ಹುತಾತ್ಮ ಮಿಲಿಟರಿ ಮ್ಯಾನ್ ಪುತ್ರಿಯ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಿದ್ದ ಖದೀಮರನ್ನು ಒಂದೇ ಗಂಟೆಯಲ್ಲಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರು, (ಅ.24): ಹೊಸಕೋಟೆ ತಾಲೂಕಿನ ಸೂಲಿಬೆಲೆಯ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಿದ್ದ ದುಷ್ಕರ್ಮಿಯನ್ನು ಕೇವಲ ಒಂದೇ ಗಂಟೆಯಲ್ಲಿ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಜುನಾಥ್ ಅಲಿಯಾಸ್ ಶ್ಯಾಮಣ್ಣ (40) ಬಂಧಿತ ಆರೋಪಿ. ಹುತಾತ್ಮ ಯೋಧನ ಪುತ್ರಿ ಮೇಘನಾ ಎನ್ನುವರ ಪೆಟ್ರೋಲ್‌ ಮೇಲೆ ನಿನ್ನೆ (ಶುಕ್ರವಾರ) ಏಕಾಏಕಿ ದಾಳಿ ಮಾಡಿ ಪರಾರಿಯಾಗಿದ್ದರು. 

19ರ ಯುವತಿ ಹತ್ಯೆ ಕೇಸ್‌ಗೆ ಹೊಸ ಟ್ವಿಸ್ಟ್ : ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಪಡೆ

ಈ ಬಗ್ಗೆ ಮೇಘನಾ ಅವರು ದೂರು ನೀಡಿದ ಒಂದೇ ಗಂಟೆಯಲ್ಲಿ ಬೆಂಗಳೂರು ಗ್ರಾಮಾಂತರ ಪೊಲೀಸರು,ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Scroll to load tweet…

ಆರೋಪಿ ಮಂಜುನಾಥ್ ವಿರುದ್ಧ ಪೊಲೀಸರು ಕಲಂ 307, 341, 504, 506 ಜೊತೆಗೆ ಐಪಿಸಿ 149 ಸೆಕ್ಷನ್ ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ.

Scroll to load tweet…