ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ತಂದೆ ಅಳಲು/ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಗನ ಪೋಟೋ ಹಿಡಿದುಕ್ಕೊಂಡು ಬಂದ ತಂದೆ/  ವಾರಾಂತ್ಯ ನಿಷೇಧಾಜ್ಞೆ  ಇದ್ದ ಕಾರಣಕ್ಕೆ  ಸ್ವಂತ ಊರಿಗೆ ಬರುತ್ತಿದ್ದ ‌ಮಗ/ ಕೊರೋನಾ ಹೆದರಿ ಬೆಂಗಳೂರು ಬಿಟ್ಟಿದ್ದ ಮಗ  ಮನೆಗೆ  ಜೀವಂತ ಮನೆಗೆ ಮುಟ್ಟಲಿಲ್ಲ.

ಧಾರವಾಡ(ಏ. 27) ಮಗನ ಸಾವಿಗೆ ನ್ಯಾಯ ಸಿಗಬೇಕು ಎಂದು ತಂದೆ ಅಳುತ್ತಿರುವ ದೃಶ್ಯ ಸದ್ಯದ ಕರಾಳ ವ್ಯವಸ್ಥೆಯನ್ನು ನಮ್ಮ ಮುಂದೆ ಇಡುತ್ತಿದೆ. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಮಗನ ಪೋಟೋ ಹಿಡಿದು ತಂದೆ ರೋದಿಸುತ್ತಿದ್ದಾರೆ

ವಿಕೆಂಡ್‌ ನಿಷೇಧಾಜ್ಞೆ ಇದ್ದ ಕಾರಣಕ್ಕೆ ಮಗ ಬೆಂಗಳೂರಿನಿಂದ ಬರುವವನಿದ್ದ. ಆದರೆ ಮನೆಗೆ ಬಂದಿದ್ದು ಆತನ ಸಾವಿನ ಸುದ್ದಿ. ಕೊರೋನಾ ಹೆದರಿ ಬೆಂಗಳೂರು ಬಿಟ್ಟಿದ್ದ ಮಗ ಮನೆ ಮುಟ್ಟಿಲ್ಲ. ಅಂಧ ಮಗನಿಗಾಗಿ ತಂದೆ ಉಮೇಶ ಕುಲಕರ್ಣಿ ಕಣ್ಣೀರು ಹಾಕುತ್ತಿದ್ದಾರೆ. ಕಿತ್ತೂರು ತಾಲೂಕಿನ ಹೊಣ್ಣಿದಿಬ್ಬ ಗ್ರಾಮದ ಯುವಕ ರವಿವಾರ ರಾತ್ರಿ ಬೆಂಗಳೂರಿನಿಂದ ಧಾರವಾಡಕ್ಕೆ ಹೊರಟಿದ್ದರು. ಆದರೆ ಬಸಯ್ಯ ಕುಲಕರ್ಣಿ ಮನೆ ಸೇರಿಲ್ಲ.

ಬಟ್ಟೆ ತೊಳೆಯಲು ಕೆರೆಗೆ ಇಳಿದ ವಿಜಯಪುರ ಸಹೋದರರು ನೀರು ಪಾಲು

ಸೋಮವಾರ ಬೆಳಿಗ್ಗೆ 6:15 ಕ್ಕೆ ಧಾರವಾಡ ಜುಬಲಿ ಸರ್ಕಲ್ ಗೆ ಯುವಕ ಬಂದು ಇಳಿದಿದ್ದರು ಎಂಬ ಮಾಹಿತಿ ಇದೆ. ಆದರೆ ಸೋಮವಾರ ಸಂಜೆ ಬಸಯ್ಯ ಕುಲಕರ್ಣಿ ಸಾವಿನ ಸುದ್ದಿ ಹಬ್ಬಿದೆ . *ಮನೆಯವರಿಗೆ ವಿದ್ಯಾಗಿರಿ ಪೋಲಿಸರು ಮಂಗಳವಾರ ಬೆಳಿಗ್ಗೆ ಕರೆ ಮಾಡಿ ನಿಮ್ಮ ಮಗ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಕೆ ಎಲ್ ಇ ನಿಜಲಿಂಗಪ್ಪ ಕಾಲೇಜಿನಲ್ಲಿ ಬಿ ಎ ದ್ವಿತಿಯ ಓದುತ್ತಿದ್ದ ಬಸಯ್ಯ ಕುಲಕರ್ಣಿ ಅನುಮಾನಾಸ್ಪದ ರೀತಿ ಸಾವು ಕಂಡಿದ್ದಾರೆ ಸ್ನೆಹ ದೀಪ ಅಂಧ ಮಕ್ಕಳ‌ ವಸತಿ ನಿಲಯ ಬೆಂಗಳೂರಿನಲ್ಲಿ ವಾಸವಿದ್ದರು.

ನನ್ನ ಮಗನ ಸಾವಿಗೆ ಕಾರಣ ಎನೂ ಎಂದು ಗೊತ್ತಾಗಿಲ್ಲ. ಪೋಲಿಸರು ಹೃದಯಾಘಾತ ಎಂದು ಹೇಳುತ್ತಿದ್ದಾರೆ. ಆದರೆ ನನ್ನ ಮನಗ ಸಾವಿಗೆ ಸೂಕ್ತ ಕಾರಣ ಗೊತ್ತಾಗಬೇಕು ಎಂದು ತಂದೆ ಉಮೇಶ ಕುಲಕರ್ಣಿ ಒತ್ತಾಯ ಮಾಡಿದ್ದಾರೆ.