ಎಲ್ಲೂ ತಪ್ಪಿಸಿಕೊಂಡು ಹೋಗಬಾರದು ಅಥವಾ ಸಾಕ್ಷ್ಯವನ್ನು ಹಾಳು ಮಾಡಬಾರದು ಹಾಗೂ ದೇಶ ಬಿಟ್ಟು ಹೋಗುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇಲೆ  ಬಿಜೆಪಿ ಶಾಸಕ ಬರ್ನಾಡ್ ಮರಾಕ್‌ಗೆ ಜಾಮೀನು ನೀಡಲಾಗಿದೆ.

ಈಶಾನ್ಯ ರಾಜ್ಯ ಮೇಘಾಲಯದಲ್ಲಿ (Meghalaya) ತನ್ನ ಫಾರ್ಮ್‌ಹೌಸ್‌ನಲ್ಲಿ (Farmhouse) ಲೈಂಗಿಕ ದಂಧೆ (Brothel) ನಡೆಸುತ್ತಿದ್ದ ಆರೋಪದಲ್ಲಿ ಜೈಲು ಪಾಲಾಗಿದ್ದ ರಾಜ್ಯ ಬಿಜೆಪಿ ನಾಯಕ ಬರ್ನಾಡ್ ಎನ್ ಮರಾಕ್‌ಗೆ ಮೇಘಾಲಯ ಹೈಕೋರ್ಟ್ (Meghalaya High Court) ಶನಿವಾರ ಷರತ್ತುಬದ್ಧ ಜಾಮೀನು (Conditional Bail) ಮಂಜೂರು ಮಾಡಿದೆ. ಎಲ್ಲೂ ತಪ್ಪಿಸಿಕೊಂಡು ಹೋಗಬಾರದು ಅಥವಾ ಸಾಕ್ಷ್ಯವನ್ನು ಹಾಳು ಮಾಡಬಾರದು ಹಾಗೂ ದೇಶ ಬಿಟ್ಟು ಹೋಗುವಂತಿಲ್ಲ, ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇಲೆ ಬಿಜೆಪಿ ಶಾಸಕ ಬರ್ನಾಡ್ ಮರಾಕ್‌ಗೆ ಜಾಮೀನು ನೀಡಲಾಗಿದೆ. ಅಲ್ಲದೆ, 50,000 ರೂ. ಮೌಲ್ಯದ ವೈಯಕ್ತಿಕ ಬಾಂಡ್ (Personal Bond) ಹಾಗೂ ಶ್ಯೂರಿಟಿ ನೀಡುವಂತೆ ಕೋರ್ಟ್‌ ಆದೇಶ ನೀಡಿದೆ.

"ಆರೋಪಿ ವ್ಯಕ್ತಿ ಬರ್ನಾರ್ಡ್ ಎನ್ ಮರಾಕ್, ಈ ಕೆಳಗಿನ ಷರತ್ತುಗಳನ್ನು ಅನುಸರಿಸಿದರೆ, ಇತರ ಕೆಲವು ಪ್ರಕರಣಗಳಲ್ಲಿ ಬಯಸದಿದ್ದರೆ, ಜಾಮೀನಿನ ಮೇಲೆ ಬಿಡುಗಡೆ ಮಾಡಲು ಈ ಮೂಲಕ ನಿರ್ದೇಶಿಸಲಾಗಿದೆ" ಎಂದು ನ್ಯಾಯಮೂರ್ತಿ ಡಬ್ಲ್ಯೂ ಡೈಂಗ್ಡೋಹ್ ನ್ಯಾಯಾಲಯದ ಆದೇಶದಲ್ಲಿ ತಿಳಿಸಿದ್ದಾರೆ. ಬರ್ನಾರ್ಡ್ ಎನ್ ಮರಾಕ್ ಅವರ ಪತ್ನಿ ಎಲ್.ಕೆ ಗ್ರೇಸಿ ಶುಕ್ರವಾರ ಜಾಮೀನು ಅರ್ಜಿ ಸಲ್ಲಿಸಿದ್ದರು. ಇನ್ನು, ಈ ಆದೇಶ ನೀಡುವ ವೇಳೆ, ಬರ್ನಾಡ್ ಎನ್ ಮರಾಕ್ ಆಸ್ತಿಯ ಮಾಲೀಕ ಎಂದು ಹೈಕೋರ್ಟ್ ತೃಪ್ತವಾಗಿದೆ. ಆದರೆ ಈ ಸ್ಥಳವನ್ನು ವೇಶ್ಯಾಗೃಹವಾಗಿ ಬಳಸಲಾಗಿದೆ ಎಂದು ಸೂಚಿಸಲು ಸಾಕಷ್ಟು ಪುರಾವೆಗಳಿವೆಯೇ ಎಂಬ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. 

ಇದನ್ನು ಓದಿ: ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ: ಬಿಜೆಪಿ ನಾಯಕ ಅರೆಸ್ಟ್‌..!

"ಸಾಕ್ಷಿಗಳ ಹೇಳಿಕೆ ಮತ್ತು ದಾಖಲೆಯಲ್ಲಿರುವ ವಸ್ತುಗಳಿಂದ, ಘಟನೆಯ ಸ್ಥಳವನ್ನು ವೇಶ್ಯಾಗೃಹವಾಗಿ ಬಳಸಲಾಗಿದೆ ಎಂಬುದಕ್ಕೆ ಯಾವುದೇ ಪ್ರಾಥಮಿಕ ಪುರಾವೆಗಳಿಲ್ಲದಿರುವಷ್ಟು ಆರೋಪಿ ವ್ಯಕ್ತಿಯನ್ನು ಆಪಾದಿತ ಅಪರಾಧಕ್ಕೆ ಸಂಪರ್ಕಿಸಲು ಸಾಕಷ್ಟು ಪುರಾವೆಗಳಿಲ್ಲ. ಹಾಗೂ, ವೇಶ್ಯಾವಾಟಿಕೆ ನಡೆಸಲಾಗಿದೆ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳು ಇಲ್ಲ’’ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.

ಬರ್ನಾರ್ಡ್ ಎನ್ ಮರಕ್ ಅವರನ್ನು ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಿಂದ ಬಂಧಿಸಲಾಗಿತ್ತು. ಪೊಲೀಸರು ಅವರ ಖಾಸಗಿ ಫಾರ್ಮ್‌ಹೌಸ್ 'ರಿಂಪು ಬಗಾನ್' ನಲ್ಲಿ ಲೈಂಗಿಕ ದಂಧೆಯನ್ನು ಪತ್ತೆಹಚ್ಚಿದ ಕೆಲವು ದಿನಗಳ ನಂತರ ಶಾಸಕರನ್ನು ಬಂಧಿಸಲಾಗಿತ್ತು. ಅಲ್ಲದೆ, 
ಫಾರ್ಮ್‌ಹೌಸ್‌ನಿಂದ ಪೊಲೀಸರು 73 ಜನರನ್ನು ಬಂಧಿಸಿದ್ದರು ಹಾಗೂ 6 ಅಪ್ರಾಪ್ತ ವಯಸ್ಕರನ್ನು - 4 ಹುಡುಗರು ಮತ್ತು ಇಬ್ಬರು ಹುಡುಗಿಯರನ್ನು ರಕ್ಷಿಸಲಾಗಿತ್ತು. 

ಮೇಘಾಲಯದ ಬಿಜೆಪಿ ಉಪಾಧ್ಯಕ್ಷರಾಗಿದ್ದ ಬರ್ನಾಡ್‌ ಆರ್‌. ಮರಾಕ್‌ರನ್ನು ಉತ್ತರ ಪ್ರದೇಶದಲ್ಲಿ ಜುಲೈ 26 ರಂದು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಮೇಘಾಲಯದ ಪಶ್ಚಿಮ ಗ್ಯಾರೋ ಜಿಲ್ಲೆಯ ಟುರಾದಲ್ಲಿ ಫಾರ್ಮ್‌ಹೌಸ್‌ ಅನ್ನು ಪೊಲೀಸರು ರೇಡ್‌ ಮಾಡಿದ್ದರು. ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸಿದ ಬಳಿಕ ಬಿಜೆಪಿ ನಾಯಕ ನಾಪತ್ತೆಯಾಗಿದ್ದರು. ಜುಲೈ 22 ರಂದು ನಡೆದ ಈ ದಾಳಿ ವೇಳೆ 23 ಮಹಿಳೆಯರು ಸೇರಿ 73 ಮಂದಿಯನ್ನು ಆ ಸ್ಥಳದಲ್ಲೇ ಬಂಧಿಸಲಾಗಿತ್ತು ಎಂದು ತಿಳಿದುಬಂದಿದೆ.

ಇದನ್ನೂ ಓದಿ: SriLankan Crisis: ತುತ್ತು ಅನ್ನಕ್ಕಾಗಿ ಮೈ ಮಾರಿಕೊಳ್ಳುತ್ತಿದ್ದಾರೆ ಮಹಿಳೆಯರು!

ಇನ್ನು, ಈ ಸಂಬಂಧ ಮಾಧ್ಯಮಕ್ಕೆ ಮಾಹಿತಿ ನೀಡಿದ್ದ ಮೇಘಾಲಯದ ಡಿಜಿಪಿ ಎಲ್‌. ಆರ್‌. ಬಿಷ್ಣೋಯಿ , ನಮ್ಮ ಮಾಹಿತಿ ಆಧಾರದ ಮೇಲೆ ಬರ್ನಾಡ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದಾಗ ಹಾಪುರ್‌ ಜಿಲ್ಲಾ ಪೊಲೀಸರು ಅವರನ್ನು ಬಂಧಿಸಿದ್ದಾರೆ. ನಮ್ಮ ಪೊಲೀಸ್‌ ತಂಡ ಬುಧವಾರ ಉತ್ತರ ಪ್ರದೇಶವನ್ನು ತಲುಪಲಿದ್ದು, ಆರೋಪಿಯನ್ನು ವಿಚಾರಣೆಗಾಗಿ ಟುರಾಗೆ ವಾಪಸ್‌ ಕರೆತರಲಿದೆ ಎಂದು ತಿಳಿಸಿದ್ದರು. 

ಬರ್ನಾಡ್‌ ಮರಾಕ್‌ ವಿರುದ್ಧ ಟುರಾದ ಮುಖ್ಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಜಾಮೀನು ರಹಿತ ವಾರೆಂಟ್‌ ಜಾರಿಗೊಳಿಸಿದ ಮರುದಿನ ಅವರನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿತ್ತು.