Asianet Suvarna News Asianet Suvarna News

ಓದಿನಲ್ಲಿ ಆಸಕ್ತಿ ಇಲ್ಲದೆ ಖಿನ್ನತೆಯಿಂದ ವಿಷ ಸೇವಿಸಿ ಯುವಕ ಆತ್ಮಹತ್ಯೆ!

ಓದಿನಲ್ಲಿ ಆಸಕ್ತಿ ಇಲ್ಲದೆ ಖಿನ್ನತೆಗೆ ಒಳಗಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ.

A young man committed suicide after losing his engagement ring at tumakuru rav
Author
First Published Nov 22, 2023, 2:22 PM IST

ಶಿವಮೊಗ್ಗ (ನ.22): ಓದಿನಲ್ಲಿ ಆಸಕ್ತಿ ಇಲ್ಲದೆ ಖಿನ್ನತೆಗೆ ಒಳಗಾಗಿದ್ದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ತಾಲೂಕಿನ ತಮ್ಮಡಿಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಆಡಿನಕೊಟ್ಟಿಗೆ ಗ್ರಾಮದಲ್ಲಿ ನಡೆದಿದೆ.

ವಿನೋದ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕ ಪ್ರಥಮ ಬಿಎ ಪೂರ್ಣಗೊಳಿಸಿದ್ದ ಆದರೆ ಮುಂದಿನ ಅಧ್ಯಯನಕ್ಕೆ ಓದಿನಲ್ಲಿ ಆಸಕ್ತಿ ಕಳೆದುಕೊಂಡಿದ್ದ ಯುವಕ. ಬಿಎ ದ್ವಿತೀಯ ವಿದ್ಯಾಭ್ಯಾಸ ಮುಂದುವರಿಸಿದೆ ಅರ್ಧಕ್ಕೆ ಮೊಟಕುಗೊಳಿಸಿ ಮನೆಯಲ್ಲೇ ಇರುತ್ತಿದ್ದ. ಇತ್ತೀಚಿನ ಹಲವು ದಿನಗಳಿಂದ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದನೆಂದು ಹೇಳಲಾಗಿದೆ. ಕಳೆದ ಸೋಮವಾರ ಸಂಜೆ (ನ.20)ರಂದು ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡ ಯುವಕನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಚಿಕಿತ್ಸೆ ಫಲಿಸದೇ ಯುವಕ ಮೃತಪಟ್ಟಿದ್ದಾನೆ. ಈ ಘಟನೆ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರೋಗ ಲಕ್ಷಣವನ್ನು ಗೂಗಲ್ ಮಾಡಿದ, ಕ್ಯಾನ್ಸರ್ ಅಂತ ಹೆದರಿ ಸಾಯಲು ಯತ್ನಿಸೋದಾ?

ನಿಶ್ಚಿತಾರ್ಥದ ಉಂಗುರ ಕಳೆದಿದ್ದಕ್ಕೆ ಯುವಕ ಆತ್ಮಹತ್ಯೆ!

ತುಮಕೂರು :ನಿಶ್ಚಿತಾರ್ಥದ ಉಂಗುರ ಕಳೆದುಹೋಗಿದ್ದಕ್ಕೆ ಮನನೊಂದು ವಿಷ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ತುಮಕೂರು ನಗರದ ದೇವರಾಯಪಟ್ಟಣದಲ್ಲಿ ನಡೆದಿದೆ.

ಕಮಲೇಶ್(36) ಆತ್ಮಹತ್ಯೆ ಮಾಡಿಕೊಂಡ ಯುವಕ. ಕಳೆದ ಮೂರು ತಿಂಗಳ ಹಿಂದೆಯಷ್ಟೇ ಬೆಂಗಳೂರು ಮೂಲದ ಯುವತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಉಂಗುರು ಧರಿಸಿ ಸ್ನಾನ ಮಾಡುವ ಸಂದರ್ಭದಲ್ಲಿ ಕಳೆದುಕೊಂಡಿದ್ದ. ಉಂಗುರ ಕಳೆದ ಬಳಿಕ ಆಘಾತಗೊಂಡು ಎಲ್ಲ ಕಡೆ ಹುಡುಕಾಡಿದ್ದ ಯುವಕ. ಆದರೆ ಎಲ್ಲೂ ಪತ್ತೆಯಾಗಿರಲಿಲ್ಲ. 

ಇತ್ತ ಉಂಗುರ ಕಳೆದುಹೋಗಿರುವ ವಿಚಾರ ಮನೆಯವರಿಗೆ ಹೇಳಲು ಹೆದರಿದ್ದ ಯುವಕ ಮನೆಯವರಿಗೂ ತಿಳಿಸದೇ ನ.17 ವಿಷ ಸೇವಿಸಿದ್ದ. ತೀವ್ರ ಅಸ್ವಸ್ಥಗೊಂಡ ಯುವಕನನ್ನು ಕುಟುಂಬಸ್ಥರು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಯುವಕ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ರೋಗ ಲಕ್ಷಣವನ್ನು ಗೂಗಲ್ ಮಾಡಿದ, ಕ್ಯಾನ್ಸರ್ ಅಂತ ಹೆದರಿ ಸಾಯಲು ಯತ್ನಿಸೋದಾ?

Follow Us:
Download App:
  • android
  • ios