* ಆಸ್ಪತ್ರೆಯ ಬೆಡ್​​ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಅರೆಸ್ಟ್​​​* ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತನ ಬಂಧನ* ಆಸ್ಪತ್ರೆಯಿಂದ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿದಂತೆ ಆರೋಪಿಯನ್ನು ಬಂಧಿಸಿದ ಸಿಸಿಬಿ

ಬೆಂಗಳೂರು, (ಮೇ.25): ಬೆಡ್ ಬ್ಲಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಆಪ್ತರೊಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಶಾಸಕ ಸತೀಶ್ ರೆಡ್ಡಿ ಆಪ್ತ ಎನ್ನಲಾದ ಬಾಬು. ಬೊಮ್ಮನಹಳ್ಳಿ ವಾರ್ ರೂಂ ಸಿಬ್ಬಂದಿಯ ಹೇಳಿಕೆ ಮತ್ತು ರೂಂನಲ್ಲಿದ್ದ ಸಿಸಿ ಟಿವಿ ಮಾಹಿತಿ ಆಧರಿಸಿ ಆರೋಪಿಯ ಬಂಧನವಾಗಿದೆ ಎಂದು ಪೋಲೀಸರು ಹೇಳಿದ್ದಾರೆ.

ಬೆಡ್ ಸ್ಕ್ಯಾಮ್‌ಗೆ ಬಿಜೆಪಿ ನಾಯಕರೇ ಕಿಂಗ್ ಪಿನ್‌ಗಳು: ದಿನೇಶ್ ಗುಂಡೂರಾವ್ ಗಂಭೀರ ಆರೋಪ

ಪ್ರಕರಣ ಸಂಬಂಧ ಈ ಮೊದಲೇ ಬಂಧನವಾಗಿದ್ದ ನೇತ್ರಾವತಿ ಆರೋಪಿ ಬಾಬು ಮೂಲಕವೇ ಬೆಡ್​​ ಬುಕ್ಕಿಂಗ್​ ಮಾಡಿಸುತ್ತಿದ್ದರು ಎನ್ನಲಾಗಿದೆ. ತಾನೊಬ್ಬ ಸಮಾಜ ಸೇವಕ ಎಂದು ಹೇಳಿಕೊಂಡಿದ್ದ ಬಾಬು, ಶಾಸಕ ಸತೀಶ್ ರೆಡ್ಡಿ ಅವರ ಜೊತೆ ಒಡಾಡಿಕೊಂಡಿದ್ದ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ಬಾಬು ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಸದ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿದಂತೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು ದಕ್ಷಿಣ ವಲಯದ ಕೋವಿಡ್ ವಾರ್ ರೂಮ್ ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎಂದು ಸಂಸದ ತೇಜಸ್ವಿ ಸೂರ್ಯ ಮತ್ತು ಶಾಸಕ ಸತೀಶ್ ರೆಡ್ಡಿ ಈ ತಿಂಗಳ ಆರಂಭದಲ್ಲಿ ಬಯಲು ಮಾಡಿದ್ದರು. ಸಧ್ಯ ಇಡೀ ಪ್ರಕರಣವನ್ನು ಸಿಸಿಬಿ ತನಿಖೆ ನಡೆಸುತ್ತಿದೆ.