Asianet Suvarna News Asianet Suvarna News

Crime News: ಅಂತ್ಯ ಸಂಸ್ಕಾರದ ಬಳಿಕ ಪೊಲೀಸರಿಗೆ ಮೃತನ ಗುರು ಪತ್ತೆ

Crime News: ದಡದಲ್ಲಿ ಪತ್ತೆಯಾದ ಶವವನ್ನು ಬೇರೊಬ್ಬ ಯುವಕನದ್ದು ಎಂದು ಭಾವಿಸಿ ಸುಟ್ಟು ಹಾಕಲಾಗಿತ್ತು. 

Body of youth kidnapped by gold smuggling gang washed ashore in Kozhikode Kerala mnj
Author
Bengaluru, First Published Aug 5, 2022, 4:46 PM IST

ಕೇರಳ (ಆ. 05): ಕೋಜಿಕೊಡೆ ಜಿಲ್ಲೆಯ  ಪಂಥರಿಕರದಿಂದ ಚಿನ್ನಾಭರಣ ಕಳ್ಳಸಾಗಣೆ ಗ್ಯಾಂಗ್‌ನಿಂದ ಅಪಹರಣಕ್ಕೊಳಗಾಗಿದ್ದ ಯುವಕನ ಶವ ಪತ್ತೆಯಾಗಿತ್ತು.  ದಡದಲ್ಲಿ ಪತ್ತೆಯಾದ ಶವವನ್ನು ಬೇರೊಬ್ಬ ಯುವಕನದ್ದು ಎಂದು ಭಾವಿಸಿ ಜು.17ರಂದು ಸುಟ್ಟು ಹಾಕಲಾಗಿತ್ತು. ನಾಪತ್ತೆಯಾಗಿದ್ದ ಮೆಪ್ಪಯ್ಯೂರು ಮೂಲದ ದೀಪಕ್‌ನದ್ದು ಎಂದು ಭಾವಿಸಿ ಅವರ ಕುಟುಂಬದವರು ಮೃತ ದೇಹವನ್ನು ಸ್ವೀಕರಿಸಿ ಅಂತ್ಯಕ್ರಿಯೆ ನಡೆಸಿದ್ದರು.  ಆದರೆ ಈಗ ಡಿಎನ್‌ಎ ಪರೀಕ್ಷೆ ಬಳಿಕ  ಚಿನ್ನಾಭರಣ ಕಳ್ಳಸಾಗಣೆ ಗ್ಯಾಂಗ್‌ನಿಂದ ಅಪಹರಣಕ್ಕೊಳಗಾಗಿದ್ದ ಯುವಕ ಇರ್ಷಾದ್ ಎಂದು ದೃಢಪಟ್ಟಿದೆ. 

ಶವವನ್ನು ಮೊದಲೇ ಗುರುತಿಸದಿದ್ದರೂ, ಡಿಎನ್‌ಎ ಪರೀಕ್ಷೆಯ ವರದಿಯು ಶವ ಇರ್ಷಾದ್‌ನದ್ದೇ ಎಂದು ದೃಢಪಟ್ಟಿದೆ. ಮೆಪ್ಪಯ್ಯೂರು ಮೂಲದ ದೀಪಕ್ ಸಂಬಂಧಿಕರು ಮೃತದೇಹದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮೃತದೇಹವನ್ನು ಡಿಎನ್ ಎ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮೃತರು ದೀಪಕ್‌ನದ್ದು ಅಲ್ಲ ಎಂದು ವರದಿಯಲ್ಲಿ ದೃಢಪಟ್ಟಿದೆ.

ಜುಲೈ 16 ರಂದು ರಾತ್ರಿ ವೇಳೆ ಕಾರಿನಿಂದ ಇಳಿದ ಯುವಕ ನದಿಗೆ ಹಾರಿದ್ದಾನೆ ಎಂದು ಸ್ಥಳಿಯರು ಪೊಲೀಸರಿಗೆ ತಿಳಿಸಿದ್ದಾರೆ.   
ಇರ್ಷಾದ್ ನಾಪತ್ತೆ ಪ್ರಕರಣದಲ್ಲಿ ಸ್ಥಳೀಯರ ಹೇಳಿಕೆ ಪೊಲೀಸರ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ.  ಯುವಕ ನದಿಗೆ ಹಾರಿದ ಬಳಿಕ ಅಪಹರಿಸಿದ ತಂಡ ಸ್ಥಳದಿಂದ ಪರಾರಿಯಾಗಿದೆ. ಮರುದಿನ ಕೋಡಿಕಲ್ ಕಡಲತೀರದಲ್ಲಿ ಮೃತದೇಹವೊಂದು ದಡಕ್ಕೆ ಬಂದಿತ್ತು. ಜುಲೈ 28 ರಂದು ಇರ್ಷಾದ್‌ನ ತಾಯಿ ಪೊಲೀಸರಿಗೆ ವ್ಯಕ್ತಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು.

ಪ್ರಮುಖ ಆರೋಪಿ ಎಸ್ಕೇಪ್: ಇರ್ಷಾದ್ ನಾಪತ್ತೆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ಕಲ್ಪೆಟ್ಟಾ ಮೂಲದ ಜಿನಾಫ್ (31), ವೈತಿತ್ರಿ ಮೂಲದ ಶಾಹೀಲ್ (26) ಮತ್ತು ಪೊಝುತಾನ ಮೂಲದ ಸಜೀರ್ (27) ಮತ್ತು ಪಿಣರಾಯಿ ಮೂಲದ ಮರ್ಸೀದ್ ಎಂದು ಗುರುತಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಎಂದು ಶಂಕಿಸಲಾಗಿರುವ ಮುಹಮ್ಮದ್ ಸಾಲಿಹ್ ಪೊಲೀಸರಿಂದ ತಲೆಮರೆಸಿಕೊಂಡಿದ್ದಾನೆ. ಆರೋಪಿ ವಿದೇಶಕ್ಕೆ ಹಾರಿದ್ದಾನೆ ಎಂದು ತಿಳಿದು ಬಂದಿದೆ.

ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾಯಿಯಿಂದಲೇ ಮಗುವಿನ ಹತ್ಯೆ

ಇರ್ಷಾದ್ ಮೇ 13 ರಂದು ದುಬೈನಿಂದ ಕೇರಳ ತಲುಪಿದ್ದರು. ವಯನಾಡ್ ಪ್ರವಾಸದ ಕೆಲವು ದಿನಗಳ ನಂತರ ಅವರ ಕುಟುಂಬಕ್ಕೆ ಅಪಹರಣಕಾರರಿಂದ ಸಂದೇಶ ಬಂದಿದೆ. ಇರ್ಷಾದ್ ದುಬೈನಿಂದ ಕಳ್ಳಸಾಗಣೆ ಮಾಡಿದ 60 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಹಿಂತಿರುಗಿಸದಿದ್ದರೆ ಕೊಲೆ ಮಾಡುವುದಾಗಿ ಮನೆಯವರಿಗೆ ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಸೂಪ್ಪಿಕ್ಕಡ ಮೂಲದ ಶಮೀರ್ ಸೇರಿದಂತೆ ಮೂವರಿಗೆ ಚಿನ್ನವನ್ನು ಹಂಚಲಾಗಿದೆ ಎಂದು ಆತನ ಪೋಷಕರು ಬಹಿರಂಗಪಡಿಸಿದ್ದಾರೆ. ಪೊಲೀಸರು ಶಮೀರ್‌ನನ್ನು ಬಂಧಿಸಿದ್ದರೂ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Follow Us:
Download App:
  • android
  • ios