ಬೆಂಗಳೂರು(ಜು. 14) 'ಮಹಿಳೆಯರ ಜತೆ ಲೈಂಗಿಕ ಕ್ರಿಯೆ ಮಾಡಿದ್ರೆ ಹಣ ಕೊಡ್ತೇನೆ'   ಇದನ್ನು ನಂಬಿದವ ಭಾರೀ ವಂಚನೆಗೆ ಒಳಗಾಗಿದ್ದಾನೆ. ನೋಂದಣಿ ನೆಪದಲ್ಲಿ ಇಂಜಿನಿಯಯರ್ ಒಬ್ಬರಿಂದ ಬರೋಬ್ಬರಿ 83  ಸಾವಿರ ರೂ. ಪಡೆದುಕೊಂಡು ಟೋಪಿ ಹಾಕಿದ್ದಾರೆ.

ಅಮೃತಹಳ್ಳಿ ನಿವಾಸಿ  26  ವರ್ಷದ ಇಂಜಿನಿಯರ್ ದೂರು ದಾಖಲಿಸಿದ್ದಾರೆ. ಲಾಕ್ ಡೌನ್ ಕಾರಣಕ್ಕೆ ಇಂಜಿನಿಯರ್ ಕೆಲಸ ಮಾಡುತ್ತಿದ್ದ ಕೆಲವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಮುಂದಿನ ದಿನಗಳಲ್ಲಿ ತನಗೂ ಇದೇ ಸ್ಥಿತಿ ಬರಬಹುದು ಎಂದು ಆತಂಕದಲ್ಲಿದ್ದ.

ಅಪರಿಚಿತಳ ಜತೆ ಸೆಕ್ಸ್ ನಲ್ಲಿರುವಾಗಲೇ ಹಾರ್ಟ್ ಅಟ್ಯಾಕ್; ಪರಿಹಾರ ಕಟ್ಗೋಡಿ ಎಂದ ಕೋರ್ಟ್

ಜಾಲತಾಣವೊಂದರಲ್ಲಿ ಸಿಕ್ಕ ನಂಬರ್ ಗೆ ಕರೆ ಮಾಡಿ ಕೆಲಸ ಇದೆಯಾ ಎಂದು ವಿಚಾರಿಸಿದ್ದಾರೆ.  ಕೆಲಸ ಇದೆ, ಮಹಿಳೆಯರ ಜತೆ ಲೈಂಗಿಕ ಕ್ರಿಯೆ ನಡೆಸಬೇಕು, ನಿಮಗೆ ನಾವೇ ಹಣ ಕೊಡುತ್ತೇವೆ ಎಂದು ಹೇಳಲಾಗಿದೆ. ಇದಕ್ಕಾಗಿ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಇದನ್ನು ನಂಬಿದ ಇಂಜಿನಿಯರ್ ಹಣ ಹಾಕಿದ್ದಾರೆ. ಹಂತಹಂತವಾಗಿ ಇಂಜಿನಿಯರ್ ರಿಂದ  83  ಸಾವಿರ ರೂ. ಪಡೆದುಕೊಳ್ಳಲಾಗಿದೆ.  ನಂತರ ಕರೆ ಮಾಡುತ್ತಿದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ. ಈಗ ಹಣ ಕಳೆದುಕೊಂಡ ವ್ಯಕ್ತಿ ಪೊಲೀಸರ ಮೊರೆ ಹೋಗಿದ್ದಾರೆ.