#BoisLockersRoom ನೈಜ ಕಥೆಯೇ ಬೇರೆ, ಎಲ್ಲವೂ ಹುಡುಗಿಯದ್ದೇ ಕರಾಮತ್ತು!

ಲಾಕ್ ಡೌನ್ ನಡುವೆ ಸುದ್ದಿ ಮಾಡಿದ್ದ ದೆಹಲಿ ಬಾಯ್ಸ್ ಲಾಕ್ ರೂಂ/ ಶೇರ್ ಚಾಟ್ ಗ್ರೂಪ್ ನಲ್ಲಿ ಅಷ್ಟಕ್ಕೂ ನಡೆದಿದ್ದಿದ್ದು ಏನು? ಎಲ್ಲ ಸಂದೇಶಗಳಿಗೆ ಮೂಲ ಒಬ್ಬಳು ಹುಡುಗಿ/ ನಕಲಿ ಹೆಸರಿನಲ್ಲಿ ಗುಂಪು ಸೇರಿದ್ದ ಹುಡುಗಿ ಹುಡುಗರ ಮನಸ್ಥಿತಿ ಅರ್ಥ ಮಾಡಿಕೊಳ್ಳಲು ಯತ್ನ ಮಾಡಿದ್ದಳಂತೆ

Bois Locker Room fake account used to suggest plan for sexual assault

ನವದೆಹಲಿ(ಮೇ 11) ಇದು ಪಕ್ಕಾ ಜಾಲತಾಣದ ಕತೆ.  ಜಾಲತಾಣಕ್ಕೆ ಅಡಿಕ್ಟ್ ಆದವರು ಅಪರಾಧ ಲೋಕಕ್ಕೆ ಹೇಗೆ ತೆರೆದುಕೊಳ್ಳುತ್ತಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ.  ಮಕ್ಕಳ ಗ್ರೂಪ್ ನಲ್ಲಿ ಇಂಥದ್ದೆಲ್ಲ ಹರಿದಾಡಿದೆ!

ದಿಲ್ಲಿಯ ಕೆಲವು ಹದಿಹರೆಯದ ಹುಡುಗರ ಒಂದು ಸೋಶಿಯಲ್‌ ಸೈಟ್‌ ಗ್ರೂಪ್‌ ಇಡೀ ದೇಶದಲ್ಲಿ ಸುದ್ದಿ ಮಾಡಿತ್ತು. ತಮ್ಮದೇ ಪ್ರಾಯದ, ತಮ್ಮದೇ ಕ್ಲಾಸಿನ ಹುಡುಗಿಯರನ್ನು ಬೆತ್ತಲೆಯಾಗಿ ಊಹಿಸಿಕೊಳ್ಳುವುದು. ಅವರ ಫೋಟೋಗಳನ್ನು ಟ್ವಿಟರ್, ಫೇಸ್‌ಬುಕ್‌ ಮೊದಲಾದ ಕಡೆಗಳಿಂದ ಕದ್ದು ಸಂಗ್ರಹಿಸಿ ಅವುಗಳನ್ನು ಡಿಜಿಟಲೀ ಮಾರ್ಫ್‌ ಮಾಡಿ, ನಗ್ನವಾಗಿ ಚಿತ್ರಿಸಿಕೊಂಡು ಹಂಚಿ ಖುಷಿಪಡುವುದು, ಇನ್ಯಾರದೋ ಹುಡುಗಿಯರ ಚಿತ್ರಗಳನ್ನು ಗ್ಯಾಂಗ್‌ರೇಪ್‌ಗೆ ಒಳಗಾಗಿದ್ದಾಳೆ ಎಂದೆಲ್ಲ ಊಹಿಸಿಕೊಂಡು ಬರೆದು ಉದ್ರೇಕಪಡುವುದು ಹೀಗೆ ವಿಕೃತಿಯ ಅನಾವರಣವೇ ನಡೆದಿತ್ತು.

ಅವರ ಗ್ರೂಪ್ ಚಾಟ್ ಗುರಿ  ಹುಡುಗಿಯರ ಗ್ಯಾಂಗ್ ರೇಪ್

ಹುಡುಗಿಯೊಬ್ಬಳೆ ಇದರ ಸ್ಕ್ರೀನ್ ಶಾಟ್ ಸಂಗ್ರಹಿಸಿ ಅಸಲಿತನ ಬಹಿರಂಗ ಮಾಡಿದ್ದಳು. ಪೊಲೀಸ್ ಕೇಸ್ ಸಹ ಆಗಿತ್ತು. ಆದರೆ ವಿಚಾರಣೆ ವೇಳೆ ಮತ್ತೊಂದಿಷ್ಟು ಆತಂಕಕಾರಿ ಅಂಶಗಳು ಬಹಿರಂಗವಾಗಿದೆ. 

ಆದರೆ ಈ ಘಟನೆಗೆಲ್ಲ ಮೂಲ ಕಾರಣ ಒಬ್ಬಳು ಹುಡುಗಿ ಎಂಬುದೇ ಬಹಿರಂಗವಾಗಿದೆ. ಹುಡುಗಿ ಸಿದ್ಧಾರ್ಥ ಹೆಸರಿನಲ್ಲಿ ಗ್ರೂಪ್ ಜಾಯಿನ್ ಆಗಿದ್ದಳು. ಹುಡುಗರ ಮನಸ್ಥಿತಿ ಪರೀಕ್ಷಿಸಲು ತಾನೇ  ಅಶ್ಲೀಲ ಸಂದೇಶ ಹರಿಯಬಿಟ್ಟು ಪ್ರತಿಕ್ರಿಯೆ  ಕೇಳುತ್ತಿದ್ದಳು. ಹುಡುಗರೆ ಇದಕ್ಕೆ  ರಿಪ್ಲೆ ನೀಡಲು ನಿರಾಕರಿಸಿದ್ದರು ಎಂಬ ಸಂಗತಿಯೂ ತನಿಖೆಯಲ್ಲಿ ಗೊತ್ತಾಗಿದೆ.

ಸಿದ್ದಾರ್ಥ್ ಹೆಸರಿನಲ್ಲಿ ಹುಡುಗಿಯನ್ನು ರೇಪ್ ಮಾಡೋಣ ಎಂಬ ಸಂದೇಶ ಹರಿಯಬಿಟ್ಟು ನೀವೇನು ಹೇಳುತ್ತೀರಿ ಎಂದು ಪ್ರಶ್ನೆ ಮಾಡಿದ್ದು ಇದೇ ಹುಡುಗಿ. ಉಳಿದ ಹುಡುಗರು ಇದಕ್ಕೆ ಯಾವ ರೆಸ್ಪಾಸ್ ನೀಡಿಲ್ಲ. ಆದರೂ ತಾನೇ ಮುಂದುವರಿದು ಹಾಗೆ ಮಾಡಬಹುದು, ಹೀಗೆ ಮಾಡಬಹುದು ಎಂಬ ಐಡಿಯಾವನ್ನು ನೀಡಿದ್ದಾಳೆ.  ಸೋಶಿಯಲ್  ಮೀಡಿಯಾದಲ್ಲಿ ಸ್ಕ್ರೀನ್ ಶಾಟ್ ಶೇರ್ ಆದ ನಂತರ ಸಿದ್ಧಾರ್ಥ್ ಗಾಗಿ ಹುಡುಕಾಟ ನಡೆಸಲಾಗಿತ್ತು.

ಸಿದ್ಧಾರ್ಥ್ ಎಂಬ ಹೆಸರನಲ್ಲಿ ನಕಲಿಯಾಗಿ ಗ್ರೂಪ್ ಜಾಯಿನ್ ಆಗಿದ್ದ ಹುಡುಗಿ ತನ್ನ ಮೇಲೆ ಗ್ಯಾಂಗ್ ರೇಪ್ ಮಾಡುವ ಐಡಿಯಾವನ್ನು ಹರಿಬಿಟ್ಟಿದ್ದಳು . ತನ್ನ ಮೇಲೆಯೇ ರೇಪ್ ಮಾಡಿದರೆ ಹೇಗೆ ಎಂದು ಪ್ರಶ್ನೆ ಕೇಳಿದ್ದಳು.

ನಗ್ನ ಚಿತ್ರಗಳ ಭರಪೂರ ಚಟುವಟಿಕೆ; ಬಾಯ್ಸ್ ಲಾಕರ್ ರೂಂ ಅಡ್ಮಿನ್ ಸೆರೆ

ಹುಡುಗರ ಮನಸ್ಥಿತಿ ಹೇಗಿದೆ, ಇದಕ್ಕೆ ಅವರು ಯಾವ ಉತ್ತರ ನೀಡುತ್ತಾರೆ ಎಂದು ತಿಳಿದುಕೊಳ್ಳಲು ಇಂಥ ಮೆಸೇಜ್ ಬಿಟ್ಟಿದ್ದೆ ಎಂದು ಹುಡುಗಿ ತನಿಖೆ ವೇಳೆ ಹೇಳಿದ್ದಾಳೆ. ಹುಡುಗರು ಶೇರ್ ಮಾಡಿಕೊಂಡಿರುವ ಸ್ಕ್ರೀನ್ ಶಾಟ್ ಹುಡುಗಿಯ ಖಾತೆಗೂ ಬಂದಿದೆ. ಅಂದರೆ ಹುಡುಗಿಯ ನಕಲಿ ಸಿದ್ಧಾರ್ಥ್ ಖಾತೆಗೆ. ಇದಾದ ಮೇಲೆ ಸ್ಕ್ರೀನ್ ಶಾಟ್ ಇಸ್ಟಾದಲ್ಲಿ ಶೇರ್ ಆಗಿದೆ.

ಬಾಯ್ಸ್ ಲಾಕರ್ ರೂಂ ಪ್ರಕರಣಕ್ಕೆ ಸಂಬಂಧಿಸಿ 27 ಜನ ಹುಡುಗರನ್ನು  ಬಂಧಿಸಲಾಗಿದ್ದು 24 ಜನರ ವಿಚಾರಣೆ ಮುಗಿದಿದೆ. 

Latest Videos
Follow Us:
Download App:
  • android
  • ios