ಬಸ್ ಹಿಂದಿಕ್ಕುವ ಯತ್ನದಲ್ಲಿ ಆಯತಪ್ಪಿ ಸ್ಕೂಟರ್‌ನಿಂದ ಕೆಳಗೆ ಬಿದ್ದವನ ಮೇಲೆ ಹಿಂದಿನಿಂದ ಬಂದ ಮತ್ತೊಂದು ಮಿನಿ ಬಸ್ ಹರಿದು ಆತ ಮೃತಪಟ್ಟ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ನ.24) : ಬಸ್ ಹಿಂದಿಕ್ಕುವ ಯತ್ನದಲ್ಲಿ ಆಯತಪ್ಪಿ ಸ್ಕೂಟರ್‌ನಿಂದ ಕೆಳಗೆ ಬಿದ್ದವನ ಮೇಲೆ ಹಿಂದಿನಿಂದ ಬಂದ ಮತ್ತೊಂದು ಮಿನಿ ಬಸ್ ಹರಿದು ಆತ ಮೃತಪಟ್ಟ ಘಟನೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನ ಸಹಾಯಕ, ಹುಣಸಮಾರನಹಳ್ಳಿ ನಿವಾಸಿ ಮೊಹಮ್ಮದ್‌ ನಬಿ ರೋಷನ್ (21) ಮೃತ ದುರ್ದೈವಿ. ಕೆಲಸ ಮುಗಿಸಿ ರಾತ್ರಿ 8.45ರಲ್ಲಿ ರೋಷನ್‌ ಸರ್ವಿಸ್‌ ರಸ್ತೆಯಲ್ಲಿ ಪಿಜಿಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಘಟನೆ ಸಂಬಂಧ ಮಿನಿ ಬಸ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಓದಿನಲ್ಲಿ ಆಸಕ್ತಿ ಇಲ್ಲದೆ ಖಿನ್ನತೆಯಿಂದ ವಿಷ ಸೇವಿಸಿ ಯುವಕ ಆತ್ಮಹತ್ಯೆ!

ಕೇರಳ ಮೂಲದ ರೋಷನ್‌, ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ. ಹುಣಸಮಾರನಹಳ್ಳಿಯ ಪಿಜಿಯಲ್ಲಿ ಆತ ನೆಲೆಸಿದ್ದ. ಎಂದಿನಂತೆ ಕೆಲಸ ಮುಗಿಸಿ ರಾತ್ರಿ 8.45ರಲ್ಲಿ ರೋಷನ್‌ ಪಿಜಿಗೆ ಮರಳುತ್ತಿದ್ದ. ಆಗ ಮಾರ್ಗ ಮಧ್ಯೆ ಮುಂದೆ ಹೋಗುತ್ತಿದ್ದ ಬಸ್ಸನ್ನು ಹಿಂದಿಕ್ಕಲು ಆತ ಯತ್ನಿಸಿದ್ದಾನೆ. ಈ ವೇಳೆ ಆಯತಪ್ಪಿ ಸ್ಕೂಟರ್‌ನಿಂದ ಬಿದ್ದಾಗ ಆತನ ಮೇಲೆ ಹಿಂದಿನಿಂದ ಬಂದ ಮಿನಿ ಬಸ್ ಹರಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರೋಷನ್‌ನನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಕುಡಿದ ಮತ್ತಿನಲ್ಲಿ ಭಾರೀ ಗಾತ್ರದ ವಾಹನ ಯದ್ವಾತದ್ವಾ ಚಾಲನೆ; ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ!