ಹಲವು ದಿನಗಳಿಂದ ಹಿಂದೆ ಬಿದ್ದು ಪ್ರೀತಿ ಮಾಡಿದರೂ ತನ್ನ ಪ್ರೀತಿ ನಿರಾಕರಣೆ ಮಾಡಿದಳೆಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಬೆಂಗಳೂರು (ಜು.24): ಬೆಂಗಳೂರಿನಲ್ಲಿ ಕೋಟ್ಯಂತರ ಜನರು ವಾಸವಾಗಿದ್ದಾರೆ. ಇಲ್ಲಿ ಬೀದಿಗೆ ಹತ್ತಾರು ಪ್ರೀತಿ ಮಾಡುವ ಜೋಡಿಗಳಿರುವುದು ಸರ್ವೇ ಸಾಮಾನ್ಯವಾಗಿದೆ. ಆದರೆ. ಇಲ್ಲೊಬ್ಬ ಯುವಕ ತಾನು ಹಲವು ದಿನಗಳಿಂದ ಹಿಂದೆ ಬಿದ್ದು ಪ್ರೀತಿ ಮಾಡಿದರೂ ಕೂಡ ಯುವತಿ ತನ್ನ ಪ್ರೀತಿಯನ್ನು ನಿರಾಕರಣೆ ಮಾಡಿದಳೆಂದು ಆತ್ಮಹತ್ಯೆ ಮಾಡಿಕೊಂಡಿಡುವ ದುರ್ಘಟನೆ ಮಹಾಲಕ್ಷ್ಮಿ ಲೇಔಟ್‌ನಲ್ಲಿ ನಡೆದಿದೆ.

ಹೌದು, ಇಂದಿನ ಯುವಜನರು ಮೊಬೈಲ್‌, ಟ್ಯಾಪ್‌, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಎಲೆಕ್ಟ್ರಾನಿಕ್‌ ಸಾಧನಗಳನ್ನು ಹೊಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟೀವ್‌ ಆಗಿದ್ದಾರೆ. ಇನ್ನು ಬೈಕ್‌ ಹಾಗೂ ಕಾರು ಇಟ್ಟುಕೊಂಡು ಶೋಕಿ ಮಾಡುವುದೂ ಕೂಡ ಸಾಕಷ್ಟಿದೆ. ಆದರೆ, ಜೀವನಶೈಲಿ ಎಷ್ಟೇ ಮುಂದುವರೆದಿದ್ದರೂ ಪ್ರೀತಿ ಮಾತ್ರ ಮನಸ್ಸುಗಳಿಗೆ ಸಂಬಂಧಿಸಿದ್ದಾಗಿದ್ದು, ಪರಸ್ಪರ ಇಬ್ಬರೂ ಪ್ರೀತಿ ಮಾಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಇನ್ನು ಒನ್‌ಸೈಡ್‌ ಲವ್‌ ಸ್ಟೋರಿಗಳಿಗೆ ಬೆಲೆಯೇ ಇರುವುದಿಲ್ಲ. ಆದರೆ, ಇಲ್ಲೊಬ್ಬ ಯುವಕ ಒನ್‌ಸೈಡ್‌ ಲವ್‌ ಮಾಡಿ, ಹಡುಗಿ ಮುಂದೆ ಹೇಳಿಕೊಂಡಾಗ ಪ್ರೀತಿ ನಿರಾಕರಣೆ ಮಾಡಿದ್ದಾಳೆ, ಇದನ್ನು ಸಹಿಸಿಕೊಳ್ಳದೇ ಮನನೊಂದು ಯುವಕ ವಿಷ ಸೇವನೆ ಮಾಡಿದ್ದಾನೆ.

ಪ್ರೀತಿ ಮಾಡೋದ್‌ ತಪ್ಪೇನಿಲ್ಲಾ.. ಆದ್ರೆ, ಪ್ರಿಯಕರ ಕೈಕೊಟ್ಟ ಅಂತ ಸಾಯೋದ್‌ ತಪ್ಪಲ್ವಾ!

ಡೆತ್‌ ನೋಟ್‌ ಬರೆದಿಟ್ಟಿ ವಿಷ ಸೇವನೆ: ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರೀತಿ ನಿರಾಕರಣೆ ಹಿನ್ನಲೆ ಡೆತ್ ನೋಟ್ ಬರೆದು ಯುವಕ ಆತ್ಮಹತ್ಯೆ ಶರಣಾಗಿದ್ದಾನೆ, ಮೃತ ಯುವಕ ನವೀನ್ (27) ಎಂಬಾತನಾಗಿದ್ದಾನೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ನವೀನ್ ಕುಟುಂಬಸ್ಥರಿಂದ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಸದ್ಯ ಮೃತ ದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಪರಿಶೀಲನೆ ವೇಳೆ ಪ್ರಿಯತಮೆ ಹೆಸರನ್ನ ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾನೆ.

ಪ್ರೀತಿಸಿದ ಹುಡುಗ ಬೇರೊಂದು ಹುಡುಗಿ ಜೊತೆಗೆ ಸುತ್ತಾಟ: ಮನನೊಂದು ಯುವತಿ ಸಾವು: ಮೈಸೂರು (ಜು.23): ಪ್ರೀತಿ ಮಾಡೋದ್‌ ತಪ್ಪೇನಿಲ್ಲಾ.. ಎನ್ನುವ ರವಿಚಂದ್ರನ್‌ ಅವರ ಸಿನಿಮಾದ ಆಹಡನ್ನು ಕೇಳಿ ಪ್ರೀತಿ ಮಾಡಿದ ಎಷ್ಟೋ ಪ್ರೇಮಿಗಳು ಧೈರ್ಯವಾಗಿ ಮದುವೆಯಾಗಿ ಜೀವನ ಕಟ್ಟಿಕೊಂಡಿದ್ದಾರೆ. ಆದರೆ, ಇಲ್ಲೊಬ್ಬ ಯುವತಿ ತಾನು ಪ್ರೀತಿ ಮಾಡಿದ ಯುವಕ ಬೇರೊಂದು ಹುಡುಗಿಯೊಂದಿಗೆ ಸುತ್ತಾಡುವುದನ್ನು ನೋಡಿ ಸಹಿಸದೇ ಮನನೊಂದು ಇಲಿ ಪಾಷಾಣ ಸೇವಿಸಿ ಸಾವನ್ನಪ್ಪಿದ್ದ ದುರ್ಘಟನೆ ಮೈಸೂರಿನಲ್ಲಿ ನಡೆದಿದೆ. ಪ್ರೀತಿಸಿದ ಹುಡುಗ ಮತ್ತೊಬ್ಬಳ ಹಿಂದೆ ಸುತ್ತಾಡಿದ ಹಿನ್ನಲೆಯಲ್ಲಿ ಡೆತ್ ನೋಟ್ ಬತೆದಿಟ್ಟು ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಇಲ್ಲಿ ಪಾಷಾಣ ತಿಂದ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಈಗ ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ. ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೃತ ಯುವತಿ ನಿಸರ್ಗ(20) ಆಗಿದ್ದಾಳೆ. ಇನ್ನು ಮೃತ ಯುವತಿ ನಿಸರ್ಗ ಕೆ.ಆರ್. ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು.

Bengaluru crime: ಕೈಕೊಡಲು ಯತ್ನಿಸಿದ ಪ್ರೇಮಿಗೆ ಇರಿದ ಪ್ರೇಯಸಿ!,ಇದೆಂಥ ಪ್ರೀತಿ?

ಮತ್ತೊಬ್ಬ ಹುಡುಗಿ ಪೋಷಕರೊಂದಿಗೆ ಗಲಾಟೆ: ಈ ಘಟನೆ ನಡೆದ ನಂತರವೂ ಸುಮ್ಮನಿರದ ಯುವತಿ ನಿಸರ್ಗ ತಮ್ಮ ಪ್ರೀತಿ ವಿಚಾರವನ್ನು ಇನ್ನೊಂದು ಹುಡುಗಿಯ ಪೋಷಕರಿಗೆ ತಿಳಿಸಿದ್ದರು. ಅವನು ತನ್ನನ್ನು ಪ್ರೀತಿಸುತ್ತಿದ್ದು, ನೀವು ನಿಮ್ಮ ಮಗಳ ಪ್ರೀತಿಗೆ ಸಪೋರ್ಟ್‌ ಮಾಡಬೇಡಿ ಎಂದು ಗಲಾಟೆ ಮಾಡಿದ್ದಳು. ಈ ವೇಳೆ ಇನ್ನೊಬ್ಬ ಯುವತಿಯ ಪೋಷಕರು ನಿಸರ್ಗಳಿಗೆ ಕೆಟ್ಟದಾಗಿ ನಿಂದಿಸಿ ಸಾಯುವಂತೆ ಪ್ರೇರಣೆ ಮಾಡಿದ್ದಾರೆ ಎಂದೂ ಡೆತ್‌ನೋಟ್‌ನಲ್ಲಿ ಆರೋಪ ಮಾಡಿದ್ದಾಳೆ. ಇನ್ನು ಯುವತಿ ಡೆತ್ ನೋಟ್ ಬರೆದು ಬ್ಯಾಗ್ ನಲಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.