* ಲೈಂಗಿಕ ದೌರ್ಜನ್ಯವನ್ನು ಪ್ರತಿರೋಧಿಸಿದ ಮಹಿಳೆ* ಮಹಿಳೆಯ ಮೇಲೆ ನಡೆಯಿತು ಭೀಕರ ಹಲ್ಲೆ* ಭೋಪಾಲ್ಮ‌ನ ಹಿಳೆ ಮುಖಕ್ಕೆ 118 ಸ್ಟಿಚ್‌

ಭೋಪಾಲ್‌(ಜೂ.13): ಲೈಂಗಿಕ ದೌರ್ಜನ್ಯವನ್ನು ಪ್ರತಿರೋಧಿಸಿದ ಮಹಿಳೆಯ ಮೇಲೆ ಪುರುಷರ ಗುಂಪೊಂದು ಪೇಪರ್‌ ಕಟ್ಟರ್‌ನಿಂದ ದಾಳಿ ಮಾಡಿದ ಬಳಿಕ ಆಕೆ ಶಸ್ತ್ರಚಿಕಿತ್ಸೆ ಒಳಗಾಗಿದ್ದು, ಮುಖಕ್ಕೆ 118 ಹೊಲಿಗೆ ಹಾಕಲಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ.

ಭೋಪಾಲದ ಟಿಟಿ ನಗರದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಶ್ರೀ ಸಾಯಿ ಪ್ಯಾಲೇಸ್‌ ಹೊಟೇಲಿಗೆ ಹೋಗಿದ್ದಳು. ಪಾರ್ಕಿಂಗ್‌ನಲ್ಲಿ ಕೆಲ ಪುರುಷರು ಗುಂಪಾಗಿ ನಿಂತಿದ್ದು, ಮಹಿಳೆಯ ಬಗ್ಗೆ ಅಶ್ಲೀಲ ಮಾತುಗಳನ್ನಾಡಿದರು. ಆಕೆ ಸಿಟ್ಟಿಗೆದ್ದು 3 ಪುರುಷರ ಕಪಾಳಕ್ಕೆ ಬಾರಿಸಿ, ಆಕೆ ಪತಿಯೊಂದಿಗೆ ಹೊಟೇಲಿಗೆ ಹೋಗಿದ್ದಳು.

ಇದಕ್ಕೆ ಪ್ರತಿಕಾರವಾಗಿ ಆಕೆ ಹೊಟೇಲಿನಿಂದ ಹೊರಬಂದಿದ್ದೇ ಪುರುಷರ ಗುಂಪು ಪೇಪರ್‌ ಕಟ್ಟರ್‌ ಬಳಸಿ ಆಕೆಯ ಮೇಲೆ ದಾಳಿ ಮಾಡಿದ್ದಾರೆ. ಪತಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಮಹಿಳೆಯ ಮುಖಕ್ಕೆ 118 ಹೊಲಿಗೆ ಹಾಕಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಮಹಿಳೆಯನ್ನು ಭೇಟಿ ಮಾಡಿ ಆಕೆಯ ಸಾಹಸವನ್ನು ಪ್ರಶಂಸಿಸಿ, ಆಕೆಗೆ 1 ಲಕ್ಷ ರು. ಪುರಸ್ಕಾರ ಘೋಷಿಸಿದ್ದಾರೆ. ಅಲ್ಲದೇ ಆಕೆಯ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಭರಿಸುವುದಾಗಿ ಮಾತುಕೊಟ್ಟಿದ್ದಾರೆ. ಈ ದುಷ್ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.