ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ನೆಚ್ಚಿನ ಫೋಟೋಗ್ರಾಫರ್ ನೀರಲ್ಲಿ ಮುಳುಗಿ ಸಾವು

ಶಿವಮೊಗ್ಗ ಬಿಜೆಪಿ ಸಂಸದ ಬಿ.ವೈ ರಾಘವೇಂದ್ರ ಅವರ ಪೋಟೊಗ್ರಾಫರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವಕ ಕೆರೆಯಲ್ಲಿ ಮುಳುಗಿ ಕೊನೆಯುಸಿರೆಳೆದ ದಾರುಣ ಘಟನೆ ನಡೆದಿದೆ.  ಹೊಸನಗರ ತಾಲೂಕು ಹನಿಯದ ಪ್ರಸನ್ನ ಎಂಬ ಯುವಕ ಕೆರೆಯಲ್ಲಿ ಮುಳುಗಿ ಅಸುನೀಗಿದ ಛಾಯಗ್ರಾಹಕ.

BJP MP BY Raghavendra Photographer  drowned in lake at Ramanagara gow

ರಾಮನಗರ (ಜ.1): ಶಿವಮೊಗ್ಗ ಸಂಸದ ರಾಘವೇಂದ್ರರವರ ಫೋಟೋಗ್ರಾಫರ್‌ ಪ್ರಸನ್ನ ಭಟ್‌ ಕೆರೆ​ಯಲ್ಲಿ ಮುಳುಗಿ ಸಾವ​ನ್ನ​ಪ್ಪಿ​ರುವ ಘಟನೆ ಭಾನು​ವಾರ ಸಂಜೆ ನಡೆ​ದಿ​ದೆ.

ತಾಲೂ​ಕಿನ ಮಾವ​ತ್ತೂ​ರು ಕೆರೆ​ಯಲ್ಲಿ ಈಜಲು ತೆರ​ಳಿದ್ದ ವೇಳೆ ದುರ್ಘ​ಟನೆ ಸಂಭ​ವಿ​ಸಿದೆ. ಸಂಸದ ರಾಘ​ವೇಂದ್ರ ದೆಹ​ಲಿಗೆ ತೆರ​ಳಿದ್ದ ಹಿನ್ನೆ​ಲೆ​ಯಲ್ಲಿ ಪ್ರಸನ್ನ ಭಟ್‌ ರಜೆ​ಯ​ಲ್ಲಿದ್ದರು. ಭಾನು​ವಾರ ಸಂಜೆ ರಾಮೇ​ಶ್ವ​ರಕ್ಕೆ ತೆರಳಬೇಕಿದ್ದ ಅವರು ಸಮ​ಯ​ವಿದ್ದ ಕಾರಣ ಆರು ಮಂದಿ ಸ್ನೇಹಿ​ತ​ರೊಂದಿಗೆ ಬೆಳಗ್ಗೆ ಕನ​ಕ​ಪು​ರ​ದ​ಲ್ಲಿ​ರುವ ಸ್ನೇಹಿತ ಕೌಶಿಕ್‌ ರವರ ಮನೆಗೆ ಬಂದಿ​ದ್ದರು. ಮಾವ​ತ್ತೂರು ಕೆರೆ​ಯಲ್ಲಿ ಈಜಲು ಪ್ರಸನ್ನ ಮತ್ತು ಸ್ನೇಹಿ​ತರು ನೀರಿಗೆ ಇಳಿ​ದಿ​ದ್ದಾರೆ. ಈಜಲು ಬಾದ ಕಾರಣ ಕೌಶಿಕ್‌ ನೀರಿಗೆ ಇಳಿ​ದಿ​ರ​ಲಿಲ್ಲ. ಈಜಲು ಹೋದ ಪ್ರಸನ್ನ ಭಟ್‌ ನೀರಿ​ನಿಂದ ಮೇಲಕ್ಕೆ ಬರಲೇ ಇಲ್ಲ. ಇದ​ರಿಂದ ಗಾಬ​ರಿ​ಗೊಂಡ ಕೌಶಿಕ್‌ ಪೊಲೀ​ಸ​ರಿಗೆ ಮಾಹಿತಿ ನೀಡಿ​ದ್ದಾರೆ.

ಸ್ಥಳಕ್ಕೆ ಆಗ​ಮಿ​ಸಿದ ಪೊಲೀ​ಸರು ಪ್ರಸ​ನ್ನ​ ಭಟ್‌ಗಾಗಿ ಶೋಧ ಕಾರ್ಯ ನಡೆ​ಸಿ​ದರೂ ಪ್ರಯೋ​ಜ​ನ​ವಾ​ಗ​ಲಿಲ್ಲ. ಆನಂತರ ಅಗ್ನಿ ಶಾಮಕ ದಳ ಸಿಬ್ಬಂದಿ ಪ್ರಸನ್ನ ಭಟ್‌ಗಾಗಿ ಶೋಧ ಕಾರ್ಯ ಮುಂದು​ವ​ರೆಸಿ ಶವ ಹೊರಕ್ಕೆ ತೆಗೆ​ದಿ​ದ್ದಾರೆ. ಶವ​ವನ್ನು ಮರ​ಣೋ​ತ್ತರ ಪರೀ​ಕ್ಷೆ​ಗಾಗಿ ಕನ​ಕ​ಪುರ ಸಾರ್ವ​ಜ​ನಿಕ ಆಸ್ಪ​ತ್ರೆಗೆ ಸಾಗಿ​ಸ​ಲಾ​ಗಿದೆ. ಕನ​ಕ​ಪುರ ಗ್ರಾಮಾಂತರ ಪೊಲೀಸ್‌ ಠಾಣೆ​ಯಲ್ಲಿ ಪ್ರಕ​ರಣ ದಾಖ​ಲಾ​ಗಿದೆ.

ರಾಜಸ್ಥಾನದಲ್ಲಿ ಟ್ರಕ್‌ - ಕಾರು ಮುಖಾಮುಖಿ ಡಿಕ್ಕಿ: ಐವರು ಬಲಿ; ಟ್ರಕ್‌ ಚಾಲಕ ನಾಪತ್ತೆ..!

ಸಂಸದ ಬಿವೈ ರಾಘವೇಂದ್ರ ಅವರು ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಇಲ್ಲದ ಕಾರಣ ಪ್ರಸನ್ನ  ಅವರು ರಾಮನಗರಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ. ರಾಮೇಶ್ವರಕ್ಕೆ ಪ್ರವಾಸ ಹೊರಟಿದ್ದ ಅವರು ಇದರ ಮಧ್ಯೆ ಸಹೋದರನ ಮನೆ ರಾಮನಗರದ ಕನಕಗಿರಿಗೆ ತೆರಳಿದ್ದರು. ಈ ವೇಳೆ ದುರಂತ ಸಂಭವಿಸಿದೆ.

Latest Videos
Follow Us:
Download App:
  • android
  • ios