ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವನ್ನಪ್ಪಿದ್ದಾರೆ. ಲವ್ ಫೇಲ್ಯೂರ್ ಆಗಿದ್ದ ನಂದಿನಿ, ಸ್ನೇಹಿತರೊಂದಿಗೆ ಕಟ್ಟಡದ ಮೇಲೆ ಮದ್ಯಪಾನ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬೆಂಗಳೂರು (ಜೂ.24): ರಿಷಬ್‌ ಶೆಟ್ಟಿ ನಿರ್ದೇಶನದ, ರಕ್ಷಿತ್‌ ಶೆಟ್ಟಿ, ರಶ್ಮಿಕಾ ಮಂದಣ್ಣ ಹಾಗೂ ಸಂಯುಕ್ತಾ ಹೆಗ್ಡೆ ನಟಿಸಿದ್ದ ಕಿರಿಕ್‌ ಪಾರ್ಟಿ ಸಿನಿಮಾ ನೆನಪಿರಬೇಕು. ಆ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಟಿಸಿದ್ದ ಸಾನ್ವಿ ಪಾತ್ರ ಅಂತ್ಯವಾಗುವ ರೀತಿಯಲ್ಲೇ ಬೆಂಗಳೂರಿನಲ್ಲಿ ಮಹಿಳೆಯೊಬ್ಬಳ್ಳ ಸಾವಾಗಿದೆ.

ಪರಪ್ಪನ ಅಗ್ರಹಾರ ಪೊಲೀಸ್‌ ಠಾಣಾ ವ್ಯಾಪ್ತಿಯ ಚೂಡಸಂದ್ರದ ಬಳಿ ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಯುವತಿ ಸಾವು ಕಂಡಿದ್ದಾರೆ.

ಆಂಧ್ರ ಪ್ರದೇಶ ಮೂಲದ 23 ವರ್ಷದ ನಂದಿನಿ ಮೃತ ಯುವತಿ. ಸ್ನೇಹಿತರ ಜೊತೆ ಕಟ್ಟಡದ ಮೇಲೆ ತೆರಳಿದ್ದ ಯುವತಿ, ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಆಯತಪ್ಪಿ ಕೆಳಗೆ ಬಿದ್ದು ಸಾವು ಕಂಡಿದ್ದಾರೆ. ಸ್ಥಳಕ್ಕೆ ಪರಪ್ಪನ ಅಗ್ರಹಾರ ‌ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದರು.

ಸ್ನೇಹಿತರನ್ನು ವಿಚಾರಣೆ ನಡೆಸಿದ ಬಳಿಕ ಪೊಲೀಸರಿಗೆ ಸಾಕಷ್ಟು ವಿವರಗಳು ಗೊತ್ತಾಗಿದೆ. ಮೃತ ನಂದಿನಿಗೆ ಲವ್ ಫೇಲ್ಯೂರ್ ಆಗಿತ್ತು. 12 ವರ್ಷದ ಲವ್‌ ಮುರಿದು ಬಿದ್ದ ನೋವಿನಲ್ಲಿ ಆಕೆ ಇದ್ದಳು.

ಹೀಗಾಗಿ ಅದೇ ಫೀಲಿಂಗ್ ನಲ್ಲಿ ಸ್ನೇಹಿತರ ಜೊತೆ ನಿರ್ಮಾಣ ಹಂತದ ಕಟ್ಟಡದ ಮೇಲೆ ಯುವತಿ ಮದ್ಯಪಾನ ಮಾಡಲು ತೆರಳಿದ್ದಳು. ನಿರ್ಮಾಣ ಹಂತದ ಕಟ್ಟಡದಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಆಕೆ ಕುಡಿಲು ಮುಂದಾಗಿದ್ದಳು.

ಖಾಸಗಿ ಕಂಪನಿಯಲ್ಲಿ ನಂದಿನಿ ಕೆಲಸ ಮಾಡುತ್ತಿದ್ದಳು ಎನ್ನುವುದು ಗೊತ್ತಾಗಿದೆ. ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತರ ಜೊತೆ ಕಟ್ಟಡದ ಮೇಲೆ ಕುಡಿಯಲು ಹೋಗಿದ್ದಳು. ಈ ವೇಳೆ ಕುಡಿದು ರೀಲ್ಸ್ ಸ್ನೇಹಿತರು ರೀಲ್ಸ್‌ ಮಾಡಿದ್ದಾರೆ. ಈ ಹಂತದಲ್ಲಿ ನಂದಿನಿ ಕಟ್ಟಡದ ಮೇಲಿನಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ಸಾವು ಕಂಡಿದ್ದಾಳೆ.