ಬೆಂಗಳೂರು:  ಬೇಕಾಬಿಟ್ಟಿ ಓಡಾಡ್ತಿದ್ದವರ ಬಂಧಿಸಿದಾಗ ಬಯಲಾದ ಬೈಕ್ ರಾಬರಿ ಸ್ಟೋರಿ

* ಲಾಕ್ ಡೌನ್ ಚೆಕ್ ಪೋಸ್ಟ್ ಪರಿಶೀಲನೆ ವೇಳೆ ಸಿಕ್ಕಿಬಿದ್ದ ಬೈಕ್ ಕಳ್ಳರು
*  ಹತ್ತು ಗಂಟೆ ಬಳಿಕ ಓಡಾಡುತ್ತಿದ್ದವರನ್ನು ಬಂಧಿಸಿ ವಿಚಾರಣೆ
*  ಮೆಜೆಸ್ಟಿಕ್ ಉಪ್ಪಾರಪೇಟೆ ಪೊಲೀಸರ ಕಾರ್ಯಾಚರಣೆ
*  ಆರೋಪಿಗಳಾದ ಸಯ್ಯದ್ ನಾಜಿಮ್ ಮತ್ತು ಇಮ್ರಾನ್ ಷರೀಫ್ ಸಿಕ್ಕಿಬಿದ್ದಿದ್ದರು

Bike thieves gang busted by Upparpet Nagar police in Bengaluru mah

ಬೆಂಗಳೂರು(ಮೇ  26) ಲಾಕ್ ಡೌನ್  ವೇಳೆ ಅಡ್ಡಾದಿಡ್ಡಿ ಓಡಾಡುತ್ತಿದ್ದವರ ಹಿಡಿದು ಪ್ರಶ್ನೆ ಮಾಡಿದಾಗ ದ್ವಿಚಕ್ರ ವಾಹನ ಕಳ್ಳತನದ ದೊಡ್ಡ ದಂಧೆ ಬಯಲಾಗಿದೆ.

10 ಗಂಟೆ ಬಳಿಕ ಓಡಾಡುತ್ತಿದ್ದವರನ್ನು ಉಪ್ಪಾರಪೇಟೆ ಪೊಲೀಸರು ಪ್ರಶ್ನೆ ಮಾಡಿದ್ದಾರೆ.  ಬೆಂಗಳೂರಿನ ಮೆಜೆಸ್ಟಿಕ್ ಬಳಿ ಚೆಕ್ ಪೋಸ್ಟ್ ನಲ್ಲಿ ಕಳ್ಳರು ಸೆರೆಸಿಕ್ಕಿದ್ದಾರೆ.

ಹಣ ತುಂಬುವ ವಾಹನದ ಜತೆ  75  ಲಕ್ಷ ರೂ. ದೋಚಿದ್ದವರು 3 ವರ್ಷದ ನಂತ್ರ ಸಿಕ್ಕಿಬಿದ್ರು!

ಆರೋಪಿಗಳಾದ ಸಯ್ಯದ್ ನಾಜಿಮ್ , ಇಮ್ರಾನ್ ಷರೀಫ್ ನನ್ನು ಬಂಧಿಸಲಾಗಿದೆ. ಇವರನ್ನು ವಿಚಾರಣೆಗೆ ಒಳಪಡಿಸಿದಾಗ  ಬೈಕ್ ರಾಬರಿ ಕೇಸ್ ಗಳು ಪತ್ತೆಯಾಗಿವೆ. ಬಂಧಿತರು ಸಕ್ಲೇನ್ ಅಹ್ಮದ್  ಎಂಬ ಮಾಸ್ಟರ್ ಮೈಂಡ್ ಬಗ್ಗೆ ಬಾಯಿ ಬಿಟ್ಟಿದ್ದಾರೆ.

ಅಲ್ಲದೇ ಇದೇ ಮೇ  20 ಬೆಳಗಿನ ಜಾವ ಅಡ್ರೆಸ್ ಕೇಳುವ ನೆಪದಲ್ಲಿ  ಗ್ಯಾಂಗ್ ವ್ಯಕ್ತಿಯೊಬ್ಬರ ಮೊಬೈಲ್  ದೋಚಿದ್ದು ಬಯಲಾಗಿದೆ.. ಬಂಧಿತರಿಂದ 7.3 ಲಕ್ಷ ಮೌಲ್ಯದ 8 ಬೈಕ್ ಹಾಗೂ ಒಂದು ಮೊಬೈಲ್ ಜಪ್ತಿ ಮಾಡಿಕೊಳ್ಳಲಾಗಿದೆ.

ಬಂಧಿತರು ಡಿಜೆ ಹಳ್ಳಿ, ಬೈಯಪ್ಪನಹಳ್ಳಿ,ಕೆಆರ್ ಪುರಂ ಸೇರಿ ಹಲವು ಠಾಣಾ ವ್ಯಾಪ್ತಿ ಕೃತ್ಯ ಎಸಗಿದ್ದರು. ಈ ಬಗ್ಗೆ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

 

 

Latest Videos
Follow Us:
Download App:
  • android
  • ios