ಬಿಜೆಪಿ ಶಾಸಕನ ತಾಯಿಯ ಕಿವಿ ಕತ್ತರಿಸಿ ಕಿವಿಯೋಲೆ ಕದ್ದ ಕಳ್ಳರು!
ಉತ್ತರ ಪ್ರದೇಶದ ಗಾಜಿಯಾಬಾದ್‌ನ ಬುಲಂದ್ ಶಹರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ ತಾಯಿಯ ಮೇಲೆ ಹಲ್ಲೆ ಯಾಗಿದೆ. 80 ವರ್ಷದ ತಾಯಿಯ ಎರಡೂ ಕಿವಿಗಳನ್ನು ಹರಿದು, ಕಿವಿಯೋಲೆಗಳನ್ನು ಕಿತ್ತು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಾಜಿಯಾಬಾದ್ (ಸೆ. 13): ಉತ್ತರ ಪ್ರದೇಶದ ಬುಲಂದ್‌ಶಹರ್ ಸದರ್‌ನ ಬಿಜೆಪಿ ಶಾಸಕ ಪ್ರದೀಪ್ ಚೌಧರಿ ಅವರ 80 ವರ್ಷದ ತಾಯಿ ಸಂತೋಷಾ ದೇವಿ ಮೇಲೆ ನಡುರಸ್ತೆಯಲ್ಲಿಯೇ ಹಲ್ಲೆಯಾಗಿದೆ. ದುಷ್ಕರ್ಮಿಗಳು ಆಕೆಯ ಕಿವಿಯನ್ನು ಹರಿದು ಎರಡೂ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕದ್ದು ಪರಾರಿಯಾಗಿರುವ ಘಟನೆ ಗಾಜಿಯಾಬಾದ್‌ನ ಪ್ರತಾಪ್ ವಿಹಾರ್‌ನಲ್ಲಿ ನಡೆದಿದೆ. ಬೆಳಗಿನ ವಾಕಿಂಗ್‌ಗೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಮೊದಲು ಆಕೆಗೆ ಪಿಸ್ತೂಲ್‌ನಿಂದ ಹೆದರಿಸಿದ್ದಾರೆ. ಆ ಬಳಿಕ ಆಕೆಯ ಕಿವಿಯಲ್ಲಿದ್ದ ಕಿವಿಯೋಲೆಗಳನ್ನು ಕೀಳುವ ಪ್ರಯತ್ನ ಮಾಡಿದ್ದಾರೆ. ಆದರೆ, ಕಿವಿಯೋಲೆಗಳು ಬರದೇ ಇದ್ದಾಗ ದುಷ್ಕರ್ಮಿಗಳು ಕಟರ್‌ನಿಂದ ಆಕೆಯ ಎರಡೂ ಕಿವಿಯನ್ನು ಕತ್ತರಿಸಿ ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆಕೆ ರಸ್ತೆಯಲ್ಲಿ ಬಿದ್ದರೆ, ಲೂಟಿಕೋರರು ತಕ್ಷಣವೇ ಪರಾರಿಯಾಗಿದದ್ದಾರೆ. ಕಳೆದ ಶುಕ್ರವಾರ ಈ ಘಟನೆ ನಡೆಸಿದೆ. ಪ್ರತಾಪ್ ವಿಹಾರ್ನಲ್ಲಿ ಕಿರಿಯ ಮಗ ಜೀತ್‌ಪಾಲ್‌ರೊಂದಿಗೆ ಸಂತೋಷಾ ದೇವಿ ವಾಸ ಮಾಡುತ್ತಿದ್ದರು. ಬೆಳಗಿನ ವಾಕಿಂಗ್‌ಗೆಂದು ಹೊರಟು, ದೆಹಲಿ ಪಬ್ಲಿಕ್ ಸ್ಕೂಲ್ ಬಳಿ ಹೋಗುವ ವೇಳೆ ದುಷ್ಕರ್ಮಿಗಳು ಅಡ್ಡಗಟ್ಟಿ ಕಿವಿಯೋಲೆ ಕದ್ದಿದ್ದಾರೆ. ಮೊದಲು ಕಿವಿಯೋಲೆ ಬಿಚ್ಚಿಕೊಡುವಂತೆ ಹೆದರಿಸಿದ್ದಾರೆ. ಕೊನೆಗೆ ದುಷ್ಕರ್ಮಿಗಳು ತಾವೇ ಪ್ರಯತ್ನಿಸಿದಾಗ ಮೊದಲಿಗೆ ಬಂದಿರಲಿಲ್ಲ.ಕೊನೆಗೆ ಕಟರ್ ಬಳಸಿ ಕಿವಿ ಕತ್ತರಿಸಿ ಚಿನ್ನ ದೋಚಿದಿದ್ದಾರೆ.
ಒಮ್ಮೆ ಆಕೆ ಕೂಗಿಕೊಂಡ ಬಳಿಕ, ಹತ್ತಿರದ ಮನೆಗಳಿದ್ದವರು ಹೊರಬಂದಿದ್ದಾರೆ. ಈ ವೇಳೆಗಾಗಲೇ ಕಳ್ಳರು, ಕಿವಿಯನ್ನು ಹರಿದು ಚಿನ್ನ ಕದ್ದು ಓಡುತ್ತಿದ್ದರು. ತಕ್ಷಣವೇ ಪೊಲೀಸರಿಗೆ ಹಾಗೂ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಶಾಸಕ ಪ್ರದೀಪ್ ಚೌಧರಿ ಇಂದಿರಪುರಂನಲ್ಲಿ ವಾಸ ಮಾಡುತ್ತಿದ್ದಾರೆ. ಪ್ರದೀಪ್ ಚೌಧರಿ ತಕ್ಷಣವೇ ಆಸ್ಪತ್ರೆಗೆ ಧಾವಿಸಿ ತಾಯಿಯ ಪರಿಸ್ಥಿತಿ ಗಮನಿಸಿದ್ದಾರೆ. ಪೊಲೀಸರು ಈಗಾಗಲೇ ಪ್ರಕರಣದ ದಾಖಲಿಸಿಕೊಂಡಿದ್ದಾಗಿ ಹೇಳಿದ್ದು, ಕಳ್ಳರನ್ನು ಹಿಡಿಯುವ ಪ್ರಯತ್ನ ಸಾಗಿದೆ ಎಂದಿದ್ದಾರೆ. ಇನ್ನೊಂದೆಡೆ ವಿಜಯ ನಗರ ಪೊಲೀಸ್ ಠಾಣೆ ಭಾನುವಾರ ಇದರ ದೂರು ದಾಖಲಿಸಿಕೊಂಡಿದೆ.
ಜೊತೆಯಾಗಿ ಸಾಯೋಣ ಅಂತಾ ದಂಪತಿ ತೀರ್ಮಾನಿಸಿದ್ರು.. ಅತಿಯಾದ ತೂಕದಿಂದಾಗಿ ಹೆಂಡ್ತಿ ಬಚಾವ್ ಆದಳು!
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ವಿಳಂಬ: ಈವರೆಗೂ ದುಷ್ಕರ್ಮಿಗಳ ಸುಳಿವು ಪತ್ತೆಯಾಗಿಲ್ಲ. ಎರಡು ದಿನವಾದರೂ ವರದಿ ದಾಖಲಿಸಿಕೊಳ್ಳದ ವಿಜಯನಗರ ಠಾಣೆ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ದರೋಡೆ ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿರುವುದು ಇದೇ ಮೊದಲಲ್ಲ. ಇಂದಿರಾಪುರಂನಲ್ಲಿ ಘಟನೆ ನಡೆದ ಒಂದು ತಿಂಗಳ ನಂತರ ವರದಿ ಸಲ್ಲಿಸಿದ ಪ್ರಕರಣಗಳೂ ಇವೆ. ಪ್ರತಿ ತಿಂಗಳು 25ರಿಂದ 30 ಮಂದಿ ಪೊಲೀಸ್ ಠಾಣೆಯಿಂದ ಪ್ರಕರಣ ದಾಖಲಾಗಿಲ್ಲ ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ದುಡ್ಡಿಗಾಗಿ ಮಗಳನ್ನೇ ಕಿಡ್ನಾಪ್ ಮಾಡಿದ ಅಮ್ಮ; ಪ್ಲಾನ್ ವರ್ಕೌಟ್ ಆಗದೇ ಈಗ ಪೊಲೀಸರ ಅತಿಥಿ
100 ಮೀಟರ್ ದೂರದಲ್ಲಿದ್ದರೂ ಸಹಾಯಕ್ಕೆ ಬಾರದ ಪೊಲೀಸ್: ದೆಹಲಿ ಪಬ್ಲಿಕ್ ಸ್ಕೂಲ್‌ನಿಂದ ಕೇವಲ 100 ಮೀಟರ್ ದೂರದಲ್ಲಿ ಪೊಲೀಸರಿದ್ದರು. ಹಾಗಿದ್ದರೂ ದುಷ್ಕರ್ಮಿಗಳು ನಾಪತ್ತೆಯಾಗಿದ್ದಾರೆ. ಸಂತೋಷಾ ದೇವಿಯೇ ಸ್ವತಃ ಪೊಲೀಸರಲ್ಲಿಗೆ ಬಂದು ನನ್ನ ಕಿವಿಯೋಲೆಯನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರೂ, ಪೊಲೀಸರು ಕಳ್ಳರನ್ನು ಹಿಡಿಯುವ ಬದಲು ಇಷ್ಟು ಬೆಳಕ್ಕೆ ಒಬ್ಬರೇ ನೀವೇಕೆ ವಾಂಕಿಂಗ್ ಮಾಡ್ತಿದ್ರಿ ಎಂದು ಪ್ರಶ್ನೆ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಪೊಲೀಸರು ಈ ಮಾಹಿತಿಯನ್ನು ಠಾಣೆಗೆ ನೀಡಿರಲಿಲ್ಲ. ಅಲ್ಲಿದ್ದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದರೆ ಕಳ್ಳರನ್ನು ಹಿಡಿಯಬಹುದಿತ್ತು ಎನ್ನುವುದು ಸ್ಥಳೀಯರ ಮಾತು. ಜನರು ಪ್ರಶ್ನೆ ಮಾಡಲು ಆರಂಭಿಸಿದ ಬಳಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆ ನಡೆದ ಸ್ಥಳವನ್ನು ಪರಿಶೀಲನೆ ಮಾಡಿದರು. ಪೊಲೀಸರು ಅಲ್ಲಿಯವರೆಗೂ ಸಂತೋಷಾ ದೇವಿಯನ್ನು ಆಸ್ಪತ್ರೆಗೆ ಕಳಿಸುವ ಪ್ರಯತ್ನವೂ ಮಾಡಲಿಲ್ಲ.