ಲಬುರಗಿ ಏರ್‌ಪೋರ್ಟ್‌ಗೆ ಬಾಂಬ್ ಇಟ್ಟು ಸ್ಫೋಟಿಸುವುದಗಿ ಅನಾಮಧೇಯ ವ್ಯಕ್ತಿಯೊಬ್ಬ ಏರ್‌ಪೋರ್ಟ್ ಮೇಲ್ ಐಡಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ,ಶ್ವಾನದಳ, ಪೊಲೀಸರು ದೌಡಾಯಿಸಿದ್ದಾರೆ.

ಕಲಬುರಗಿ (ಜೂ.24): ಕಲಬುರಗಿ ಏರ್‌ಪೋರ್ಟ್‌ಗೆ ಬಾಂಬ್ ಇಟ್ಟು ಸ್ಫೋಟಿಸುವುದಗಿ ಅನಾಮಧೇಯ ವ್ಯಕ್ತಿಯೊಬ್ಬ ಏರ್‌ಪೋರ್ಟ್ ಮೇಲ್ ಐಡಿಗೆ ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ,ಶ್ವಾನದಳ, ಪೊಲೀಸರು ದೌಡಾಯಿಸಿದ್ದಾರೆ.

 ಏರ್‌ಪೋರ್ಟ್‌ ಟರ್ಮಿನಲ್ ಒಳಗೆ ಇಂಚಿಂಚು ಪರಿಶೀಲನೆ ನಡೆಸುತ್ತಿರುವ ಭದ್ರತಾ ಅಧಿಕಾರಿಗಳು. ಪ್ರತಿಯೊ್ಬ್ಬ ಪ್ರಯಾಣಿಕರ ಬ್ಯಾಗ್‌ಗನ್ನ ಪರಿಶೀಲಿಸಿ ತೀವ್ರ ತಪಾಸಣೆ ತಪಾಸಣೆನಡೆಸುತ್ತಿರುವ ಪೊಲೀಸರು. ಏರ್‌ಪೋರ್ಟ್‌ಗೆ ಬಾಂಬ್ ಬೆದರಿಕೆ ಕರೆ ಬಂದ ಹಿನ್ನೆಲೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಬಾಂಬ್ ಬೆದರಿಕೆ ಮೇಲ್ ಬಂದ ವೇಳೆಯೇ ಕಂದಾಯ ಸಚಿವ ಕೃಷ್ಣಬೈರೇಗೌಡ ಸಹ ಏರ್‌ಪೋರ್ಟ್‌ನೊಳಗೆ ಇದ್ದರು. ಬಾಂಬ್ ಬೆದರಿಕೆ ಮೇಲ್ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಪ್ರಯಾಣಿಕರನ್ನ ವಿಮಾನ ನಿಲ್ದಾಣದಲ್ಲ ಲಾಕ್ ಮಾಡಿದ ಸಿಬ್ಬಂದಿ. ಪ್ರತಿಯೊಬ್ಬ ಪ್ರಯಾಣಿಕನ ಬ್ಯಾಗ್ ಪರಿಶೀಲನೆ ನಡೆಸಿದ್ದಾರೆ.