Asianet Suvarna News Asianet Suvarna News

ಪತ್ನಿಯನ್ನೇ ಪಣಕ್ಕಿಟ್ಟು ಸೋತು ಕಳುಹಿಸಿಕೊಟ್ಟ.. ಮನೆಗೆ ಬಂದವಳ ಗುಪ್ತಾಂಗಕ್ಕೆ ಆಸಿಡ್ ಹಾಕಿದ!

ಜೂಜುನಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಸೋತ/ ಗೆದ್ದವರ ಜತೆ ಹೆಂಡತಿಯನ್ನೇ ಕಳಿಸಿದ/ ಮನೆಗೆ ಮರಳಿ ಬಂದ ಹೆಂಡತಿಗೆ ಆಸಿಡ್ ಹಾಕಿದ/ ಬಿಹಾರದಿಂದ ಅನಾನುಷ ಘಟನೆ ವರದಿ

bihar man lost his wife in gambling she gangraped mah
Author
Bengaluru, First Published Dec 14, 2020, 6:15 PM IST

ಪಾಟ್ನಾ(ಡಿ. 14) ದ್ವಾಪರ ಯುಗದಲ್ಲಿ ಪಾಂಡವರು ಜೂಜಿನಲ್ಲಿ ದ್ರೌಪತಿಯನ್ನು ಪಣಕ್ಕಿಟ್ಟಿದ್ದು  ಹಳೆಯ ಕತೆ. ಇಲ್ಲೊಬ್ಬ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ. ಜತೆಗೆ ಗೆದ್ದವನ ಜತೆ ಕಳುಹಿಸಿಕೊಟ್ಟಿದ್ದಾನೆ.

ಬಿಹಾರದ ಭಾಗಲ್ಪುರ ಹಸಂಗಂಜ್ ಪ್ರದೇಶದಿಂದ ಘೋರ ಘಟನೆ ವರದಿಯಾಗಿದೆ.  ಜೂಜಾಡುತ್ತಿದ್ದ ಪತಿರಾಯ ಪತ್ನಿಯನ್ನೇ ಪಣಕ್ಕಿಟ್ಟು ಸೋತಿದ್ದಾನೆ.

ಮಾತಿನಂತೆ ಹೆಂಡತಿಯನ್ನು ಗೆದ್ದವರ ಜತೆ ಕಳುಹಿಸಲು ಮುಂದಾದಾಗ ಪತ್ನಿ  ವಿರೋಧಿಸಿದ್ದಾಳೆ. ಆದರೆ  ಕೇಳದೆ ಗಂಡನೇ ಮುಂದಾಗಿ ಅವರೊಂದಿಗೆ ಕಳಿಸಿದ್ದಾನೆ.

ಲಿವ್ ಇನ್ ಗೆಳತಿಗೆ ಮಗ ಬೈಕ್ ಗಿಫ್ಟ್ ಕೊಟ್ಟ..ಸಿಟ್ಟಿಗೆದ್ದ ಅಪ್ಪ ಬೆಂಕಿ ಇಟ್ಟ!

ಹೆಂಡತಿಯನ್ನು ಕರೆದುಕೊಂಡು ಹೋದವರು ಅಮಾನುಷವಾಗಿ ಗ್ಯಾಂಗ್ ರೇಪ್ ಮಾಡಿದ್ದಾರೆ. ತಪ್ಪಿಸಿಕೊಂಡು ಬಂದ ಪತ್ನಿಯ ಮೇಲೆ ಕೆಂಡಾಮಂಡಲವಾದ ಗಂಡ ಆಕೆಯ ಗುಪ್ತಾಂಗಕ್ಕೆ ಆಸಿಡ್ ಹಾಕಿದ್ದಾನೆ. ಇಷ್ಟೆ ಅಲ್ಲದೆ ಆಸಿಡ್ ಕುಡಿಯಲು ಒತ್ತಾಯ ಮಾಡಿದ್ದಾನೆ.

ಕಳೆದ ತಿಂಗಳೇ  ಘಟನೆ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ. ಮಹಿಳೆ ಗಂಡನ  ಹಿಂಸೆಯಿಂದಲೂ ತಪ್ಪಿಸಿಕೊಂಡು ಬಂದು ದೂರು ಕೊಟ್ಟಿದ್ದಾಳೆ.

ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ವಿಚಿತ್ರ ಎಂದರೆ ಮಹಿಳೆ ಕುಟುಂಬದವರು ಮಾತ್ರ ಯಾವ ಹೇಳಿಕೆ ನೀಡಿಲ್ಲ. ಮದುವೆಯಾಗಿ ಹತ್ತು ವರ್ಷವಾದರೂ ಮಕ್ಕಳಾಗಿಲ್ಲ ಎಂದು ಗಂಡ ಮೇಲಿಂದ ಮೇಲೆ  ಹಿಂಸೆ ನೀಡುತ್ತಿದ್ದ ಎಂದು ಮಹಿಳೆ  ಹೇಳಿಕೆ ಕೊಟ್ಟಿದ್ದಾರೆ. 

Follow Us:
Download App:
  • android
  • ios