ಹೊಸ ವರ್ಷಕ್ಕೆ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರ: 15 ದಿನದ ಬಳಿಕ ಆರೋಪಿ ಪತ್ತೆ
ಚನ್ನೈ, ಭಟ್ಕಳಕ್ಕೆ ಬಾಂಬ್ ಬ್ಲಾಸ್ಟ್ ಬೆದರಿಕೆ ಪತ್ರ ಬರೆದವನ ಬಂಧನ
ಹೊಸ ವರ್ಷ, ಕ್ರಿಸ್‌ಮಸ್ ವೇಳೆ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಪತ್ರ
ಮೊಬೈಲ್, ಲ್ಯಾಪ್‌ಟಾಪ್ ಕಳ್ಳತನ ಮಾಡುವ ಆರೋಪಿ
ಉತ್ತರಕನ್ನಡ (ಜ.05): ಭಟ್ಕಳದಲ್ಲಿ ಹೊಸ ವರ್ಷದ ವೇಳೆ ಬಾಂಬ್ ಬ್ಲಾಸ್ಟ್ ಮಾಡುವ ಬೆದರಿಕೆಯ ಪತ್ರವನ್ನು ಬರದು ರಾಜ್ಯದ ಪೊಲೀಸರ ನಿದ್ದೆ ಕೆಡಿಸಿದ್ದ ಶಂಕಿತ ಆರೋಪಿ ಹೊಸಪೇಟೆಯ ಹನುಮಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಡಿ.16-17ರ ಅಂದಾಜಿಗೆ ಭಟ್ಕಳ ಪೊಲೀಸ್ ಠಾಣೆಗೆ ಬಂದಿದ್ದ ಓಪನ್ ಕಾರ್ಡ್ ಲೆಟರ್ ಅನ್ನು ಕಳುಹಿಸಿದ್ದನು. ಉರ್ದು ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಕ್ರಿಸ್‌ಮಸ್ ದಿನವಾದ ಡಿ.25ರಂದು ಹಾಗೂ ಹೊಸ ವರ್ಷದಂದು ಬಾಂಬ ಬ್ಲಾಸ್ಟ್ ಮಾಡುವುದಾಗಿ ಲೆಟರ್‌ನಲ್ಲಿ ಬರೆದಿದ್ದನು. ರಾಜ್ಯದಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ಮತ್ತು ತಮಿಳುನಾಡಿನ ಪುಲಿಯಂತೋಪ್ ಕಮಿಷನರೇಟ್ ವ್ಯಾಪ್ತಿಗೆ ತಲಾ ಒಂದೊಂದು ಪತ್ರವನ್ನು ಬರೆದಿದ್ದನು. ಆದರೆ, ಆರೋಪಿ ಧರ್ಮಸ್ಥಳ, ಸುಳ್ಯ, ಸುಬ್ರಹ್ಮಣ್ಯ ಸೇರಿ ಹಲವು ಪ್ರದೇಶಗಳಲ್ಲಿ ಸುತ್ತಾಡಿದ್ದಾನೆ ಎಂದು ಪೊಲೀಸರು ಪತ್ತೆ ಮಾಡಿದ್ದರು.
Bomb blast: ಭಟ್ಕಳಕ್ಕೆ ಬಂದಿತ್ತು ಬಾಂಬ್ ಬ್ಲಾಸ್ಟ್ ಬೆದರಿಕೆ ಲೆಟರ್: ಇನ್ನೂ ಸಿಗದ ಆರೋಪಿ
ಚನ್ನೈಗೆ ಹೋಗಿ ಲ್ಯಾಪ್‌ಟಾಪ್ ರಿಪೇರಿ: ಪೊಲೀಸ್ ಠಾಣೆಗೆ ಬಾಂಬ್ ಬ್ಲಾಸ್ಟ್ ಪತ್ರವನ್ನು ಬರೆದಿದ್ದ ಆರೋಪಿ ಸುಳ್ಯ ಮೂಲದ ತೇಜುಕುಮಾರ್ ಎಂಬವರ ದಾಖಲೆಗಳನ್ನು ಬಳಸಿ ಸಿಮ್ ಕಾರ್ಡ್ ಖರೀದಿಸಿದ್ದನು. ಈ ತೇಜು ಕುಮಾರ್ ಸುಬ್ರಹ್ಮಣ್ಯದಲ್ಲಿ ರಿಕ್ಷಾ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆದರೆ, ಆರೋಪಿ ಚನ್ನೈನಲ್ಲಿ ತನ್ನ ಲ್ಯಾಪ್‌ಟಾಪ್ ದುರಸ್ತಿಗೆಂದು ಅಂಗಡಿಯಲ್ಲಿ ಕೊಟ್ಟಿದ್ದಾನೆ. ಈ ವೇಳೆ ಪಾಸ್‌ವರ್ಡ್ ಕೇಳಿದರೂ ಹೇಳದೆ ಪುಂಡಾಟ ಮಾಡಿದ್ದನು. ಆಗ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದ ಅಂಗಡಿ ಮಾಲೀಕನನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಎಸ್ಕೇಪ್ ಆಗಿದ್ದನು. ಅಲ್ಲಿ ತನ್ನ ಸಂಪರ್ಕಕ್ಕೆ ನೀಡಿದ್ದ ಮೊಬೈಲ್ ನಂಬರ್ ಇಲ್ಲಿಯೂ ಆರೋಪಿ ಹನುಮಂತ ಬಳಸುತ್ತಿದ್ದನು.
ಭಟ್ಕಳ ಪೊಲೀಸರಿಂದ ಬಂಧನ: ಸುಮಾರು 15 ದಿನಗಳಿಂದ ಆರೋಪಿಯನ್ನು ಪತ್ತೆ ಮಾಡುತ್ತಿದ್ದ ಪೊಲೀಸರು, ಬಾಂಬ್ ಬ್ಲಾಸ್ಟ್ ಬೆದರಿಕೆಯ ಪತ್ರ ಕಳುಹಿಸಿದ್ದ ಶಂಕಿತ ಆರೋಪಿ ಹೊಸಪೇಟೆಯ ಹನುಮಂತನನ್ನು ಇಂದು ಬಂಧಿಸಿದ್ದಾರೆ. ಈತನು ಯಾವಾಗಲೂ ಲ್ಯಾಪ್‌ಟಾಪ್, ಮೊಬೈಲ್ ಕಳ್ಳತನ ಮಾಡುತ್ತಿದ್ದನು. ಈಗ ಈತನೇ ಭಟ್ಕಳ ಪೊಲೀಸ್ ಠಾಣೆ ಹಾಗೂ ತಮಿಳುನಾಡಿನ ಪುಲಿಯಂತೋಪೆ ಠಾಣೆಗೆ ಲೆಟರ್ ಬಾಂಬ್ ಬ್ಲಾಸ್ಟ್ ಪತ್ರ ಬರೆದಿದ್ದಾಗಿ ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ. ಆದರೆ, ಈತ ತಮಿಳುನಾಡಿಗೆ ಯಾಕೆ ಹೋಗಿದ್ದ? ಪೊಲೀಸ್ ಠಾಣೆಗಳಿಗೆ ಬಾಂಬ್ ಬೆದರಿಕೆಯ ಲೆಟರ್‌ಗಳನ್ನು ಯಾಕೆ ಹಾಕಿದ್ದ ? ಎಂದು ತಿಳಿದುಬಂದಿಲ್ಲ. ಆರೋಪಿಯ ಬಾಯಿ ಬಿಡಿಸಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಪಂಜಾಬ್ ಸಿಎಂ ಮನೆ ಮುಂದೆ ಬಾಂಬ್ : ಕಾಶ್ಮೀರದಲ್ಲಿ ಮತ್ತೆ ಉಗ್ರರ ದಾಳಿ
ಲ್ಯಾಪ್‌ಟಾಪ್ ಪಾಸ್ವರ್ಡ್ ಕೇಳಿದರೆ ಜೀವ ಬೆದರಿಕೆ: ದುರಸ್ತಿ ಅಂಗಡಿಯವನಿಂದ ತನ್ನ ಲ್ಯಾಪ್‌ಟಾಪ್ ವಾಪಾಸ್ ಪಡೆದಿದ್ದ ಆರೋಪಿ, ಪೊಲೀಸರು ತನಿಖೆ ಮಾಡುವಾಗ ಅಂಗಡಿಗೆ ನೀಡಿದ್ದ ನಂಬರ್ ಹಾಗೂ ಧರ್ಮಸ್ಥಳದಲ್ಲಿ ಕಾಣಿಸಿದ್ದ ನಂಬರ್ ಒಂದೇ ಆಗಿತ್ತು. ಈ ನಂಬರ್ ಆಧಾರದ ಮೇಲೆ ತನಿಖೆ ಮಾಡುವಾಗ ಸುಳ್ಳು ವಿಳಾಸ ನೀಡಿ ಖರೀದಿಸಿತ್ತು ತಿಳಿದುಬಂದಿತ್ತು. ತಂಡ ರಚಿಸಿ ಆರೋಪಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಟ್ಕಳ, ಮಂಗಳೂರು, ಉಡುಪಿ ಕಡಲ ತೀರ ಪ್ರದೇಶಗಳು ಸೇರಿ ವಿವಿಧ ಪ್ರದೇಶಗಳಲ್ಲಿ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ದಿನಾಚರಣೆ ವೇಳೆ ಬಿಗಿ ಭದ್ರತೆಯನ್ನು ಒದಗಿಸಲಾಗಿತ್ತು.