ತೆಗೆದುಕೊಳ್ಳದಿದ್ದಲ್ಲಿ ಬೆಂಗಳೂರು, ದೆಹಲಿ ಸೌಧಗಳಿಗೂ ಬಾಂಬ್ ಇಡುತ್ತೇವೆ. ನಿಮಗೆ ಇರೋದು ಒಂದು ವಾರ ಮಾತ್ರ ಟೈಂ ಎಂದು ಸಮಯ ಫಿಕ್ಸ್ ಮಾಡಿದ್ದಾನೆ. 

ಬೆಂಗಳೂರಿನಲ್ಲಿ ಭಯೋತ್ಪಾದನೆ ಸಂಚು: ಜೆಎಂಬಿ ಉಗ್ರ ಅರೆಸ್ಟ್...

ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಈ ಪೋಸ್ಟ್ ವಿರುದ್ಧ ಹಲವರು ಅಸಮಾಧಾನ ಹೊರಹಾಕಿದ್ದು, ಆತನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಇದಾಗುತ್ತಿದ್ದಂತೆ ಈ ವ್ಯಕ್ತಿ ಫೇಸ್ ಬುಕ್ ಅಕೌಂಟ್ ಡಿಲೀಟ್ ಮಾಡಿದ್ದಾನೆ. 

ಆದರೆ ಈ ಸಂಬಂಧ ಇನ್ನೂ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ.