Asianet Suvarna News Asianet Suvarna News

Bengaluru: ಬುದ್ಧಿಮಾಂದ್ಯ ಎಂಬ ಕಾರಣಕ್ಕೆ ತಾಯಿಯಿಂದಲೇ ಮಗುವಿನ ಹತ್ಯೆ

ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಜನ್ಮಕೊಟ್ಟ ತಾಯಿಯಿಂದಲೇ  ಮಗುವಿನ ಹತ್ಯೆಯಾಗಿದೆ. ಹೌದು! ಬುದ್ಧಿಮಾಂದ್ಯ ಮಗುವನ್ನೇ ಹೆತ್ತಮ್ಮ ಸಾಯಿಸಿದ್ದು, 4ನೇ ಮಹಡಿಯಿಂದ ಮಗುವನ್ನು ತಾಯಿ ಎಸೆದಿದ್ದಾಳೆ. 

Mother Kills Son In Bengaluru gvd
Author
Bangalore, First Published Aug 5, 2022, 12:52 PM IST

ಬೆಂಗಳೂರು (ಆ.05): ಸಿಲಿಕಾನ್ ಸಿಟಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಜನ್ಮಕೊಟ್ಟ ತಾಯಿಯಿಂದಲೇ  ಮಗುವಿನ ಹತ್ಯೆಯಾಗಿದೆ. ಹೌದು! ಬುದ್ಧಿಮಾಂದ್ಯ ಮಗುವನ್ನೇ ಹೆತ್ತಮ್ಮ ಸಾಯಿಸಿದ್ದು, 4ನೇ ಮಹಡಿಯಿಂದ ಮಗುವನ್ನು ತಾಯಿ ಎಸೆದಿದ್ದಾಳೆ. ಮೇಲಿಂದ ಕೆಳಗೆ ಬಿದ್ದು ಐದು ವರ್ಷದ ದೀತಿ ಮಗು ಸ್ಥಳದಲ್ಲೇ ಸಾವನಪ್ಪಿದೆ. ಸದ್ಯ ಈ ಭಯಾನಕ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ. 

ಮಗುವಿನ ತಾಯಿ ಸುಷ್ಮಾ ಭಾರದ್ವಾಜ್ ಮಗುವನ್ನು ಕೆಳಗೆ ಬಿಸಾಡಿ ಅನಂತರ ಭಯಗೊಂಡು ಕಾಪಾಡಿ.. ಕಾಪಾಡಿ.. ಎಂದು ಕೂಗ್ಗಿಕೊಂಡಿದ್ದರು. ಈ ವೇಳೆ ಮಗುವನ್ನು ಎಸೆದು ತಾನೂ ಕೂಡ ಆತ್ಮಹತ್ಯೆಗೆ ಸುಷ್ಮಾ ಯತ್ನಿಸಿದ್ದು, ಸ್ಥಳೀಯರು ಸಮಯ ಪ್ರಜ್ಞೆಯಿಂದ ಆಕೆಯನ್ನು ಕಾಪಾಡಿದ್ದಾರೆ.  ಬುದ್ದಿಮಾಂದ್ಯ ಮಗು ಎಂದು ಕಳೆದ ಮೂರು ತಿಂಗಳ ಹಿಂದೆಯೇ ರೈಲ್ವೆ ಸ್ಟೇಷನ್‌ನಲ್ಲಿ ತಾಯಿ ಮಗುವನ್ನು ಬಿಟ್ಟು ಬಂದಿದ್ದಳು. ಆದರೆ ತಂದೆ ಮಗುವನ್ನು ಹುಡುಕಿ ಕರೆದುಕೊಂಡು ಬಂದಿದ್ದರು. 

27 ವರ್ಷಗಳ ಬಳಿಕ ಅಮ್ಮನನ್ನು ಹುಡುಕಿದ ಮಗ, ರೇಪಿಸ್ಟ್‌ ಅಪ್ಪನನ್ನೂ ಹುಡುಕಿಕೊಟ್ಟ!

ಮಗುವಿನ ತಾಯಿ ಸುಷ್ಮಾ ದಂತ ವೈದ್ಯಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದು, ಗಂಡ ಕಿರಣ್ ಟಿಸಿಹೆಚ್ ಕಂಪನಿಯಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿದ್ದರು. ಸಂಪಂಗಿ ರಾಮನಗರದ ಸಿಕೆಸಿ ಗಾರ್ಡನ್ ಅದ್ವಿತ್ ಅಪಾರ್ಟ್‌ಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಸದ್ಯ ಸಂಪಂಗಿ ರಾಮನಗರ ಪೊಲೀಸರಿಂದ ಸುಷ್ಮಾಳ ಬಂಧನವಾಗಿದ್ದು, ವಿಚಾರಣೆ ವೇಳೆ ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಾಗಿ ಸುಷ್ಮಾ ತಿಳಿಸಿದ್ದಾರೆ.

ಈ ಘಟನೆ ಬಗ್ಗೆ ಡಿಸಿಪಿ ಶ್ರೀನಿವಾಸ್ ಗೌಡ ಪ್ರತಿಕ್ರಿಯಿಸಿದ್ದು, ನಿನ್ನೆ (ಗುರುವಾರ) ಸಂಜೆ ಮಗುವನ್ನು ನಿಮ್ಹಾನ್ಸ್‌ಗೆ ಅಡ್ಮಿಟ್ ಮಾಡಿ, ಬಿಲ್ಡಿಂಗ್ ಮೇಲಿಂದ ಮಗು ಬಿದಿದ್ದೆ ಎಂದು ಹೇಳ್ತಾರೆ. ಆದ್ರೆ ನಾವು ಆ ಮಗುವಿನ ಬಗ್ಗೆ ಕೂಲಂಕುಷವಾಗಿ ತೆನಿಖೆ ನಡೆಸಿದಾಗ‌ ಆ ತಾಯಿ ಬೇಕು ಅಂತ ಮಾಡಿ ಮೇಲಿಂದ ಎಸೆದಿದ್ದಾರೆ ಎಂದು ಗೊತ್ತಾಗುತ್ತೆ. ಇಂಜುರಿಯಿಂದ ಆ ಮಗು ನಿನ್ನೆ ತಡ ರಾತ್ರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಆ ಮಗು ಬುದ್ಧಿಮಾಂದ್ಯ ಎಂಬ ಕಾರಣಕ್ಕಾಗಿ ಆ ತಾಯಿ ರೀತಿ ಮಾಡಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಹಾಗಾಗಿ ಆ ತಾಯಿ ಮೇಲೆ ಮರ್ಡರ್‌ ಕೇಸ್ ಹಾಕಿ ಅರೆಸ್ಟ್ ಮಾಡಿದ್ದೆವೆ. ಇನ್ನುಳಿದಂತೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ಇನ್ನು  12 ವರ್ಷದ ಹಿಂದೆ ಮದುವೆಯಾಗಿದ್ದ ಸುಷ್ಮಾ ಹಾಗೂ ಕಿರಣ್, ಮದುವೆ ಬಳಿಕ ಲಂಡನ್ ಗೆ ತೆರಳಿದ್ದರು. ದಂಪತಿಗೆ ಆರು ವರ್ಷ ಮಕ್ಕಳು ಇರಲಿಲ್ಲ. ಬಳಿಕ ಕೃತಕ ಗರ್ಭಧಾರಣೆ ಮಾಡುವ ಮೂಲಕ ಮಗುವನ್ನು  ದಂಪತಿ ಪಡೆದಿದ್ದರು. ಆರು ವರ್ಷದ ಬಳಿಕ ಮಗು ಪಡೆದು ಸುಷ್ಮಾ ಹಾಗೂ ಕಿರಣ್ ಖುಷಿಯಾಗಿದ್ದರು.  ತಂದೆ ಕಿರಣ್ ಮಗುವಿನ ಮೇಲೆ ಪ್ರಾಣವನ್ನೇ ಇಟ್ಟುಕೊಂಡಿದ್ದ. ಎರಡು ವರ್ಷದವರೆಗೆ ಮಗುವನ್ನ ತಾಯಿ ಚೆನ್ನಾಗಿ ನೋಡಿಕೊಂಡಿದ್ದಳು. ಆ ಬಳಿಕ ಮಗುವಿಗೆ ಮಾತನಾಡಲು ಬರುತ್ತಿಲ್ಲ ಎಂದು ಗೊತ್ತಾಗಿತ್ತು. ವೈದ್ಯರ ಬಳಿ ಚೆಕ್ ಮಾಡಿಸಿದಾಗ ಮಗುವಿಗೆ ಮಾತು ಬರಲ್ಲ ಅಂತ ಗೊತ್ತಾಗಿತ್ತು. ಅಂದಿನಿಂದ ತಾಯಿ ಮಗುವಿನ ಮೇಲೆ ನಿರ್ಲಕ್ಷ್ಯ ವಹಿಸಿದ್ದಳು. ಗಂಡ ಕಿರಣ್ ಟಿಸಿಎಸ್ ಕಂಪನಿಯಲ್ಲಿ ಕೆಲಸದಲ್ಲಿ ಮಾಡುತ್ತಿದ್ದ. 

Chitradurga: ರಸ್ತೆಯಲ್ಲಿ ಓಡಾಡುವ ವಿಚಾರಕ್ಕೆ ಎರಡು ಸಮುದಾಯಗಳ ನಡುವೆ ಗಲಾಟೆ

ಈ ಹಿಂದೆ ಮಗುವನ್ನು ಸುಷ್ಮಾ ರೈಲಿನಲ್ಲಿ ಬಿಟ್ಟು ಬಂದು, ಪತಿ ಕಿರಣ್ ಕೇಳಿದಾಗ ಮಗು ಕಳೆದು ಹೋಯ್ತು ಎಂದು ಕತೆ ಕಟ್ಟಿದ್ದಳು. ಕೂಡಲೇ ಪತಿ ಕಿರಣ್ ರೈಲ್ವೇ ಪೊಲೀಸರಿಗೆ (ಬಾಸ್ಕೋಗೆ) ಮೇಸೆಜ್ ಕೊಟ್ಟಿದ್ದ. ಅನಂತರ ಹಾಸನ ಟ್ರೈನ್‌ನಲ್ಲಿ ಮಗು ಇರೋ ಬಗ್ಗೆ ಮಾಹಿತಿ ಸಿಕ್ಕಿತ್ತು. ಯಲಹಂಕ ಬಳಿ ರೈಲು ನಿಲ್ಲಿಸುವಂತೆ ಹೇಳಿ ಮಗುವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ನಂತರ ತಂದೆ ಕಿರಣ್ ಮಗುವನ್ನು ಮನೆಗೆ ಕರೆತಂದಿದ್ದ. ನಿಮ್ಹಾನ್ಸ್‌ನಲ್ಲಿ ಮಗು ನಿನ್ನೆ ಸಂಜೆ 4.50 ಕ್ಕೆ ಮೃತಪಟ್ಟಿದ್ದು, ತಾಯಿ ಸುಷ್ಮಾ ಸಂಬಂಧಿ ಹೈಕೋರ್ಟ್ ವಕೀಲರ ಮೂಲಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಳು. ಪೊಲೀಸರು ಕೂಡಲೇ ಬಂಧನ ಪ್ರಕ್ರಿಯೆ ನಡೆಸಿ ಬಂಧಿಸಿದರು. ಇಂದು ತಾಯಿಯನ್ನು 9ನೇ ಎಸಿಎಂಎಂ ಕೋರ್ಟ್‌ಗೆ ಸಂಪಂಗಿ ರಾಮನಗರ ಪೊಲೀಸರು ಹಾಜರು ಪಡಿಸಲಿದ್ದಾರೆ.

Follow Us:
Download App:
  • android
  • ios