ವಿಡಿಯೋ ದೃಶ್ಯದಲ್ಲಿ ಮೂವರು ಮಹಿಳೆಯರ ಹಿಂದೆ ಹೋಗುವ ವ್ಯಕ್ತಿ ಬಳಿಕ ಅವರೊಂದಿಎಗ ಮಾತುಕತೆ ನಡೆಸಲು ಆರಂಭಿಸುತ್ತಾರೆ. ಮಾತಿನ ನಡುವೆಯೇ ಪಿಸ್ತೂಲ್ ತೆಗೆದುಕೊಳ್ಳುವ ಆತ ಇಬ್ಬರು ಮಹಿಳೆಯರಿಗೆ ಗುಂಡಿಕ್ಕಲ್ಲಿದ್ದು, ಬಳಿಕ ತಾನೂ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡಿರುವುದು ದಾಖಲಾಗಿದೆ.
ಪಟನಾ (ಏ.29): ವ್ಯಕ್ತಿಯೊಬ್ಬ ತನ್ನ ವಿಚ್ಛೇದಿತ ಪತ್ನಿ (ex-wife) ಹಾಗೂ ಮಗಳಿಗೆ (daughter) ಗುಂಡಿಕ್ಕಿದ್ದಲ್ಲದೆ, ಕೊನೆಗೆ ತಾನೂ ಗುಂಡಿಕ್ಕಿಕೊಂಡು ಆತ್ಮಹತ್ಯೆ(suicide) ಮಾಡಿಕೊಂಡ ಪ್ರಕರಣ ಬಿಹಾರದ ಪಾಟ್ನಾದ ಗರ್ದಾನಿ ಭಾಗ್ (Gardanibagh ) ಪ್ರದೇಶದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗರ್ದಾನಿಬಾಗ್‌ನ ಐಷಾರಾಮಿ ಪೊಲೀಸ್ ಕಾಲೋನಿಯಲ್ಲಿ ಮಧ್ಯಾಹ್ನದ ಸುಮಾರಿಗೆ ಈ ಘಟನೆ ನಡೆದಿದ್ದು, ರಾಜೀವ್ ಕುಮಾರ್ (Rajeev Kumar) ಎಂದು ಗುರುತಿಸಲಾದ ವ್ಯಕ್ತಿ ತನ್ನ ಮಗಳು ಸಂಸ್ಕೃತಿ ಮತ್ತು ನಂತರ ತನ್ನ ಮಾಜಿ ಪತ್ನಿ ಶಶಿಪ್ರಭಾಗೆ ಗುಂಡು ಹಾರಿಸಿ ಸಾಯಿಸಿದ ಬಳಿಕ, ತನ್ನನ್ನು ತಾನೇ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಾಗ ಪ್ರಭಾ ಅವರ ತಾಯಿಯೊಂದಿಗೆ ಇಬ್ಬರೂ ಕುಟುಂಬ ಸಮಾರಂಭವೊಂದರಲ್ಲಿ ಭಾಗವಹಿಸಿ ಬೇಗುಸರಾಯ್‌ನಿಂದ ಹಿಂತಿರುಗುತ್ತಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಪ್ರತ್ಯಕ್ಷದರ್ಶಿಯೊಬ್ಬರು ಈ ಘಟನೆಯನ್ನು ನೋಡಿದ್ದು, ನಾವು ಅವರ ಹೇಳಿಕೆಗಳನ್ನು ದಾಖಲಿಸಿದ್ದೇವೆ. ನಾವು ಅಪರಾಧದ ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಪಡೆದುಕೊಂಡಿದ್ದೇವೆ' ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಎಂಎಸ್ ಧಿಲ್ಲೋನ್ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೂವರು ಮಹಿಳೆಯರನ್ನು ಹಿಂದಿಕ್ಕುತ್ತಿರುವುದು ಕಂಡುಬಂದಿದೆ. ಬ್ಯಾಗ್ ಅನ್ನು ಬೆನ್ನಿನ ಮೇಲೆ ಹೊತ್ತಿರುವ ವ್ಯಕ್ತಿ, ಅವರಿಬ್ಬರೊಂದಿಗೆ ಸಂಕ್ಷಿಪ್ತವಾಗಿ ಜಗಳವಾಡುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ, ಅವನು ಒಂದು ರಿವಾಲ್ವರ್ ತೆಗೆದುಕೊಂಡು ಚಿಕ್ಕ ಹುಡುಗಿಯನ್ನು ಮೊದಲು ಶೂಟ್ ಮಾಡುತ್ತಾನೆ. ನಂತರ ತನ್ನನ್ನು ತಾನೇ ಶೂಟ್ ಮಾಡುವ ಮೊದಲು ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಮಹಿಳೆಗೂ ಶೂಟ್ ಮಾಡುವುದು ದಾಖಲಾಗಿದೆ.ಮಹಿಳೆಯ ತಾಯಿ ಎಂದು ಗುರುತಿಸಲ್ಪಟ್ಟಿರುವ ಮೂರನೇಯ ಮಹಿಳೆ ಈ ಅಘಾತದಿಂದ ನೆಲದ ಮೇಲೆ ಕುಸಿದು ಬೀಳುವ ದೃಶ್ಯವೂ ಇದರಲ್ಲಿದೆ.
'ತನಿಖೆಯ ಸಂದರ್ಭದಲ್ಲಿ, ರಾಜೀವ್ ತನ್ನ ಮೊದಲ ಹೆಂಡತಿ ತೀರಿಕೊಂಡ ನಂತರ ತನ್ನ ಸೊಸೆಯನ್ನು ಮದುವೆಯಾಗಿದ್ದನು ಎಂದು ತಿಳಿದು ಬಂದಿದೆ. ಆದಾಗ್ಯೂ, ನಂತರ ದಂಪತಿಗಳು ವಿಚ್ಛೇದನ ಪಡೆದರು. ಮೊದಲ ಹೆಂಡತಿಯಿಂದ ರಾಜೀವ್‌ನ ಮಗಳು ಸಂಸ್ಕೃತಿ ತನ್ನ ತಂದೆಯೊಂದಿಗೆ ಇರಲು ಬಯಸಲಿಲ್ಲ, ಆದರೆ ರಾಜೀವ್ ತನ್ನೊಂದಿಗೆ ಇರಬೇಕೆಂದು ಬಯಸಿದನು. ಇದೇ ಘಟನೆಯ ಹಿಂದಿನ ಪ್ರಮುಖ ಕಾರಣ' ಎಂದು ಎಸ್‌ಎಸ್‌ಪಿ ಹೇಳಿದ್ದಾರೆ. ವಿಚ್ಛೇದನದ ನಂತರ, ಪ್ರಭಾ ಅವರು ವಾಯುಪಡೆಯಲ್ಲಿ ಕೆಲಸ ಮಾಡುವ ವ್ಯಕ್ತಿಯನ್ನು ಮದುವೆಯಾಗಿದ್ದರು ಮತ್ತು ಅವರೊಂದಿಗೆ ಬಾಡಿಗೆ ಅಪಾರ್ಟ್ಮೆಂಟ್ ಪೊಲೀಸ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಪತ್ನಿಯನ್ನು ಭೇಟಿ ಮಾಡುವ ಅವಕಾಶ ನೀಡದ ತಾಯಿಯನ್ನು ಕೊಂದ ಮಗ!
ಕೆಲ ದಿನಗಳ ಹಿಂದೆ ಗುರುಗ್ರಾಮದಲ್ಲೂ ಇಂಥದ್ದೇ ಪ್ರಕರಣ ವರದಿಯಾಗಿತ್ತು. ಕೌಟುಂಬಿಕ ಕಲಹ (domestic discord) ಹಾಗೂ ನಿರುದ್ಯೋಗದಿಂದಾಗಿ (Unemployment) ಮನನೊಂದ ಯುವಕನೊಬ್ಬ ತನ್ನ ತಾಯಿಯನ್ನು ಚಾಕುವಿನಿಂದ ಇರಿದು (Stab) ಕೊಂದಿದ್ದ. ಇಂಜಿನಿಯರ್ ಆಗಿದ್ದ ಮಗನ ಮನೆಗೆ ಊಟ ಕೊಡಲು ತಾಯಿ ಹೋಗಿದ್ದಳು. ನಂತರ ಇಬ್ಬರೂ ದಾರಿಯಲ್ಲಿ ಪಾರ್ಕ್ ಬಳಿ ನಿಂತು ಮಾತನಾಡುತ್ತಿದ್ದ ವೇಳೆ ಯುವಕ ತನ್ನ ತಾಯಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ. ತನ್ನ ಪತ್ನಿಯನ್ನು ಭೇಟಿ ಮಾಡಲು ತಾಯಿ ಅವಕಾಶ ನೀಡದ ಕಾರಣಕ್ಕಾಗಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
Davanagere ಹೊರಗೆ ಮಲಗಿದ್ದವರನ್ನೇ ಟಾರ್ಗೆಟ್ ಮಾಡಿ ಹತ್ಯೆಗೈಯುತ್ತಿದ್ದ ಸೈಕೊಪಾತ್‌ಗಳು!
ತಾಯಿಯನ್ನು ಚಾಕುವಿನಿಂದ ಇರಿದು ಕೊಂದ 32 ವರ್ಷದ ಇಂಜಿನಿಯರ್‌ನನ್ನು (Engineer ) ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು (Police) ಶುಕ್ರವಾರ ತಿಳಿಸಿದ್ದಾರೆ.ಶಿವಪುರಿ (Shivapuri) ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿ ಮನೀಶ್ ಭಂಡಾರಿ (Manish Bhandari) ಟಿಸಿಎಸ್‌ನಲ್ಲಿ ಉದ್ಯೋಗಿಯಾಗಿದ್ದು, ಕಳೆದ ವರ್ಷ ಲಾಕ್‌ಡೌನ್ ಸಮಯದಲ್ಲಿ ಕೆಲಸ ಕಳೆದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
