ಮುಂಬೈ(ಜ.  19)  ಕಿರಾತಕರು ಯಾವ ಯಾವ ಆಧಾರದಲ್ಲಿ ಹಣ ಮಾಡುತ್ತಾರೆಯೋ ಗೊತ್ತಿಲ್ಲ. ಪ್ರೇಮಿಗಳ ದಿನವನ್ನು ಅವರ ಬಂಡವಾಳ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ವ್ಯಾಲೈಂಟೈನ್ಸ್ ಡೇ ದಿನ ಪ್ರೇಮಿಗಳಿಗೆ ಉಚಿತ ಆತಿಥ್ಯ ನೀಡುತ್ತೇವೆ ಎಂದು ಹೋಟೆಲ್ ತಾಜ್ ಘೋಷಣೆ ಮಾಡಿದೆ! ಇದು  ಸುಳ್ಳು ಸುದ್ದಿ ಎಂಬುದು ಗೊತ್ತಾಗಲು  ಜಾಸ್ತಿ ಸಮಯ  ಬೇಕಾಗಲಿಲ್ಲ.

ಮುಂಬೈ;  ನಟಿ ಬಾತ್‌ ರೂಂಗೆ ನುಗ್ಗಿ ಆಕೆ ಎದುರೆ ಹಸ್ತಮೈಥುನ ಮಾಡಿಕೊಂಡ!

ತಾಜ್ ನಲ್ಲಿ ನನಗೆ ಏಳು ದಿನಗಳ ಉಚಿತ ಆತಿಥ್ಯ ಸಿಕ್ಕಿದೆ ಎಂಬ ಮೆಸೇಜ್ ಕ್ಷಣ ಮಾತ್ರದಲ್ಲಿ ವೈರಲ್ ಆಗಿದ್ದು ಹೋಟೆಲ್ ತಾಜ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ. ನನಗೆ ಆಫರ್ ಸಿಕ್ಕಿದೆ ಎಂಬ ಸಂದೇಶದ ಜತೆ ಲಿಂಕ್ ಒಂದು ಅಡಗಿ ಕುಳಿತುಕೊಂಡಿತ್ತು. ಹೆಚ್ಚಿನ ಮಾಹಿತಿ ಎಂದು ಕ್ಲಿಕ್ ಮಾಡಿದರೆ ಅವರ ಡೇಟಾ ಕದಿಯುವ ಉದ್ದೇಶ ಕಿರಾತಕರದ್ದಾಗಿತ್ತು ಎಂದು ಮುಂಬೈ ಸೈಬರ್ ಪೊಲೀಸರು ಕ್ಷಣಮಾತ್ರದಲ್ಲಿ ಪತ್ತೆ ಹಚ್ಚಿದ್ದಾರೆ.

 ದೀಪಾವಳಿ ಸಂದರ್ಭದಲ್ಲಿಯೂ ಇದೇ ತೆರನಾದ ಪೇಕ್ ಲಿಂಕ್ ಗಳನ್ನು ಹರಿಯಬಿಡಲಾಗಿತ್ತು. ಆಫರ್ ಆಸೆಗೆ ನಂಬಿ ಕ್ಲಿಕ್ ಮಾಡಿದರೆ ನಿಮ್ಮ ಮೊಬೈಲ್ ಡೇಟಾಗಳು ಕಿತಾರಕರ ಪಾಲಾಗುವುದು ಖಚಿತ ಎಚ್ಚರ..