ಮೀರತ್‌ನಲ್ಲಿ ಹೊರಗಿನಿಂದ ಬೀಗ ಹಾಕಲ್ಪಟ್ಟ ಮನೆಯಲ್ಲಿ ದಂಪತಿ ಹಾಗೂ ಅವರ ಮೂರು ಹೆಣ್ಣು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.

ಮೀರತ್: ದಂಪತಿ ಹಾಗೂ ಅವರ ಮೂರು ಹೆಣ್ಣು ಮಕ್ಕಳು ಮನೆಯಲ್ಲೇ ಶವವಾಗಿ ಪತ್ತೆಯಾದ ಘಟನೆ ಉತ್ತರ ಪ್ರದೇಶದ ಮೀರತ್‌ನ ಲಿಸಾಡಿ ಗೇಟ್ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ. ದಂಪತಿ ಮತ್ತು ಅವರ ಮೂವರು ಮಕ್ಕಳು ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ತಂದೆ ಮೊಯಿನ್ ಇವರ ಪತ್ನಿ ಅಸ್ಮಾ ಹಾಗೂ ಮೂವರು ಮಕ್ಕಳಾದ 8 ವರ್ಷದ ಅಫ್ಸಾ, 4 ವರ್ಷದ ಅಜೀಜಾ ಹಾಗೂ 1 ವರ್ಷದ ಆದಿಬಾ ಎಂದು ಗುರುತಿಸಲಾಗಿದೆ. ಮೃತರ ಶವಗಳನ್ನು ಪೊಲೀಸರು ಈಗ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 

ದಂಪತಿ ಮೊಯಿನ್ ಹಾಗೂ ಅವರ ಪತ್ನಿ ಅಸ್ಮಾ ಅವರ ಶವ ನೆಲದ ಮೇಲೆ ಬಿದ್ದಿದ್ದರೆ ಮಕ್ಕಳ ಶವವನ್ನು ಮಂಚದ ಕೆಳಭಾಗವಿರುವ ಬೆಡ್‌ ಬಾಕ್ಸ್‌ನಲ್ಲಿ ತುಂಬಿಡಾಗಿತ್ತು. ಮೃತ ಮೊಯಿನ್ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಆತ ಹಾಗೂ ಆತನ ಪತ್ನಿ ಅಸ್ಮಾ ಬುಧವಾರದಿಂದ ನಾಪತ್ತೆಯಾಗಿದ್ದರು. ಅಲ್ಲದೇ ಮನೆಗೆ ಹೊರಗಿನಿಂದ ಬೀಗ ಜಡಿಯಲಾಗಿತ್ತು. ಹೀಗಾಗಿ ಈ ಪ್ರಕರಣದಲ್ಲಿ ಬೇರೆ ಯಾರೋ ತಿಳಿದವರೇ ಶಾಮೀಲಾಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಮನೆಗೆ ಬೀಗ ಹಾಕಿದ್ದ ರೀತಿ, ಅಪರಾಧದಲ್ಲಿ ಭಾಗಿಯಾಗಿರುವ ವ್ಯಕ್ತಿ ಕುಟುಂಬಕ್ಕೆ ಪರಿಚಿತ ವ್ಯಕ್ತಿಯಾಗಿರಬಹುದು ಎಂದು ಸೂಚಿಸುತ್ತದೆ ಎಂದು ಮೀರತ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ASP) ವಿಪಿನ್ ಟಾಡಾ ಹೇಳಿದ್ದಾರೆ.

ಪೊಲೀಸರು ಸ್ಥಳಕ್ಕೆ ತಲುಪಿದಾಗ, ಮನೆಯ ಬಾಗಿಲು ಲಾಕ್ ಆಗಿರುವುದು ಕಂಡುಬಂದಿದೆ. ಛಾವಣಿಯ ಮೂಲಕ ಪೊಲೀಸರು ಪ್ರವೇಶಿಸಿದಾಗ, ಅವರು ಮೊಯಿನ್, ಅವರ ಪತ್ನಿ ಅಸ್ಮಾ ಮತ್ತು ಅವರ ಮೂವರು ಹೆಣ್ಣು ಮಕ್ಕಳ ಶವ ಕಾಣಿಸಿದೆ ವಿಪಿನ್ ಟಾಡಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಪ್ರಾಥಮಿಕ ತನಿಖೆಯ ವೇಳೆ ಘಟನೆಯ ಹಿಂದಿನ ಉದ್ದೇಶ ಹಳೆಯ ದ್ವೇಷ ಎಂದು ತಿಳಿದು ಬಂದಿದೆ, ಈ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ ಎಂದು ಎಸ್‌ಎಸ್‌ಪಿ ಹೇಳಿದರು. ಮೃತರಲ್ಲಿ ಒಬ್ಬರ ಕಾಲುಗಳನ್ನು ಬೆಡ್‌ಶೀಟ್‌ನಿಂದ ಕಟ್ಟಲ್ಪಟ್ಟಿರುವುದು ಕಂಡುಬಂದಿದೆ, ವಿಧಿವಿಜ್ಞಾನ ತಂಡ ಮತ್ತು ಹಿರಿಯ ಅಧಿಕಾರಿಗಳು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ಕುಟುಂಬವು ಇತ್ತೀಚೆಗಷ್ಟೇ ಆ ಪ್ರದೇಶಕ್ಕೆ ಸ್ಥಳಾಂತರಗೊಂಡಿದ್ದು, ಹೆಚ್ಚಿನ ವಿವರಗಳನ್ನು ಕಂಡುಹಿಡಿಯಲು ಪೊಲೀಸರು ಅವರ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಅವರು ಎಸ್‌ಎಸ್‌ಪಿ ಹೇಳಿದ್ದಾರೆ.

Scroll to load tweet…

ಆಯುಧ ಪೂಜೆ ದಿನವೇ ರೊಟ್ಟಿ-ಬೆಂಡೆಕಾಯಿ ಪಲ್ಯ ತಿಂದು ಒಂದೇ ಕುಟುಂಬದ 7 ಜನರು ಅಸ್ವಸ್ಥ!

Scroll to load tweet…

ಬೀದರ್‌ನಲ್ಲಿ ಭೀಕರ ಅಪಘಾತ: ತೆಲಂಗಾಣದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!